ದೇಶ-ಪ್ರಪಂಚ

ಅವಶೇಷಗಳಡಿ ಮಗುವಿಗೆ ಜನ್ಮಕೊಟ್ಟು, ಪ್ರಾಣ ಬಿಟ್ಟ ಮಹಾತಾಯಿ!

ನ್ಯೂಸ್ ನಾಟೌಟ್: ಟರ್ಕಿ ಮತ್ತು ಸಿರಿಯಾಗಳಲ್ಲಿ ಸಂಭವಿಸಿದ ಭೀಕರ ಭೂಕಂಪನಕ್ಕೆ ಬಲಿಯಾದವರ ಸಾವಿನ ಸಂಖ್ಯೆ 15000 ದಾಟಿದೆ. ಈ ನಡುವೆ ಅವಶೇಷಗಳ ಅಡಿಯಲ್ಲಿ ಜನಿಸಿದ ನವಜಾತ ಮಗುವನ್ನು ರಕ್ಷಣೆ ಮಾಡಲಾಗಿದೆ.

ಸಿರಿಯಾದ ಅಲೆಪ್ಪೋದ ಹಳ್ಳಿಯೊಂದರಲ್ಲಿ ಭೂಕಂಪನದ ನಂತರ ರಕ್ಷಣಾ ಕಾರ್ಯಾಚರಣೆ ನಡೆಯುವ ವೇಳೆ ಅವಶೇಷಗಳಡಿ ಸಿಲುಕಿದ್ದ ಗರ್ಭಿಣಿಯೊಬ್ಬರು ಮಗುವಿಗೆ ಜನ್ಮ ನೀಡಿದ್ದರು. ತನ್ನ ಹೊಕ್ಕುಳ ಬಳ್ಳಿ ಕತ್ತರಿಸುವ ಮುನ್ನವೇ ತಾಯಿ ಮೃತಪಟ್ಟಿದ್ದಾರೆ. ಇದೀಗ ಮಗುವನ್ನು ಜೀವಂತ ಹೊರತೆಗೆದು ರಕ್ಷಿಸಲಾಗಿದೆ.

ಇನ್ನೂಕೂಡ ಅವಶೇಷ ತೆರವು ಕಾರ್ಯಾಚರಣೆ ನಡೆಯುತ್ತಲೇ ಇದೆ. ಭಯಾನಕ ಭೂಕಂಪದಿಂದ ಉಭಯ ರಾಷ್ಟ್ರಗಳಲ್ಲಿ ಸಾವಿರಾರು ಕಟ್ಟಡಗಳು ನೆಲಸಮವಾಗಿವೆ. ಅವಶೇಷಗಳಡಿ ಸಿಲುಕಿದವರ ರಕ್ಷಣಾಕಾರ್ಯದ ಸಂದರ್ಭ ಮೃತದೇಹಗಳೇ ಸಿಗುತ್ತಿವೆ. ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ನೆರವಿನ ಹಸ್ತನೀಡಿವೆ. ಭಾರತದಿಂದ ಪರಿಹಾರ ಕಾರ್ಯಕ್ಕೆ ವೈದ್ಯಕೀಯ ತಂಡ, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ.

Related posts

ಹಿಂದೂ ದೇವರ ಅವಹೇಳನ ಮಾಡಿದ ಶಿಕ್ಷಕನ ಬಂಧನ! ಅಷ್ಟಕ್ಕೂ ಆ ಶಿಕ್ಷಕ ಹೇಳಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ

ವಂದೇ ಮಾತರಂ ಎಕ್ಸ್‌ಪ್ರೆಸ್‌ ರೈಲ್‌ನಲ್ಲಿ ಪ್ರಯಾಣಿಸುತ್ತಿದ್ದಾತನಿಗೆ ಶಾಕ್..! ರೈಲಿನಲ್ಲಿ ನೀಡಲಾಗಿದ್ದ ಚಪಾತಿ ಊಟದಲ್ಲಿ ಕಾಣಿಸಿತು ಜಿರಳೆ..!ಮುಂದೇನಾಯ್ತು?

ಮರುದಿನ ಮದುವೆಗೆ ತಯಾರಾಗಿದ್ದ ವಧು ನಿಗೂಢವಾಗಿ ಅಂತ್ಯವಾಗಿದ್ದೇಗೆ? ಮೂರು ಬಾರಿ ಆತನ ಜೊತೆ ಓಡಿಹೋಗಿದ್ದಳು ಎಂದದ್ದೇಕೆ ಪೊಲೀಸರು?