ಕ್ರೈಂವಿಡಿಯೋವೈರಲ್ ನ್ಯೂಸ್

ತಾಯಿಯ ಅಂತ್ಯಸಂಸ್ಕಾರಕ್ಕಾಗಿ ಭಿಕ್ಷೆ ಬೇಡಿದ 11 ವರ್ಷದ ಮಗಳು..! ಏನಿದು ಮನಕಲಕುವ ಘಟನೆ..? ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್ : ಭಾನುವಾರ(ಆ.18) ಆತ್ಮಹತ್ಯೆ ಮಾಡಿಕೊಂಡ ತನ್ನ ತಾಯಿಯ ಅಂತ್ಯಕ್ರಿಯೆಯ ವೆಚ್ಚಕ್ಕಾಗಿ 11 ವರ್ಷದ ಬಾಲಕಿ ಸಾರ್ವಜನಿಕರ ಬಳಿ ಹಣಕ್ಕಾಗಿ ಭಿಕ್ಷೆ ಬೇಡಿದ ಘಟನೆ ತೆಲಂಗಾಣದ ನಿರ್ಮಲ್ ಜಿಲ್ಲೆಯ ತಾನೂರ್ ಪಟ್ಟಣದ ತರೋಡ ಗ್ರಾಮದಲ್ಲಿ ನಡೆದಿದೆ.

ಬಾಲಕಿ ಭಿಕ್ಷೆ ಬೇಡುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅನೇಕರು ಬಾಲಕಿಯ ಪರಿಸ್ಥಿತಿ ಕಂಡು ಕಂಬನಿ ಮಿಡಿದಿದ್ದಾರೆ.
ಬಾಲಕಿಯ ಹೆಸರು ದುರ್ಗಾ, 6ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಆಕೆಯ ತಂದೆ ಕೆಲ ವರ್ಷಗಳ ಹಿಂದೆ ನಿಧನರಾಗಿದ್ದರು. ಹಾಗಾಗಿ ತಾಯಿಗೆ ಯಾವುದೇ ಹಣಕಾಸಿನ ಬೆಂಬಲವಿರಲಿಲ್ಲ. ಆಕೆ ಕೂಲಿ ಮಾಡಿ ತನ್ನ ಮಗಳನ್ನು ಸಾಕುತ್ತಿದ್ದಳು. ಆದರೆ ಆಕೆ ಆತ್ಮಹತ್ಯೆ ಮಾಡಿಕೊಂಡು ಸಾವನಪ್ಪಿದ ಕಾರಣ ದುರ್ಗಾಗೆ ತಾಯಿಯ ಅಂತ್ಯಸಂಸ್ಕಾರ ಮಾಡಲು ಹಣವಿಲ್ಲ ಮತ್ತು ಅಂತಿಮ ವಿಧಿಗಳನ್ನು ಹೇಗೆ ನಡೆಸುವುದು ಎಂದು ತಿಳಿದಿರಲಿಲ್ಲ. ಹಾಗಾಗಿ ಅವಳು ಹಣಕ್ಕಾಗಿ ಭಿಕ್ಷೆ ಬೇಡಿದ್ದಾಳೆ. ಬಾಲಕಿಯ ದುಃಸ್ಥಿತಿಯ ಬಗ್ಗೆ ತಿಳಿದ ಸ್ಥಳೀಯ ಪೊಲೀಸರು, ಶಿಕ್ಷಕರು ಮತ್ತು ಬಿಆರ್ ಎಸ್ ಮುಖಂಡರು ಬಾಲಕಿಗೆ ಹಣವನ್ನು ನೀಡಿದ್ದಾರೆ ಮತ್ತು ಸಂಜೆಯ ವೇಳೆಗೆ ತಾಯಿಯ ಅಂತಿಮ ವಿಧಿಗಳನ್ನು ನಡೆಸಲು ಸಹಾಯ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.

ಪೊಲೀಸರ ಪ್ರಕಾರ, ದುರ್ಗಾ ಅವಳ ತಾಯಿ ಎಂ.ಗಂಗಾಮಣಿ (35) ಶನಿವಾರ ರಾತ್ರಿ ತರೋಡಾದಲ್ಲಿ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ದಿನಗೂಲಿ ಕೃಷಿ ಕಾರ್ಮಿಕರಾದ ಗಂಗಾಮಣಿ ತನ್ನ ಒಬ್ಬಳೆ ಮಗಳನ್ನು ಬೆಳೆಸಲು, ಮನೆಯ ಬಾಡಿಗೆ ಕಟ್ಟಲು ಮತ್ತು ಇತರ ಆರ್ಥಿಕ ಅಗತ್ಯಗಳನ್ನು ಪೂರೈಸಲು ಕಷ್ಟಪಡುತ್ತಿದ್ದಳು. ದುರ್ಗಾ ತನ್ನ ತಾಯಿಯ ಜೊತೆ ಜಗಳವಾಡಿ ತಾಯಿಯ ಹಿರಿಯ ಸಹೋದರಿಯ ಮನೆಗೆ ಹೋಗಿದ್ದಳು. ಆದರೆ ಬಾಲಕಿ ಹಿಂತಿರುಗಿ ಬಂದಾಗ, ಅವಳು ತನ್ನ ತಾಯಿಯ ಶವ ಕಂಡಿದೆ. ಬಾಲಕಿ ಓಡಿ ಹೋಗಿ ನೆರೆಹೊರೆಯವರಿಗೆ ಮಾಹಿತಿ ನೀಡಿದ್ದಾಳೆ.
ಈ ವಿಚಾರ ತಿಳಿದ ಬಿ ಆರ್ ಎಸ್ ಮುಖಂಡರು 10,000 ರೂ. ನೀಡಿ ಬಾಲಕಿಗೆ ಮುಂದಿನ ಜೀವನಕ್ಕಾಗಿ ಹೆಚ್ಚಿನ ನೆರವು ನೀಡುವುದಾಗಿ ಭರವಸೆ ನೀಡಿದರು ಎನ್ನಲಾಗಿದೆ.

Click

https://newsnotout.com/2024/08/indira-gandhi-mamatha-banarji-kannada-news-protest-insta-video/
https://newsnotout.com/2024/08/mangaluru-mooda-case-cm-siddaramayya-issue-bus-damage/
https://newsnotout.com/2024/08/press-meet-heart-attack-kannada-news-viral-news-kuruba/
https://newsnotout.com/2024/08/benngaluru-issue-dance-choreographer-arrest-kannada-news/

Related posts

ಚಲಿಸುವ ರೈಲಿನಲ್ಲೇ ಪತ್ನಿಗೆ ತ್ರಿವಳಿ ತಲಾಖ್ ಹೇಳಿ ಓಡಿದ ಪತಿ..! ಯೋಗಿ ಆದಿತ್ಯನಾಥ್ ಬಳಿ ದೂರು ಕೊಟ್ಟ ಪತ್ನಿ

ಹೆಂಡತಿ ಬಿಟ್ಟು ಹೋಗಿದ್ದಕ್ಕೆ ಮಕ್ಕಳಿಗೆ ವಿಷ ಹಾಕಿ ಕೊಂದ ತಂದೆ..! ಅಪ್ಪನ ದುಡುಕುತನಕ್ಕೆ ಇಬ್ಬರು ಮಕ್ಕಳ ಬದುಕು ಅಂತ್ಯ..!

Yuvarajkumar Divorce: ದೊಡ್ಮನೆಗೂ ತಟ್ಟಿದ ಡಿವೋರ್ಸ್‌ ಪಿಡುಗು..! ಪ್ರೀತಿಸಿ ಮದುವೆಯಾಗಿದ್ದ ಪತ್ನಿಗೆ ಡಿವೋರ್ಸ್ ನೋಟಿಸ್ ಕಳುಹಿಸಿದ ಯುವರಾಜ್‌ ಕುಮಾರ್..!