ದೇಶ-ಪ್ರಪಂಚ

ನಕಲಿ ಮದ್ಯ ಸೇವಿಸಿ 18 ಮಂದಿ ದುರಂತ ಅಂತ್ಯ,ಆರೋಗ್ಯ ಇಲಾಖೆ ಹೇಳಿದ್ದೇನು?

ನ್ಯೂಸ್ ನಾಟೌಟ್ : ನಕಲಿ ಮದ್ಯ ಸೇವಿಸಿ 18 ದುರಂತ ಅಂತ್ಯ ಕಂಡಿರುವ ಘಟನೆ ಹರ್ಯಾಣದಿಂದ ವರದಿಯಾಗಿದೆ. ಒಟ್ಟು 3 ಗ್ರಾಮಗಳಲ್ಲಿ 18 ಮಂದಿ ಉಸಿರು ಚೆಲ್ಲಿದ್ದಾರೆಂದು ತಿಳಿದು ಬಂದಿದೆ.ಹೌದು, ಹರ್ಯಾಣದಲ್ಲಿ ಕಳೆದ 4 ದಿನಗಳಲ್ಲಿ ಈ ಘಟನೆ ಸಂಭವಿಸಿದೆ.ಬಿಹಾರ ಮತ್ತು ಯುಪಿಯಲ್ಲಿ ವಿಷಪೂರಿತ ಮದ್ಯದಿಂದ ಈ ದುರಂತ ಹೆಚ್ಚಾಗಿ ಸಂಭವಿಸುತ್ತಿದ್ದ ಬೆನ್ನಲ್ಲೇ ಇದೀಗ ಹರ್ಯಾಣದಲ್ಲಿಯೂ ಈ ದುರ್ಘಟನೆ ನಡೆದಿದ್ದು ಎಲ್ಲರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ಮಂಡೆಬರಿ, ಪಂಜೆಟೊ ಕಾ ಮಜ್ರಾ ಮತ್ತು ಸರನ್ ಗ್ರಾಮದಲ್ಲಿ ಇದುವರೆಗೆ 18 ಜನರು ಬಾರದ ಲೋಕಕ್ಕೆ ತೆರಳಿದ್ದಾರೆ.

ಈ ಸುದ್ದಿ ಕೇಳಿ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ಪ್ರಕರಣದ ಬಗ್ಗೆ ಮಾಹಿತಿ ಬಂದ ತಕ್ಷಣ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದೆ. ಆಶಾ ಕಾರ್ಯಕರ್ತೆಯರು ಹಾಗೂ ವೈದ್ಯರು ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.ಮದ್ಯ ಸೇವಿಸಿದವರು ಖಂಡಿತ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.ಇದಲ್ಲದೇ ಫೋರೆನ್ಸಿಕ್ ತಂಡವು ಸ್ಥಳಕ್ಕೆ ತೆರಳಿ ಚಿತಾಭಸ್ಮದ ಮಾದರಿಗಳನ್ನು ಸಂಗ್ರಹಿಸಿದೆ ಆದರೆ ಕುಟುಂಬ ಸದಸ್ಯರು ಇನ್ನೂ ಆಘಾತದಿಂದ ಹೊರಬಂದಿಲ್ಲ.ಕೇವಲ 27 ವರ್ಷ ವಯಸ್ಸಿನ ರವೀಂದ್ರ ಕುಮಾರ್ ಅವರು ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ ಈಗ ಕುಟುಂಬಕ್ಕೆ ದಿಕ್ಕೇ ತೋಚದಂತಾಗಿದೆ.ರವೀಂದ್ರನ ತಂದೆ ಮತ್ತು ಸಹೋದರ ಈಗಾಗಲೇ ದುರಂತ ಅಂತ್ಯ ಕಂಡಿದ್ದಾರೆ. ಅಕ್ಕಪಕ್ಕದವರು, ಬಂಧುಗಳು ಈಗ ಮನೆಗೆ ಬಂದು ಕುಟುಂಬಕ್ಕೆ ಧೈರ್ಯ ತುಂಬುತ್ತಿದ್ದಾರೆ.ಮದ್ಯದಂಗಡಿಗಳಿಗೆ ಆಡಳಿತ ಮಂಡಳಿ ಮೊಹರು ಹಾಕಿದ್ದು, ಯಾರ ಮನೆಯಲ್ಲಿಯಾದರೂ ಒಂದೇ ಒಂದು ಬಾಟಲಿ ಮದ್ಯವಿದ್ದರೆ ಬಿಸಾಡಿ ಎಂದು ಸಮೀಪದ ಗ್ರಾಮಗಳಿಗೂ ಮಾಹಿತಿ ರವಾನಿಸಲಾಗಿದೆ.

ಮನೆ-ಮನೆಗೆ ತೆರಳಿ ಸಮೀಕ್ಷೆ ನಡೆಸಿ ಅನಾರೋಗ್ಯ ಪೀಡಿತರಿಗೆ ಔಷಧ ನೀಡಲಾಗುತ್ತಿದೆ. ಅವರನ್ನು ಪರೀಕ್ಷಿಸಲಾಗುತ್ತಿದ್ದು, ಮದ್ಯಪಾನ ಮಾಡದಂತೆ ಮನವಿ ಮಾಡಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದು, ವ್ಯಕ್ತಿಯನ್ನು ಬಂಧಿಸಲಾಗಿದೆ.

Related posts

ಗಗನಸಖಿಯಂತೆ ಇನ್ಮುಂದೆ ಬಸ್ಸಲ್ಲೂ ಬರಲಿದ್ದಾಳೆ ಸಖಿಯರು..! ಏನಿದು ಸರ್ಕಾರದ ಹೊಸ ಯೋಜನೆ..? ಇಲ್ಲಿದೆ ಸಂಪೂರ್ಣ ಮಾಹಿತಿ

ಗ್ರಾಮ ಪಂಚಾಯಿತಿ ಕಚೇರಿಯೊಳಗೆ ಸಿಬ್ಬಂದಿ ಕಿಸ್ಸಿಂಗ್..! ಫೋಟೋ ವೈರಲ್ ಆದ ಬಳಿಕ ಮಹಿಳೆಯಿಂದ ಕೇಸ್ ದಾಖಲು..!

ಗ್ರಾಹಕರೇ ಚಿಂತಿತರಾಗಬೇಡಿ, ಗೋಬಿ ಬ್ಯಾನ್​ ಆಗಿಲ್ಲ..! ಇದರ ಅಸಲಿ ಕಥೆಯೆ ಬೇರೆ ಇದೆ,ಏನದು? ಇಲ್ಲಿದೆ ರಿಪೋರ್ಟ್‌…