ದೇಶ-ಪ್ರಪಂಚ

ಒಡಿಶಾದ ಆರೋಗ್ಯ ಸಚಿವರನ್ನು ಗುಂಡಿಟ್ಟು ಹತ್ಯೆ ಮಾಡಿದ ಎ.ಎಸ್.ಐ ಮಾನಸಿಕ ಅಸ್ವಸ್ಥ!, ಹೊಸ ತಿರುವು ಪಡೆದುಕೊಂಡ ಪ್ರಕರಣ

ನ್ಯೂಸ್ ನಾಟೌಟ್ : ಒಡಿಶಾದ ಆರೋಗ್ಯ ಸಚಿವ ನಬಾ ಕಿಶೋರ್ ದಾಸ್ ಅವರ ಮೇಲೆ ಎಎಸ್ ಐ ಗೋಪಾಲಕೃಷ್ಣ ದಾಸ್ ಐದು ಸುತ್ತು ಗುಂಡಿನ ದಾಳಿ ನಡಿಸಿದ್ದರು ಎಂಬ ಆರೋಪವಿದ್ದು, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಚಿವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.ಒಡಿಶಾ ಆರೋಗ್ಯ ಸಚಿವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ ಎಎಸ್​ಐ ಗೋಪಾಲಕೃಷ್ಣ ದಾಸ್​ಗೆ ಮೊದಲೇ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.

ಎಎಸ್ ಐ ಮಾನಸಿಕ ಅಸ್ವಸ್ಥ?

ಇದೀಗ‌ ಹತ್ಯೆ ಆರೋಪಿ ಎಎಸ್ ಐ ಗೋಪಾಲಕೃಷ್ಣ ದಾಸ್ ಮನೋವೈದ್ಯರಿಂದ ಬೈಪೋಲಾರ್ ಡಿಸಾರ್ಡರ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು ಎಂದು ವರದಿ ತಿಳಿಸಿದೆ.ಮಾನಸಿಕ ಅಸ್ವಸ್ಥತೆಯ ಇರುವ ದಾಸ್‌ಗೆ ಹೇಗೆ ಸೇವಾ ರಿವಾಲ್ವರ್ ನೀಡಲಾಗಿದೆ ಮತ್ತು ಬ್ರಜರಾಜನಗರದ ಪೊಲೀಸ್ ಪೋಸ್ಟ್‌ನ ಉಸ್ತುವಾರಿಯಾಗಿ ನೇಮಿಸಲಾಗಿದೆ ಎಂಬ ಪ್ರಶ್ನೆ ಮೂಡಿದೆ.

ಡಿಸಾರ್ಡರ್‌ನಿಂದ ಬಳಲುತ್ತಿದ್ದ ಎಎಸ್ ಐ:

ಎಂಕೆಸಿಜಿ ಮೆಡಿಕಲ್ ಕಾಲೇಜಿನ ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಚಂದ್ರಶೇಖರ್ ತ್ರಿಪಾಠಿ ಮಾತನಾಡಿ, ಗೋಪಾಲಕೃಷ್ಣ ಬೈಪೋಲಾರ್ ಡಿಸಾರ್ಡರ್‌ನಿಂದ ಬಳಲುತ್ತಿದ್ದಾರೆ.ಹತ್ತು ವರ್ಷಗಳ ಹಿಂದೆ ನನ್ನ ಕ್ಲಿನಿಕ್‌ಗೆ ಮೊದಲ ಬಾರಿಗೆ ಭೇಟಿ ನೀಡಿದ್ದರು.ಅವರು ಬೇಗ ಕೋಪಗೊಳ್ಳುತ್ತಿದ್ದರು.ಇದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ನಿಯಮಿತವಾಗಿ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದಾರೆಯೇ ಎಂದು ನನಗೆ ಖಚಿತವಿಲ್ಲ. ನಿಯಮಿತವಾಗಿ ಔಷಧಿ ತೆಗೆದುಕೊಳ್ಳದಿದ್ದರೆ, ರೋಗವು ಮತ್ತೆ ಕಾಣಿಸಿಕೊಳ್ಳುತ್ತದೆ.ಅವರು ನನ್ನನ್ನು ಭೇಟಿಯಾಗಿ ಒಂದು ವರ್ಷ ಕಳೆದಿದೆ ಎಂದಿದ್ದಾರೆ.ಬೈಪೋಲಾರ್ ಡಿಸಾರ್ಡರ್ ಎನ್ನುವುದು ಮಾನಸಿಕ ಆರೋಗ್ಯದ ಸ್ಥಿತಿಯಾಗಿದ್ದು, ತಜ್ಞರ ಪ್ರಕಾರ ಹೈಪರ್-ಮೇನಿಯಾದಿಂದ ಖಿನ್ನತೆಯವರೆಗಿನ ತೀವ್ರ ಮನಸ್ಥಿತಿಯನ್ನು ಉಂಟುಮಾಡುತ್ತದೆ. ಆದರೆ, ಆಪ್ತಸಮಾಲೋಚನೆ ಸೇರಿದಂತೆ ಚಿಕಿತ್ಸೆಯಿಂದ ರೋಗವನ್ನು ನಿಯಂತ್ರಿಸಬಹುದು ಎಂದು ಹೇಳಿದರು.

ಒಡಿಶಾದ ಝಾರಸುಗುಡ ಜಿಲ್ಲೆಯ ಬ್ರಜರಾಜನಗರ್​ನ ಗಾಂಧಿ ಚಕ ಎಂಬಲ್ಲಿ ಭಾನುವಾರ ಮಧ್ಯಾಹ್ನ 12:30ಕ್ಕೆ ಪೊಲೀಸ್ ಅಧಿಕಾರಿ ಎಎಸ್​ಐ ಗೋಪಾಲ್ ಚಂದ್ರ ದಾಸ್ ಸಚಿವರ ಎದೆಗೆ ಗುಂಡು ಹಾರಿಸಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು ಚಿಕಿತ್ಸೆ ಫಲಕಾರಿಯಾಗದೇ ಸಚಿವರು ಕೊನೆಯುಸಿರೆಳೆದಿದ್ದಾರೆ.

Related posts

ಲಿಫ್ಟ್‌ ಹತ್ತಿ ಅಪಾರ್ಟ್‌ಮೆಂಟ್ ಜನರನ್ನು ಭೇಟಿಯಾಗುವ ಬೆಕ್ಕು..!,’ಮಿಯಾಯ್’ ಕೂಗಿದರೆ ಮೂರನೇ ಮಹಡಿಗೆ ಹೋಗುತ್ತದೆ ಎಂದರ್ಥ..!ಮುದ್ದಾದ ಬೆಕ್ಕಿನ ವಿಡಿಯೋ ಇಲ್ಲಿದೆ ವೀಕ್ಷಿಸಿ

ಚಂದ್ರನ ಬಳಿಕ ಸೂರ್ಯನೆಡೆಗೆ ಇಸ್ರೋ ಗುರಿ;ಮೂಹೂರ್ತ ಫಿಕ್ಸ್, ಆದಿತ್ಯ-ಎಲ್1 ಉಡಾವಣೆ ಯಾವಾಗ?

ಅಮರ್ ಅಲ್ಲಾ ಮಸೀದಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ, ಕುತೂಹಲ ಮೂಡಿಸಿದ ಮೋದಿ ಪ್ರವಾಸ