ಕ್ರೈಂವೈರಲ್ ನ್ಯೂಸ್ಸಿನಿಮಾ

ದರ್ಶನ್‌ ಫಾರ್ಮ್ ಹೌಸ್‌ ನೋಡಿಕೊಳ್ಳುತ್ತಿದ್ದ ಮ್ಯಾನೇಜರ್‌ ಆತ್ಮಹತ್ಯೆ ಪ್ರಕರಣಕ್ಕೆ ಮತ್ತೆ ಜೀವ..! ಫಾರ್ಮ್ ಹೌಸ್ ಪಕ್ಕದಲ್ಲೇ ರಕ್ತಕಾರಿ ಸತ್ತಿದ್ದ ಶ್ರೀಧರ್..!

3

ನ್ಯೂಸ್‌ ನಾಟೌಟ್ : ದರ್ಶನ್‌ ಗೆ(Darshan) ಸೇರಿದ ಫಾರ್ಮ್ ಹೌಸ್‌ ನಲ್ಲಿ ಮ್ಯಾನೇಜರ್‌ ಒಬ್ಬ ಆತ್ಮಹತ್ಯೆಗೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಾನಸಿಕ ಖಿನ್ನತೆಗೆ ಒಳಗಾಗಿ ಡೆತ್‌ ನೋಟ್‌ ಬರೆದಿಟ್ಟು ಶ್ರೀಧರ್‌ ಎಂಬವರು ಆನೇಕಲ್ ತಾಲೂಕಿನ ಬಗ್ಗನದೊಡ್ಡಿಯಲ್ಲಿ ಏಪ್ರಿಲ್‌ 16 ರಂದು ಆತ್ಮಹತ್ಯೆಗೆ ಶರಣಾಗಿದ್ದರು.

ಕಲ್ಲು ಬಂಡೆ ಮೇಲೆ ಅನಾಥವಾಗಿ ಶ್ರೀಧರ್ ಮೃತದೇಹ ಪತ್ತೆಯಾಗಿತ್ತು. ಶ್ರೀಧರ್ ಮೃತ ದೇಹ ಕಂಡು ಪೊಲೀಸರಿಗೆ ಸ್ನೇಹಿತ ಮಾಹಿತಿ ನೀಡಿದ್ದರು ಎನ್ನಲಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣ ತನಿಖೆಯ ವೇಳೆ ಈ ಪ್ರಕರಣವೂ ಮತ್ತೆ ಜೀವ ಪಡೆದುಕೊಂಡಿದೆ. ಸುಮಾರು 10 ಎಕರೆ ಪ್ರದೇಶದ ಫಾರ್ಮ್ ಹೌಸ್‌ನಲ್ಲಿ ಸುಮಾರು 1 ವರ್ಷ ಕಾಲ ಶ್ರೀಧರ್‌ ಮ್ಯಾನೇಜರ್‌ ಆಗಿ ಕೆಲಸ ಮಾಡಿದ್ದರು.

ವಿಷ ಸೇವಿಸಿದ ಪರಿಣಾಮ ಫಾರ್ಮ್ ಹೌಸ್ ಪಕ್ಕದಲ್ಲಿ ರಕ್ತಕಾರಿ ಶ್ರೀಧರ್ ಸಾವನ್ನಪ್ಪಿದ್ದರು ಎನ್ನಲಾಗಿದೆ. ಈ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಡೆತ್‌ನೋಟ್‌ನಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದೇನೆ ಎಂದು ಬರೆಯಲಾಗಿತ್ತು. ಪೊಲೀಸ್ ಅಧಿಕಾರಿಗಳು ಈಗ ಆ ಸಾವಿನ ನಿಗೂಢತೆಯ ಬಗ್ಗೆಯೂ ತನಿಖೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.

Click 👇

https://newsnotout.com/2024/06/about-darshan-thoogudeepa-from-umapati-kannada-news-statement
https://newsnotout.com/2024/06/darshan-case-shed-issue-owner-reaction
https://newsnotout.com/2024/06/kodagu-well-elephant-issue-forest-department-kannada-news
https://newsnotout.com/2024/06/darshan-and-team-rowdy-contacts-kannada-news