ಕ್ರೈಂ

ಪ್ರಿಯಕರ ಜೊತೆ ಸೇರಿ ವಿಶೇಷಚೇತನ ಮಗಳನ್ನೇ ಕೊಲೆಗೈದ ತಾಯಿ..!ಅಕ್ರಮ ಸಂಬಂಧಕ್ಕೆ ಅಡ್ಡಿಯಾದಳೇ ಮಗಳು..!ಛೇ..ನೀನೆಂಥಾ ತಾಯಿ..!

ನ್ಯೂಸ್‌ ನಾಟೌಟ್‌ :ಅನೈತಿಕ ಸಂಬಂಧಕ್ಕೆ (Illegal Relationship) ಅಡ್ಡಿಯಾಗುತ್ತಿದ್ದಾಳೆಂದು ವಿಶೇಷಚೇತನ ಮಗಳನ್ನ ತಾಯಿಯೇ (Mother) ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಧಾರವಾಡ (Dharwad) ನಗರದ ಕಮಲಾಪುರ ಹೂಗಾರ ಓಣಿಯಲ್ಲಿ ನಡೆದಿದೆ. ತಾಯಿ ಜ್ಯೋತಿ ಹಾಗೂ ಪ್ರಿಯಕರ ರಾಹುಲ್ ಸೇರಿ ಕತ್ತು ಕೊಯ್ದು ಕೊಲೆ (Murder) ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಹುಬ್ಬಳ್ಳಿಯ ನವನಗರ ಮೂಲದ ರಾಹುಲ್ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎನ್ನಲಾದ ಜ್ಯೋತಿ, ನಿನ್ನೆ ಸಂಜೆ ಮಗಳನ್ನೆ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ. ಘಟನೆ ಸಂಬಂಧ ಆರೋಪಿ ತಾಯಿ ಜ್ಯೋತಿ ಮತ್ತು ಪ್ರಿಯಕರ ರಾಹುಲ್‌ನನ್ನ ಉಪನಗರ ಪೋಲಿಸರು (Police) ವಶಕ್ಕೆ ಪಡೆದಿದ್ದಾರೆ.

ಧಾರವಾಡದಲ್ಲಿ ಕಳೆದ ಆರು ದಿನಗಳಲ್ಲಿ ಬರೋಬ್ಬರಿ ಐದು ಕೊಲೆಗಳು ನಡೆದಿದ್ದು, ಇನ್ನು, ತಾಯಿ ಜ್ಯೋತಿ ಹಾಗೂ ಪ್ರಿಯಕರ ರಾಹುಲ್ ನಿಂದ ಕತ್ತು ಕೊಯ್ದು ವಿಶೇಷಚೇತನ ಮಗಳನ್ನೆ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನಿನ್ನೆ ಸಂಜೆ ಮಗಳನ್ನು ತಾಯಿ ಮತ್ತು ಆಕೆಯ ಪ್ರಿಯಕರ ರಾಹುಲ್ ಕೊಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಧಾರವಾಡ ಉಪನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Related posts

ಪಿಡಿಒ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಶಂಕೆ..! ಸೀಲ್ ಓಪನ್ ಆಗಿರುವ ಪ್ರಶ್ನೆಪತ್ರಿಕೆಯ ಫೋಟೊ ವೈರಲ್..!

ಕೋಚಿಂಗ್​ ಕ್ಲಾಸ್​​ಗೆ ಹೋಗುವುದಾಗಿ ಹೇಳಿದ ಮಗ ಹುಕ್ಕಾ ಪಾರ್ಟಿಯಲ್ಲಿ ಎಂಜಾಯ್..! ರಹಸ್ಯವಾಗಿ ಬಂದ ತಂದೆಯಿಂದ ಹಿಗ್ಗಾಮುಗ್ಗ ಥಳಿತ! ಇಲ್ಲಿದೆ ವೈರಲ್ ವಿಡಿಯೋ

ಉಳ್ಳಾಲ: ಊಟ ಮಾಡಿ ಮಲಗಿದ್ದ ವಿವಾಹಿತ ಯುವಕ ಮತ್ತೆ ಏಳಲೇ ಇಲ್ಲ..! ಹೃದಯಾಘಾತದಿಂದ ಸಾವು ಸಂಭವಿಸಿರುವ ಶಂಕೆ