ಕರಾವಳಿ

ರಾಷ್ಟ್ರೀಯ ಹೆದ್ದಾರಿಯಲ್ಲಿ ಕಸ ಎಸೆದ ಕಿಡಿಗೇಡಿಗಳು

ಗೂನಡ್ಕ: ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಸ ಬಿಸಾಕಿ ಹೋಗುವ ಕಿಡಿಗೇಡಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ನಿನ್ನೆ ರಾತ್ರಿ ಅಪರಿಚಿತರು ಗೂನಡ್ಕ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ರಾತ್ರಿ ಕಸ ಎಸೆದು ಹೋಗಿದ್ದಾರೆ. ಸುಮಾರು ಅರ್ಥ ಲೋಡ್ ಕಸ ಇತ್ತು ಎಂದು ಅಂದಾಜಿಸಲಾಗಿದೆ.

ತಕ್ಷಣ ಕಾರ್ಯಪ್ರವೃತ್ತರಾದ ಸಂಪಾಜೆ ಗ್ರಾಮ ಪಂಚಾಯತ್ ಆಡಳಿತ ವರ್ಗ ತಂಡ ತಮ್ಮ ಸಿಬ್ಬಂದಿಯನ್ನು ಕಳಿಸಿ ಕಸವನ್ನು ತೆಗೆಸಿ ಸ್ಥಳವನ್ನು ಸ್ವಚ್ಛಗೊಳಿಸಿದ್ದಾರೆ. ಇಂತಹ ಪ್ರಕರಣಗಳು ಗ್ರಾಮ ಪಂಚಾಯತ್ ಸಂಪಾಜೆ ವ್ಯಾಪ್ತಿಯಲ್ಲಿ ಪದೇ ಪದೇ ನಡೆಯುತ್ತಿದ್ದು ಸ್ಥಳೀಯ ಪೊಲೀಸರು ಮುಂದಾದರೂ ಎಚ್ಚೆತ್ತುಕೊಂಡು ಕಿಡಿಗೇಡಿಗಳ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳುವರೇ ಎನ್ನುವುದನ್ನು ಕಾದು ನೋಡಬೇಕಿದೆ.

Related posts

ಪುತ್ತೂರು: ಪಕ್ಷೇತರ ಅಭ್ಯರ್ಥಿ ಅರುಣ್‌ ಕುಮಾರ್‌ ಪುತ್ತಿಲ ಪ್ರಣಾಳಿಕೆ ಬಿಡುಗಡೆ

ಸುಳ್ಯ:ಸೌಜನ್ಯ ನ್ಯಾಯದ ಕೂಗು.. ಸುಳ್ಯದ ಮುಖ್ಯ ರಸ್ತೆಯತ್ತ ಸಾಗಿ ಬಂದ ವಾಹನ ಜಾಥಾ..

ಬಿ.ಎಂ. ಮುಮ್ತಾಝ್ ಆಲಿ ಅಗಲುವಿಕೆಗೆ ಎಸ್‌ಡಿಪಿಐ ಸಂತಾಪ, ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಹೇಳಿದ್ದೇನು..?