ಕ್ರೈಂರಾಜ್ಯವೈರಲ್ ನ್ಯೂಸ್

ಜಾತ್ರೆಗೆ ಹೋದ ಶಿಕ್ಷಕಿಯನ್ನು ಮುಸ್ಲಿಂ ಯುವಕ ಅಪಹರಿಸಿದ್ದಾಗಿ ದೂರು ದಾಖಲು..! ಯುವತಿಯ ತಂದೆ ಹೇಳಿದ್ದೇನು..?

ನ್ಯೂಸ್ ನಾಟೌಟ್: ಯುವಕನೊರ್ವ ಅತಿಥಿ ಶಿಕ್ಷಕಿಯನ್ನು ಅಪಹರಿಸಿದ್ದಾನೆ ಎಂಬ ಆರೋಪವೊಂದು ಕೇಳಿ ಬಂದಿದೆ. ಮಗಳ ಅಪಹರಣವಾಗಿದೆ ಎಂದು ಶಿಕ್ಷಕಿ ತಂದೆಯಿಂದ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಗುಡಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಳಸ ಗ್ರಾಮದ ಅಕ್ಷತಾ ಕಳಸೂರು ಅಪಹರಣಕ್ಕೊಳಗಾದ ಅತಿಥಿ ಶಿಕ್ಷಕಿಯಾಗಿದ್ದಾರೆ.

ಹಾವೇರಿ ಜಿಲ್ಲೆಯ ಆಲದಕಟ್ಟಿ ಗ್ರಾಮದ ಸುಬಾನಿ ದೊಡ್ಡಮನಿ ಎಂಬಾತನ ವಿರುದ್ಧ ದೂರು ಕೊಟ್ಟಿದ್ದಾರೆ. ಏಪ್ರಿಲ್ 18 ರಂದು ಯುವತಿಯನ್ನು ಯಾವುದೋ ದುರುದ್ದೇಶದಿಂದ ಅಪಹರಿಸಿದ್ದಾನೆಂದು ಅಕ್ಷತಾ ತಂದೆ ಆರೋಪಿಸಿದ್ದಾರೆ. ನಾಲ್ಕೈದು ವರ್ಷಗಳಿಂದ ಈ ಸುಬಾನಿ ಯುವತಿಯನ್ನು ಹಿಂಬಾಲಿಸುವುದು, ಪೀಡಿಸುವುದು, ದಾರಿಯಲ್ಲಿ ಬರುವಾಗ ಅಡ್ಡಗಟ್ಟುವುದು ಮಾಡುತ್ತಿದ್ದ.

ಈ ಬಗ್ಗೆ ಅಕ್ಷತಾ ತನ್ನ ತಂದೆ ಬಳಿ ಹೇಳಿಕೊಂಡಿದ್ದಳು ಎನ್ನಲಾಗಿದೆ. ಹೀಗಾಗಿ ಸುಬಾನಿ ಮತ್ತು ಕುಟುಂಬಸ್ಥರನ್ನು ಕರೆಸಿ ಬುದ್ಧಿವಾದ ಹೇಳಿ, ಮತ್ತೆ ಮಗಳಿಗೆ ತೊಂದರೆ ಕೊಡದಂತೆ ಎಚ್ಚರಿಕೆ ಕೊಟ್ಟಿದ್ದರು. ಆ ನಂತರವೂ ಈತನ ಕಾಟ ಮುಂದುವರಿದಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಕಳಸ ಗ್ರಾಮದ ಅಖಂಡೇಶ್ವರ ಜಾತ್ರೆಗೆ ಹೋಗಿ ಬರುವುದಾಗಿ ಬೆಳಗ್ಗೆ 5 ಗಂಟೆಗೆ ಮನೆಯಿಂದ ಹೊರಹೋದವಳು ನಾಪತ್ತೆಯಾಗಿದ್ದಾಳೆ. ಅಕ್ಷತಾಳನ್ನು ಸುಬಾನಿ ಮಾಬುಸಾಬ್ ದೊಡ್ಡಮನಿ ಅಪಹರಿಸಿದ್ದಾನೆಂದು ಉಲ್ಲೇಖಿಸಿದ್ದಾರೆ.

Related posts

ಹಾಸ್ಟೆಲ್‌ ನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು..! ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದ ಯುವತಿ..!

ಮುಂಬೈನ ಮಾರ್ಕೆಟ್ ನಲ್ಲಿ ಭಾರಿ ಅಗ್ನಿ ಅವಘಡ! ಬೆಂಕಿಯಲ್ಲಿ ಹಲವರು ಸಿಲುಕಿರೋ ಶಂಕೆ!

KSRTC: ಡೀಸೆಲ್ ಖಾಲಿಯಾಗಿ ಹುಲಿಕಲ್ ಘಾಟ್‌ ನಲ್ಲಿ ನಿಂತ ಸರ್ಕಾರಿ ಬಸ್..! ಟಿಕೆಟ್ ಹಣ ವಾಪಾಸ್ ಕೊಟ್ಟ ಕೆ.ಎಸ್.ಆರ್.ಟಿ.ಸಿ ಕಂಡಕ್ಟರ್..!