ಕ್ರೈಂವೈರಲ್ ನ್ಯೂಸ್

ರಸ್ತೆಬದಿ ಹೋಗುತ್ತಿದ್ದ ತಾಯಿ, ಮಗುವಿಗೆ ಗುದ್ದಿದ ಕಾರು! 8 ವರ್ಷದ ಮಗನನ್ನು ಕಳೆದುಕೊಂಡ ತಾಯಿಯ ಕರುಣಾಜನಕ ಕಥೆ!

ನ್ಯೂಸ್‌ ನಾಟೌಟ್‌: ರಸ್ತೆಬದಿ ಹೋಗುತ್ತಿದ್ದ ತಾಯಿ ಮತ್ತು ಮಗುವಿಗೆ ಕಾರು ಢಿಕ್ಕಿಯಾಗಿ ಮಗ ಕೊನೆಯುಸಿರೆಳೆದಿದ್ದು, ತಾಯಿ ಗಾ* ಯಗೊಂಡಿರುವ ಘಟನೆ ಮಂಡ್ಯದ ಮಳವಳ್ಳಿ ಪಟ್ಟಣದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಮಳವಳ್ಳಿ ಪಟ್ಟಣದ ಪೇಟೆಬೀದಿ ನಿವಾಸಿ ರಾಜು ಎಂಬವರ ಪುತ್ರ ತೇಜಸ್‍ಗೌಡ(8) ದುರಂತ ಅಂತ್ಯ ಕಂಡಿದ್ದು, ತಾಯಿ ಉಷಾರಾಣಿ ತೀವ್ರವಾಗಿ ಗಾ* ಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಮಳವಳ್ಳಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ತೆರಳುವ ಮಾರ್ಗಮಧ್ಯೆ ಮಗು ಕೊನೆಯುಸಿರೆಳೆದಿದೆ.
ಮಳವಳ್ಳಿ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಕ್ರಮವಹಿಸಿದ್ದಾರೆ. ಮನೆಪಾಠ ಮುಗಿಸಿಕೊಂಡು ಮಗುವನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಕಾರು ಚಾಲಕ ಕಾರು ಸಮೇತ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ
.

Related posts

ಸುಳ್ಯ: ನವಜಾತ ಶಿಶುವನ್ನು ಬಿಟ್ಟು ಪೋಷಕರು ಪರಾರಿ..! ಅಳುತ್ತಲೇ ಇರುವ ಅನಾಥ ಕಂದಮ್ಮ..!

ಪ್ರಯಾಗ್‌ ರಾಜ್‌ ಗೆ ಹೊರಟಿದ್ದ ರೈಲಿನ ಮೇಲೆ ಕಲ್ಲು ತೂರಾಟ..! ಇಲ್ಲಿದೆ ವೈರಲ್ ವಿಡಿಯೋ

ಅರಂತೋಡು: ಬೈಕಿಗೆ ಅಡ್ಡ ಬಂದ ಕಾಡುಕೋಣ ಸವಾರನಿಗೆ ಗಾಯ