ಕ್ರೈಂಬೆಂಗಳೂರುವೈರಲ್ ನ್ಯೂಸ್

ನಾಗಮಂಗಲ ಹಿಂಸಾಚಾರ ಪ್ರಕರಣದಲ್ಲಿ 52 ಮಂದಿ ಅರೆಸ್ಟ್ ಆಗುತ್ತಿದ್ದಂತೆ ಪ್ರತಿಭಟನೆ..! ”ನಮ್ಮ ಮಕ್ಕಳು ಅಮಾಯಕರು, ಬಿಟ್ಟು ಬಿಡಿ” ಎಂದು ಪೊಲೀಸ್ ಠಾಣೆ ಮುಂದೆ ಸೇರಿದ ಮಹಿಳೆಯರು..!

ನ್ಯೂಸ್ ನಾಟೌಟ್: ಗಣೇಶ ವಿಸರ್ಜನೆ ವೇಳೆ ನಾಗಮಂಗಲದಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಬಂಧಿತರಾಗಿರುವವರನ್ನು ಬಿಟ್ಟುಬಿಡುವಂತೆ ಪೊಲೀಸ್ ಠಾಣೆ ಮುಂದೆ ಸಂಬಂಧಿಕರು ಹೈಡ್ರಾಮಾ ನಡೆಸಿರುವ ಘಟನೆ ಗುರುವಾರ ನಡೆದಿದೆ.

ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣಪತಿ ವಿಸರ್ಜನೆ ವೇಳೆ ನಡೆದ ಕೋಮುಗಲಭೆ ಪ್ರಕರಣದಲ್ಲಿ ಪೊಲೀಸರು ವಶಕ್ಕೆ ಪಡೆದವರ ಕುಟುಂಬಸ್ಥರು ನಾಗಮಂಗಲ ಠಾಣೆಯ ಮುಂದೆ ಹೈಡ್ರಾಮಾ ಮಾಡಿದ್ದು, ಪೊಲೀಸರು ಮನೆಯಲ್ಲಿದ್ದವರನ್ನು ಬಂಧಿಸಿದ್ದಾರೆ. ಕೂಡಲೇ ಅವರನ್ನು ಬಿಟ್ಟುಬಿಡುವಂತೆ ಬಂಧಿತರಿಗೆ ಸಂಬಂಧಿತ ಮಹಿಳೆಯರು ಆಗ್ರಹಿಸಿದ್ದಾರೆ. 52 ಜನರನ್ನು ಬಂಧಿಸಿದ ಪೊಲೀಸರು ವಿಚಾರಣೆಗೆ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ.

ನಾಗಮಂಗಲ ನಗರ ಪೊಲೀಸ್ ಠಾಣೆ ಎದುರು ನೂರಾರು ಮಂದಿ ಮಹಿಳೆಯರು ತಮ್ಮ ಮಕ್ಕಳನ್ನು ವಶಕ್ಕೆ ಪಡೆದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಮಕ್ಕಳನ್ನು ತೋರಿಸಿ, ಅವರನ್ನು ಬಿಡುಗಡೆ ಮಾಡಿ ಎಂದು ಪಟ್ಟು ಹಿಡಿದಿದ್ದು, ಈ ವೇಳೆ ಪೊಲೀಸರು ಹಾಗೂ ಮಹಿಳೆಯರ ನಡುವೆ ವಾಗ್ವಾದ ಕೂಡ ನಡೆದಿದೆ. ಮಹಿಳೆಯರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ.

ಪೊಲೀಸ್ ಠಾಣೆ ಎದುರು ಮಹಿಳೆಯರಿಂದ ದಿಢೀರ್ ಪ್ರತಿಭಟನೆ ನಡೆದಿದ್ದು, ಠಾಣೆಯ ಎದುರಿನ ರಸ್ತೆಯಲ್ಲಿ ಧರಣಿ ಕುಳಿತಿದ್ದಾರೆ. ಬಳಿಕ ಮಹಿಳೆಯರೊಂದಿಗೆ ಮಾತನಾಡಿದ ಇನ್ ಸ್ಪೆಕ್ಟರ್ ನಿರಂಜನ್, ‘ವಿಚಾರಣೆ ಮಾಡಲು ಕರೆತಂದಿದ್ದೇವೆ. ಯಾರು ತಪ್ಪು ಮಾಡಿಲ್ಲ ಅವರನ್ನು ಬಿಟ್ಟು ಕಳುಹಿಸುತ್ತೇವೆ. 144 ಸೆಕ್ಷನ್ ಜಾರಿಯಾಗಿದ್ದು, ಗುಂಪುಗೂಡದೆ ಮನೆಗೆ ತೆರಳಿ ಎಂದು ಮಹಿಳೆಯರನ್ನು ಕಳಿಸಿದ್ದಾರೆ.

Click

https://newsnotout.com/2024/09/namaz-and-ajad-kannada-news-bangla-govt-new-announcement-and-order-to-temples/
https://newsnotout.com/2024/09/first-night-man-ask-adhar-with-girl-jain-caste-kannada-news-viral/
https://newsnotout.com/2024/09/kannada-news-school-girl-arrest-police-rajashekar-arrested/
https://newsnotout.com/2024/09/wayanad-landslide-alive-family-facing-tragedy-kannada-news-marriage/
https://newsnotout.com/2024/09/ganesha-chathurti-conflict-kannada-news-46-are-arrested-kannada-news-d/
https://newsnotout.com/2024/09/kannada-news-ayyappa-temple-onam-celebration-kannada-news/

Related posts

ನನ್ನನ್ನು ರಾಜಕೀಯವಾಗಿ ಮುಗಿಸುವ ಷಡ್ಯಂತ್ರ ನಡೆಯುತ್ತಿದೆ ಎಂದದ್ದೇಕೆ ಡಿಸಿಎಂ..? ಇದರ ಹಿಂದೆ ದೊಡ್ಡ, ದೊಡ್ಡವರ ಪಿತೂರಿ ಇದೆ ಎಂದ ಡಿಕೆಶಿ! ಇಲ್ಲಿದೆ ವಿಡಿಯೋ

ತೊಡೆಯಿಂದ ಕಲ್ಲಂಗಡಿ ಹಣ್ಣುಗಳನ್ನು ಪುಡಿ ಮಾಡಿ ಗಿನ್ನಿಸ್ ದಾಖಲೆ ಬರೆದ ಟರ್ಕಿ ಮಹಿಳೆ..! ಇಲ್ಲಿದೆ ವಿಡಿಯೋ

ದೇವಸ್ಥಾನದ ಕಲ್ಯಾಣಿಯಲ್ಲಿ ನಿಗೂಢ ಶವಗಳು ಪತ್ತೆ..! ಜೋಡಿ ಶವದ ಹಿಂದಿದೆಯಾ ರೋಚಕ ಸ್ಟೋರಿ?