ಕರಾವಳಿ

“ಕಾಂಗ್ರೆಸ್‌ನವರೇ ಹಿಂದೂಗಳು ಈಗ ಜಾಗೃತರಾಗಿದ್ದಾರೆ, ನಿಮ್ಮ ಒಲೈಕೆಯ ಆಟ ನಡೆಯಲ್ಲ” ಟ್ವಿಟ್ಟರ್‌ನಲ್ಲಿ ನಳಿನ್ ಕುಮಾರ್ ಕಟೀಲ್‌ ಕಿಡಿ

ನ್ಯೂಸ್ ನಾಟೌಟ್: ಮತಾಂತರ ನಿಷೇಧ ಕಾಯ್ದೆಯನ್ನು ರದ್ದು ಮಾಡಿದ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಟ್ವೀಟ್ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.

“ಹಿಂದೂಗಳನ್ನು ಹತ್ತಿಕ್ಕುವ ಕೆಲಸಕ್ಕೆ ಕಾಂಗ್ರೆಸ್ ಕೈ ಹಾಕಿದೆ. ಅಂತಹ ಕೆಲಸ ಮಾಡುತ್ತಿರುವ ಕಾಂಗ್ರೆಸ್ ಗೆ ಧಿಕ್ಕಾರವಿರಲಿ. ಹಿಂದೂಗಳು ಈಗ ಜಾಗೃತರಾಗಿದ್ದಾರೆ. ನಿಮ್ಮ ಒಲೈಕೆಯ ಆಟ ನಡೆಯುವುದಿಲ್ಲ , ಹಿಂದೂಗಳನ್ನು ರದ್ದಿ ಕಾಗದದಂತೆ ಬಳಸುವ ನಿಮ್ಮ ದಾರ್ಷ್ಯಕ್ಕೆ ಶೀಘ್ರವೇ ಉತ್ತರ ಸಿಗಲಿದೆ” ಎಂದು ತಿಳಿಸಿದರು. ಮುಂದುವರಿದು ಮಾತನಾಡಿದ ಕಟೀಲ್ , “ಕಾಂಗ್ರೆಸ್ ಸರಕಾರಕ್ಕೆ ಇನ್ನೂ ಘೋಷಿಸಿದ ಗ್ಯಾರಂಟಿಗಳನ್ನು ಜನರಿಗೆ ತಲುಪಿಸಲು ಸಾಧ್ಯವಾಗಿಲ್ಲ. ಸರಕಾರ ಜಾರಿಗೆ ಬಂದ ತಕ್ಷಣ ಮತಾಂತರ ನಿಷೇಧ ಕಾನೂನನ್ನು ವಜಾ ಮಾಡಿ ತಮ್ಮ ಹಿಂದೂ ದ್ವೇಷವನ್ನು ಜಾಹೀರು ಮಾಡಿದ್ದಾರೆ. ಸಿದ್ದರಾಮಯ್ಯನವರೇ ನಿಮಗೆ ಇದರ ಆತುರ ಏನಿತ್ತು? ಹೈಕಮಾಂಡ್ ಒತ್ತಡವೇ” ಎಂದು ಕಾಂಗ್ರೆಸ್ ಗೆ ಕುಟುಕಿದ್ದಾರೆ. “ಕಾಂಗ್ರೆಸ್‌ನವರೇ ನೀವು ಅಲ್ಪ ಸಂಖ್ಯಾತರ ಓಟುಗಳಿಗಾಗಿ ಸದಾ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತೀರಿ. ಕಾಂಗ್ರೆಸ್ ಬಲವಂತದ ಮತಾಂತರ, ಲವ್ ಜಿಹಾದ್ ನಂತಹ ಪ್ರಕರಣಗಳಿಗೆ ಗ್ರೀನ್ ಸಿಗ್ನಲ್ ನೀಡಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

Related posts

ಕೊಡಗಿನಲ್ಲಿ ಮುಂದುವರಿದ ಮಳೆ ಆರ್ಭಟ – ಶಾಲಾ ಕಾಲೇಜುಗಳಿಗೆ ನಾಳೆಯೂ(25.07) ರಜೆ ಘೋಷಣೆ

ಮತ ಚಲಾಯಿಸುವ ಮುನ್ನ ಪಾದರಕ್ಷೆಯನ್ನು ಕಳಚಿದ ಕಾರ್ಕಳ ಕಾಂಗ್ರೆಸ್ ಅಭ್ಯರ್ಥಿ ಉದಯ ಶೆಟ್ಟಿ ಮುನಿಯಾಲ್

ಸಂಪಾಜೆ, ಕೊಯನಾಡು ರೈತರಿಗೆ ಒಂಟಿ ಆನೆ ಕಾಟ, ಅರಣ್ಯ ಇಲಾಖೆ ಮೌನ