ದೇಶ-ಪ್ರಪಂಚ

ಮೋದಿ ಅವರನ್ನು ‘ಸುಪ್ರೀಂ ನಟ’ ಎಂದು ಹೇಳಿದ್ಯಾಕೆ ಪ್ರಕಾಶ್‌ ರಾಜ್‌?ಇದರ ಹಿಂದಿನ ಮರ್ಮವೇನು?

ನ್ಯೂಸ್ ನಾಟೌಟ್ : ಮೊನ್ನೆಯಷ್ಟೇ ( ನವೆಂಬರ್‌ 19ರಂದು) ನಡೆದ ವಿಶ್ವಕಪ್‌ ಕ್ರಿಕೆಟ್‌ನ  ಫೈನಲ್‌ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತ್ತು.ಇದಕ್ಕೆ ಇಡೀ ದೇಶವೇ ಬೇಸರವನ್ನು ವ್ಯಕ್ತಪಡಿಸಿದ್ದರು.ಆದರೆ ಆ ಪಂದ್ಯದ ಬಳಿಕ ಟೀಮ್‌ ಇಂಡಿಯಾ ಆಟಗಾರರನ್ನು ಭೇಟಿಯಾದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಬಳಿ ಹೋಗಿ ಸಾಂತ್ವನ ಹೇಳಿದ್ದರು.ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು.ಈ ವಿಡಿಯೋಗೆ ಇದೀಗ ಬಹುಭಾಷಾ ನಟ ಪ್ರಕಾಶ್‌ ರಾಜ್‌ ಮೋದಿ ಅವರನ್ನು ಟೀಕಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಕಾಶ್‌ ರಾಜ್‌, ʼʼಭಾರತದ ಹೀನಾಯ ಸೋಲಿನ ಬಳಿಕ ಸುಪ್ರೀಂ ನಟನ ಸ್ಟ್ರಿಪ್ಟ್‌ ತಲೆ ಕೆಳಗಾಗಿದೆ. ಇದು ಆರಂಭವಷ್ಟೇ. ಇನ್ನೂ ಈ ರೀತಿಯ ಘಟನೆ ನಡೆಯಲಿಕ್ಕಿದೆʼʼ ಎಂದು ಮೋದಿ ಅವರನ್ನು ಉದ್ದೇಶಿಸಿ ವ್ಯಂಗ್ಯವಾಡಿದ್ದಾರೆ.

ಏನಿದು ಟ್ವೀಟ್‌?:ಅಮೋಕ್‌ ಎಂಬ ಹೆಸರಿನ ಎಕ್ಸ್‌ ಖಾತೆಯಲ್ಲಿ ಈ ಪೋಸ್ಟ್‌ನ್ನು ಸೇರ್ ಮಾಡಲಾಗಿತ್ತು.ಇದಕ್ಕೆ ಪ್ರತಿಕ್ರಿಯೆ ನೀಡಿದ ನಟ ಪ್ರಕಾಶ್‌ ರಾಜ್‌ ʼರಾಜಸ್ಥಾನದ ಬಿಜೆಪಿ ನಾಯಕರೊಬ್ಬರು ಕಾಂಗ್ರೆಸ್‌ ನಾಯಕ ಸುಪ್ರಿಯಾ ಶ್ರೀನೇತ್‌ ಅವರಿಗೆ ಅಚ್ಚರಿಯ ಮಾಹಿತಿಯೊಂದನ್ನು ಹೇಳಿದ್ದಾರೆ. ವಿಶ್ವಕಪ್‌ ಫೈನಲ್‌ ಪಂದ್ಯಕ್ಕೂ ಮೊದಲೇ ರಾಜಸ್ಥಾನ ಬಿಜೆಪಿ ಬ್ಯಾನರ್‌ಗಳನ್ನು ಮುದ್ರಿಸಿತ್ತು. ಇದರಲ್ಲಿ ವಿಜಯದ ಸಂಕೇತದ ಜತೆಗೆ ಮೋದಿ ಅವರ ಫೋಟೊ ಕೂಡ ಇತ್ತು. ಚುನಾವಣಾ ಬ್ಯಾನರ್‌ಗಳನ್ನು ತೆಗೆದು ಹಾಕಿ ಆಟಗಾರರ ಜತೆಗೆ ಮೋದಿ ಇರುವ ಫೋಟೊಗಳನ್ನು ಹಾಕಲು ಯೋಜನೆ ರೂಪಿಸಲಾಗಿತ್ತು. ಅಲ್ಲದೆ ಜೈಪುರದಲ್ಲಿ ತೆರೆದ ಬಸ್‌ನಲ್ಲಿ ಕಪ್‌ ಜತೆಗೆ ಟೀಂ ಇಂಡಿಯಾ ಆಟಗಾರರು ಮೋದಿ ಅವರೊಂದಿಗೆ ರೋಡ್‌ ಶೋ ನಡೆಸಲು ಪ್ಲ್ಯಾನ್‌ ಮಾಡಿಕೊಳ್ಳಲಾಗಿತ್ತು ಎಂದಿದ್ದಾರೆʼ.ಇವಿಷ್ಟು ʼಮಾತ್ರವಲ್ಲ ಬಿಜೆಪಿ ಮುಖಂಡ ಚಿತ್ರಗಳನ್ನು ಸುಪ್ರಿಯಾ ಶ್ರೀನೇತ್‌ ಅವರಿಗೆ ತೋರಿಸಿ, ಈ ಬಗ್ಗೆ ಯಾರೊಂದಿಗೂ ಹಂಚಿಕೊಳ್ಳಬೇಡಿ ಎಂದಿದ್ದರು. ಒಂದು ವೇಳೆ ಭಾರತ ವಿಶ್ವಕಪ್‌ ಗೆದ್ದಿದ್ದರೆ ಬಿಜೆಪಿ ಯಾವ ರೀತಿ ವರ್ತಿಸುತ್ತಿತ್ತು? ಅಲ್ಲದೆ ವಿಶ್ವಕಪ್‌ ಫೈನಲ್‌ನಲ್ಲಿ ಸೋತ ಬಳಿಕವೂ ಬಿಜೆಪಿ ಪ್ರಚಾರ ಮಾಡುವುದನ್ನು ಬಿಡಲಿಲ್ಲʼ ಎಂದು ಅಮೋಕ್‌ ಪೋಸ್ಟ್‌ನಲ್ಲಿ ಬರೆಯಲಾಗಿದೆ. ಇದಕ್ಕೆ ಪ್ರಕಾಶ್‌ ರಾಜ್‌ ಪ್ರತಿಕ್ರಿಯೆ ನೀಡಿದ್ದರು. ಸದ್ಯ ಈ ವಿಚಾರದ ಬಗ್ಗೆ ಪರ-ವಿರೋಧ ಚರ್ಚೆ ನಡೆಯುತ್ತಿದೆ.

Related posts

ಆಕಾಶದಲ್ಲಿ ಹಾರುತ್ತಿರುವಾಗ ಪೈಲಟ್ ಗೆ ಹೃದಯಾಘಾತ, ಬಾಂಗ್ಲಾ ವಿಮಾನ ತುರ್ತು ಭೂ ಸ್ಪರ್ಶ ಮಾಡಿದ್ದೆಲ್ಲಿ?

ತನ್ನ ಮೊಬೈಲ್ ಕದ್ದವರ ಜತೆಯೇ ಡೀಲಿಂಗ್..! ವ್ಯಾಪಾರಿಯ ಚಾಣಕ್ಯತೆಗೆ ಪೊಲೀಸರೇ ಫಿದಾ..!

ಗಂಗಾ ನದಿಯಲ್ಲಿ ಒಂದೇ ಕುಟುಂಬದ 17 ಮಂದಿ ಇದ್ದ ದೋಣಿ ಮುಳುಗಡೆ..! 6 ಮಂದಿ ನಾಪತ್ತೆ..!