ದೇಶ-ಪ್ರಪಂಚ

ರಾಮಮಂದಿರ ಉದ್ಘಾಟನೆ ದಿನ ಹುಟ್ಟಿದ ಮಗನಿಗೆ ‘ರಾಮ್‌ ರಹೀಮ್‌’ ಎಂದು ಹೆಸರು..! ಈ ಹೆಸರಿನ ಹಿಂದಿರುವ ವಿಶೇಷತೆಯೇನು?

ನ್ಯೂಸ್‌ ನಾಟೌಟ್‌ :  ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರವನ್ನು ಉದ್ಘಾಟಿಸಲಾಗಿದೆ.ಇದರ ಮಧ್ಯೆಯೇ, ಹಲವಾರು ರಾಮಭಕ್ತ ಗರ್ಭಿಣಿಯರು ಅದೇ ದಿನ ಮಗುವಿಗೆ ಜನನವಾಗಲಿ ಎಂದು ಹಂಬಲಿಸಿದ್ದು ಸುಳ್ಳಲ್ಲ..!ಇದಲ್ಲದೇ ಕೆಲವು ಗರ್ಭಿಣಿಯರು ಹೆರಿಗೆ ದಿನಾಂಕ ಒಂದು ವಾರವಿದ್ದರೂ ಇದೇ ದಿನ ಹೆರಿಗೆ ಮಾಡಿಸಿ ಎಂದು ಹೇಳಿದವರೂ ಇದ್ದಾರೆ ಎನ್ನುವ ಸುದ್ದಿ ವರದಿಯಾಗಿತ್ತು.ಹೀಗಿರುವಾಗ ಇಲ್ಲೊಬ್ಬರು ಮುಸ್ಲಿಂ ಮಹಿಳೆ ರಾಮಮಂದಿರ ಲೋಕಾರ್ಪಣೆ ದಿನವಾದ ಸೋಮವಾರವೇ (ಜನವರಿ 22) ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಭಾರಿ ವೈರಲ್ ಆಗಿದೆ.ಮಾತ್ರವಲ್ಲ ಮುಸ್ಲಿಂ ಮಹಿಳೆಯೊಬ್ಬರು, ಆ ಮಗುವಿಗೆ ರಾಮ್‌ ರಹೀಮ್‌ (Ram Rahim) ಎಂದು ಹೆಸರಿಡುವ ಮೂಲಕ ಸೌಹಾರ್ದದ ಸಂದೇಶ ರವಾನಿಸಿದ್ದು,ಎಲ್ಲರೂ ಮೆಚ್ಚಿಕೊಳ್ಳುವ ವಿಚಾರ.

ಹೌದು, ಉತ್ತರ ಪ್ರದೇಶದ ಫಿರೋಜ್‌ಪುರ ಜಿಲ್ಲೆಯಲ್ಲಿ ಫರ್ಜಾನಾ ಎಂಬ ಮಹಿಳೆಯು ಸೋಮವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ರಾಮಲಲ್ಲಾನಿಗೆ ಪ್ರಾಣ ಪ್ರತಿಷ್ಠಾಪನೆ ನೆರವೇರಿಸುವ ದಿನವೇ ಮಗ ಜನಿಸಿದ ಕಾರಣ ಅವರು ರಾಮ್‌ ರಹೀಮ್‌ ಎಂದು ಹೆಸರಿಟ್ಟಿದ್ದಾರೆ. ಫಿರೋಜ್‌ಪುರ ಜಿಲ್ಲಾ ಮಹಿಳಾ ಆಸ್ಪತ್ರೆಯ ಉಸ್ತುವಾರಿ ಡಾ. ನವೀನ್‌ ಜೈನ್‌ ಅವರು ಈ ಕುರಿತು ಮಾಹಿತಿ ನೀಡಿದ್ದು, “ಹೆರಿಗೆ ಬಳಿಕ ತಾಯಿ-ಮಗು ಚೆನ್ನಾಗಿದ್ದಾರೆ. ಮಗುವಿನ ಅಜ್ಜಿ ಹುಸ್ನಾ ಬಾನು ಅವರು ರಾಮ್‌ ರಹೀಮ್‌ ಎಂಬುದಾಗಿ ಹೆಸರಿಟ್ಟಿದ್ದಾರೆ” ಎಂದು ನವೀನ್‌ ಜೈನ್‌ ತಿಳಿಸಿದ್ದಾರೆ.

ಹಿಂದು ಮುಸ್ಲಿಮರ ಏಕತೆಯ ದೃಷ್ಟಿಯಿಂದ ಮೊಮ್ಮಗನಿಗೆ ರಾಮ್‌ ರಹೀಮ್‌ ಎಂಬುದಾಗಿ ಹೆಸರಿಡಲು ಹಸ್ನಾ ಬಾನು ತೀರ್ಮಾನಿಸಿದ್ದಾರೆ. ಇದಕ್ಕೆ ಫರ್ಜಾನಾ ಅವರು ಕೂಡ ಸಮ್ಮತಿ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕುರಿತು ಸುಪ್ರೀಂ ಕೋರ್ಟ್‌ ತೀರ್ಪು ಕೊಟ್ಟ ದಿನ ಹಾಗೂ ರಾಮಮಂದಿರ ಲೋಕಾರ್ಪಣೆ ದಿನವೂ ಹಿಂದು-ಮುಸ್ಲಿಮರು ಯಾವುದೇ ಗಲಾಟೆಯಲ್ಲಿ ತೊಡಗದೆ, ಶಾಂತಿ-ಸೌಹಾರ್ದತೆ ಕಾಪಾಡಿದ್ದಾರೆ. ಈಗ ಮುಸ್ಲಿಂ ಮಹಿಳೆಯು ರಾಮ್‌ ರಹೀಮ್‌ ಎಂದು ಹೆಸರಿಟ್ಟಿರುವುದು ಕೂಡ ಸೌಹಾರ್ದ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.

Related posts

ಅಪ್ಪ ತೋಟಕ್ಕೆಂದು ತಂದ ಕೀಟನಾಶಕವನ್ನು ಜ್ಯೂಸ್ ಎಂದು ಕುಡಿದ ಕಂದಮ್ಮ,2 ವರ್ಷದ ಪುಟ್ಟ ಮಗು ದುರಂತ ಅಂತ್ಯ;ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ

ಟಿ20 ಪಂದ್ಯದಲ್ಲಿ ಭಾರತದ ವಿರುದ್ಧ ಪಾಕ್ ಜಯಕ್ಕೆ ಸಂಭ್ರಮ, ಪತ್ನಿ-ಅತ್ತೆ ವಿರುದ್ಧ ದೂರು..!

ದಿಢೀರ್ ಕುಸಿದು ಬಿದ್ದು ಸಾವನ್ನಪ್ಪಿದ ಮೆಡಿಕಲ್ ಸಿಬ್ಬಂದಿ..! ಸಿಸಿಟಿವಿಯಲ್ಲಿ ಮನಕಲಕುವ ದೃಶ್ಯ ಸೆರೆ, ಇಲ್ಲಿದೆ ವೈರಲ್ ವಿಡಿಯೋ