ಸುಳ್ಯ

ಸುಳ್ಯ: ರಾಷ್ಟ್ರ ಮಟ್ಟದ ಯೋಗಾಸನ ಚಾಂಪಿಯನ್‌ ಶಿಪ್‌ ಸ್ಪರ್ಧೆಯಲ್ಲಿ ಸೋನಾ ಅಡ್ಕಾರ್‌ ದ್ವಿತೀಯ

ನ್ಯೂಸ್‌ ನಾಟೌಟ್‌: ಬೆಂಗಳೂರಿನಲ್ಲಿ ಭಾನುವಾರ (ಜ.7) ನಡೆದ ರಾಷ್ಟ್ರ ಮಟ್ಟದ 8ರಿಂದ 12ರ ವಯೋಮಾನದ ಬಾಲಕಿಯರ ಯೋಗಾಸನ ಚಾಂಪಿಯನ್‌ ಶಿಪ್‌ ಸ್ಪರ್ಧೆಯಲ್ಲಿ ಸುಳ್ಯ ಸೈಂಟ್‌ ಜೋಸೆಫ್‌ ಆಂಗ್ಲ ಮಾಧ್ಯಮ ಶಾಲೆಯ ಐದನೇ ತರಗತಿ ವಿದ್ಯಾರ್ಥಿನಿ ಸೋನಾ ಅಡ್ಕಾರ್‌ ದ್ವಿತೀಯ ಸ್ಥಾನ ಪಡೆದಿದ್ದಾಳೆ.

ಈಕೆ ಎ. 14ರಿಂದ 16ರವರೆಗೆ ಮಲೇಶಿಯಾದಲ್ಲಿ ನಡೆಯುವ ಅಂತಾರಾಷ್ಟ್ರೀಯ ಯೋಗಾಸನ ಚಾಂಪಿಯನ್‌ ಶಿಪ್‌ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ. ಈಕೆ ಜಾಲ್ಸೂರು ಗ್ರಾಮದ ಶರತ್‌ ಅಡ್ಕಾರು ಮತ್ತು ಶ್ರೀಮತಿ ಶೋಭಾ ಶರತ್‌ ದಂಪತಿಯ ಪುತ್ರಿ. ಈಕೆಗೆ ಯೋಗ ಶಿಕ್ಷಕ ಸಂತೋಷ್‌ ಮುಂಡುಕಜೆ ತರಬೇತಿ ನೀಡುತ್ತಿದ್ದಾರೆ.

Related posts

ಸುಳ್ಯ: ಯಶಸ್ವಿ 2 ನೇ ವ‍ರ್ಷಕ್ಕೆ ಪಾದಾರ್ಪಣೆಗೈದ ‘ಗೋಕುಲಂ’ ವಸ್ತ್ರ ಮಳಿಗೆ,’ಬಿಗ್ ಡಿಸ್ಕೌಂಟ್ ಮೇಳ’ದಲ್ಲಿ ಆಕರ್ಷಕ ದರದಲ್ಲಿ ಮುದ್ದು ಮಕ್ಕಳ ಬಟ್ಟೆಗಳು ಲಭ್ಯ

ಜುಲೈ 19 ರಂದು ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿ ಹಬ್ಬ ಆಚರಣೆ,ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಿಂದ ಮಾಹಿತಿ

ಸುಳ್ಯ: ಕಾಂಗ್ರೆಸ್ ನಾಯಕ ಮಿಥುನ್‌ ರೈ ಹುಟ್ಟು ಹಬ್ಬ ಪ್ರಯುಕ್ತ ಅಂಗನವಾಡಿ ಮಕ್ಕಳಿಗೆ ಸಿಹಿ ತಿಂಡಿ ವಿತರಣೆ ,ಪುಟಾಣಿ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಸೆಲ್ಫಿ ತೆಗೆದು ಸಂಭ್ರಮ ವ್ಯಕ್ತ ಪಡಿಸಿದ ನ.ಪಂ.ಸದಸ್ಯ..!