ಕ್ರೈಂದೇಶ-ಪ್ರಪಂಚದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಪ್ರೇಯಸಿಯನ್ನು ನಡು ರಸ್ತೆಯಲ್ಲೇ ಸ್ಪ್ಯಾನರ್‌ ನಿಂದ ಹೊಡೆದು ಕೊಂದ ನೀಚ..! ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್‌ ನಾಟೌಟ್ : ಇತ್ತೀಚೆಗೆ ಪ್ರೀತಿಸಿದ ಯುವತಿ ಸಿಗಲಿಲ್ಲ ಎನ್ನುವ ಕಾರಣಕ್ಕೆ ಕೊಡುಗು ಮತ್ತು ಹುಬ್ಬಳ್ಳಿಯಲ್ಲಿ ಭೀಕರ ಕೊಲೆ ಪ್ರಕರಣ ನಡೆದಿತ್ತು. ಅಂತಹದ್ದೇ ವಿಕೃತ ಕೊಲೆ ಪ್ರಕರಣ ಮತ್ತೆ ನಡೆದಿದೆ. ವ್ಯಕ್ತಿಯೊಬ್ಬ ಲವ್‌ ಬ್ರೇಕಪ್‌ ಎಂದಿದ್ದಕ್ಕೆ ಪ್ರೇಯಸಿಯನ್ನು ನಡು ರಸ್ತೆಯಲ್ಲಿಯೇ ಸ್ಪ್ಯಾನರ್‌ನಿಂದ ಹೊಡೆದು ಕೊಲೆ ಮಾಡಿದ ಘಟನೆ ಮುಂಬೈನಲ್ಲಿ ನಡೆದಿದೆ.

ಈ ಕೃತ್ಯದ ಭೀಕರ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಮುಂಬೈ ಬಳಿಯ ವಸಾಯ್‌ ಪ್ರದೇಶದ ರಸ್ತೆಯೊಂದರಲ್ಲಿ 20 ವರ್ಷದ ಆರತಿ ಯಾದವ್ ನಡೆದುಕೊಂಡು ಹೋಗುತ್ತಿರುತ್ತಾರೆ. ಆಗ 29 ವರ್ಷದ ರೋಹಿತ್‌ ಯಾದವ್‌ ಎಂಬಾತ ಸ್ಪ್ಯಾನರ್‌ ಹಿಡಿದುಕೊಂಡೇ ಓಡಿ ಬಂದು ಯುವತಿ ಮೇಲೆ ದಾಳಿ ಮಾಡಿದ್ದಾನೆ.

ಯುವತಿ ತಲೆಗೆ, ಎದೆಗೆ ಸ್ಪ್ಯಾನರ್‌ನಿಂದ ಹೊಡೆದು, ಆಕೆ ನೆಲಕ್ಕೆ ಬಿದ್ದ ಮೇಲೆ ಒದ್ದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಇದೇ ವೇಳೆ ಒಂದಿಬ್ಬರು ವ್ಯಕ್ತಿಯನ್ನು ತಡೆಯಲು ಪ್ರಯತ್ನಿಸಿದರೂ ಅಷ್ಟೊತ್ತಿಗಾಗಲೇ ಗಂಭೀರವಾಗಿ ಗಾಯಗೊಂಡಿದ್ದ ಆರತಿ ಮೃತಪಟ್ಟಿದ್ದಾರೆ, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

Related posts

ಸುಳ್ಯ ಪೊಲೀಸ್ ಠಾಣೆಯ ಎ.ಎಸ್.ಐ ಗೆ ಪುತ್ತೂರಿನಲ್ಲಿ ಹಲ್ಲೆ, ಜಾತಿ ನಿಂದನೆ

ಮಂಗಳೂರು : ಬೈಕ್ ಸವಾರರ ಮೇಲೆ ಹರಿದ ಖಾಸಗಿ ಬಸ್‌! ಮುಂದೇನಾಯ್ತು? ಇಲ್ಲಿದೆ ಭೀಕರ ವಿಡಿಯೋ

ಪೂನಂ ಪಾಂಡೆ ದುರಂತ ಅಂತ್ಯದ ಸುತ್ತ ಅನುಮಾನದ ಹುತ್ತ..! ಬೋಲ್ಡ್‌ ನಟಿ ಇನ್ನೂ ಜೀವಂತವಾಗಿದ್ದಾರೆಯೇ?ಗರ್ಭಕಂಠ ಕ್ಯಾನ್ಸರ್‌ ಬಗ್ಗೆ ತಜ್ಞ ವೈದ್ಯರು ಹೇಳಿದ್ದೇನು?