ದೇಶ-ಪ್ರಪಂಚದೇಶ-ವಿದೇಶರಾಜಕೀಯರಾಜ್ಯವೈರಲ್ ನ್ಯೂಸ್

NDA ಸಂಸದೀಯ ಸಭೆಯಲ್ಲಿ ಮೈತ್ರಿ ನಾಯಕನ ಅಧಿಕೃತ ಆಯ್ಕೆ, ಸಂಸತ್ ಭವನದಲ್ಲಿ ಮಾತನಾಡಿದ ಚಂದ್ರಬಾಬು ನಾಯ್ಡು ಮತ್ತು ನಿತೀಶ್​ ಕುಮಾರ್ ಹೇಳಿದ್ದೇನು..?

ನ್ಯೂಸ್ ನಾಟೌಟ್ : ನರೇಂದ್ರ ಮೋದಿ ದೆಹಲಿಯಲ್ಲಿ ಶುಕ್ರವಾರ(ಜೂ.7) ನಡೆದ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಸಭೆಯಲ್ಲಿ ಸರ್ವಾನುಮತದಿಂದ ನಾಯಕನಾಗಿ ಮತ್ತು ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ 3ನೇ ಅವಧಿಗೆ ದೇಶದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಸಭೆಯಲ್ಲಿ ಬಿಜೆಪಿಯ ಹಿರಿಯ ನಾಯಕ ಪ್ರಹ್ಲಾದ್ ಜೋಶಿ ಮಾತನಾಡಿ, ಇದೇ ಭಾನುವಾರ ಜೂನ್ 9ರಂದು ನರೇಂದ್ರ ಮೋದಿ ದೇಶದ ಮುಂದಿನ ಪ್ರಧಾನಿಯಾಗಿ ಸತತ ಮೂರನೇ ಬಾರಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಖಚಿತಪಡಿಸಿದರು. ಸಮಾರಂಭವು ಜೂನ್ 9 ರಂದು ಸಂಜೆ 6 ಗಂಟೆಗೆ ನಡೆಯಲಿದೆ. ಎನ್‌ಡಿಎ ಸಂಸದರಲ್ಲದೆ, ಮುಖ್ಯಮಂತ್ರಿಗಳು ಸೇರಿದಂತೆ ಮೈತ್ರಿಕೂಟದ ಹಿರಿಯ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಭೆಯಲ್ಲಿ ಮಾತನಾಡಿದ ಚಂದ್ರಬಾಬು ನಾಯ್ಡು, ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ, ಮೋದಿ ಸರಿಯಾದ ಸಮಯಕ್ಕೆ ಸೂಕ್ತ ನಾಯಕರಾಗಿ ಆಯ್ಕೆಯಾಗಿದ್ದಾರೆ. ಮೋದಿ ನೇತೃತ್ವದಲ್ಲಿ 3ನೇ ಬಾರಿ ಸರ್ಕಾರ ರಚಿಸುತ್ತಿರುವುದು ಐತಿಹಾಸಿಕ ದಿನ ಎಂದು ಬಣ್ಣಿಸಿದರು. ನಿತೀಶ್​ ಕುಮಾರ್ ಮಾತನಾಡಿ, ಮೋದಿ ದೇಶದ ಸೇವೆ ಮಾಡಿದ್ದಾರೆ, ಮುಂದಿನ ಅವಧಿಯಲ್ಲಿ ಏನು ಬಾಕಿ ಉಳಿದಿದೆ ಅದನ್ನು ಮಾಡಲಿದ್ದಾರೆ. ಅಲ್ಲಿ ಇಲ್ಲಿ ವಿರೋಧ ಪಕ್ಷದವರು ಗೆದ್ದಿದ್ದಾರೆ ಮುಂದಿನ ಬಾರಿ ಎಲ್ಲರೂ ಸೋಲಲಿದ್ದಾರೆ. ಮೋದಿಗೆ ಈಗ ಮತ್ತೊಂದು ಅವಕಾಶ ಸಿಕ್ಕಿದೆ ಮತ್ತು ಅವರಿಗೆ ನಮ್ಮ ಬೆಂಬಲವಿದೆ ಎಂದರು.

Click 👇

https://newsnotout.com/2024/06/fake-adhar-identification-for-entry-to-parliament
https://newsnotout.com/2024/06/cinema-and-banned-in-karnataka-and-other-states-for-issue
https://newsnotout.com/2024/06/bescom-employees-and-car-issue-police
https://newsnotout.com/2024/06/father-preparation-for-son-marriage-and-nomore

Related posts

KSRTC ಬಸ್ ಮತ್ತು ಸ್ಕೂಲ್ ಬಸ್ ನಡುವೆ ಭೀಕರ ಅಪಘಾತ..! 3 ವಿದ್ಯಾರ್ಥಿಗಳ ಕಾಲು ತುಂಡು, 2 ಮಕ್ಕಳು ಸ್ಥಳದಲ್ಲೇ ಸಾವು..!

ಅಪ್ಪಿತಪ್ಪಿಯೂ ಈ ದಿನದಂದು ಚಪ್ಪಲಿ ಖರೀದಿಸಲೇಬೇಡಿ..! ಮನೆಗೆ ದರಿದ್ರ ಕಾಡುತ್ತದೆಯಂತೆ..!ಯಾಕೆ ಗೊತ್ತಾ?ಆಸಕ್ತಿಕರ ಮಾಹಿತಿ ಇಲ್ಲಿದೆ ಓದಿ..

ದರ್ಶನ್‌ ಫಾರ್ಮ್ ಹೌಸ್‌ ನೋಡಿಕೊಳ್ಳುತ್ತಿದ್ದ ಮ್ಯಾನೇಜರ್‌ ಆತ್ಮಹತ್ಯೆ ಪ್ರಕರಣಕ್ಕೆ ಮತ್ತೆ ಜೀವ..! ಫಾರ್ಮ್ ಹೌಸ್ ಪಕ್ಕದಲ್ಲೇ ರಕ್ತಕಾರಿ ಸತ್ತಿದ್ದ ಶ್ರೀಧರ್..!