ದೇಶ-ಪ್ರಪಂಚ

ಭೂಕಂಪಕ್ಕೆ ಕಟ್ಟಡದಡಿ ಸಿಲುಕಿ ಬದುಕಿದ್ದ ಮಗು ಪ್ರಕರಣಕ್ಕೆ ರೋಚಕ ಟ್ವಿಸ್ಟ್ ,ಮೃತಪಟ್ಟಿದ್ದಾರೆ ಎನ್ನಲಾದ ತಾಯಿಯ ಮಡಿಲು ಸೇರಿದ ಪುಟ್ಟ ಕೂಸು!

ನ್ಯೂಸ್ ನಾಟೌಟ್ : ಕಳೆದ ಎರಡು ತಿಂಗಳ ಹಿಂದೆ ಫೆಬ್ರುವರಿ ತಿಂಗಳಲ್ಲಿ ಟರ್ಕಿಯಲ್ಲಿ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದಂತಹ ಪ್ರಬಲ ಭೂಕಂಪವಾಗಿತ್ತು. ಈ ದುರಂತದಲ್ಲಿ 30 ಸಾವಿರಕ್ಕೂ ಹೆಚ್ಚು ಜನ ತಮ್ಮ ಪ್ರಾಣ ಕಳೆದುಕೊಂಡಿದ್ದರು.ಮತ್ತೊಂದೆಡೆ ಈ ದುರಂತದಲ್ಲಿ ಹಲವಾರು ಜನ ಬದುಕಿ ಬಂದಿದ್ದರು.ಆದರೆ ತಾಯಿಯೊಬ್ಬರು ಮಗುವಿಗೆ ಜನ್ಮ ನೀಡಿ ಮೃತ ಪಟ್ಟಿದ್ದಾರೆ ಎನ್ನಲಾದ ಸುದ್ದಿ ಮನಕರಗುವಂತೆ ಮಾಡಿತ್ತು. ಪುಟ್ಟ ಮಗುವೊಂದು ಕಾರ್ಯಾಚರಣೆ ವೇಳೆ ಬದುಕಿ ಬಂದಿದ್ದೇ ಪವಾಡ ಎಂದು ಜನರಾಡಿಕೊಳ್ಳುತ್ತಿದ್ದರು.ಜತೆಗೆ ಈ ಮುದ್ದಾದ ಮಗುವನ್ನು ದತ್ತು ಪಡೆಯಲೆಂದೇ ನೂರಾರು ಜನ ಮುಂದೆ ಬಂದಿದ್ದರು.ಇದೀಗ ಈ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ.ಮಗುವಿನ ತಾಯಿ ಮೃತಪಟ್ಟಿಲ್ಲ ಅವರು ಬದುಕಿದ್ದಾರೆ ಅನ್ನುವ ಸತ್ಯ ಹೊರಬಿದ್ದಿದೆ.

ಭೂಕಂಪಕ್ಕೆ ಸಿಲುಕಿ ಅವಶೇಷದಡಿ ಬದುಕಿ ಬಂದ ಮಗು ತಬ್ಬಲಿ ಎಂಬ ಕಳಂಕಕ್ಕೆ ತೆರೆ ಬಿದ್ದಿದೆ. ಸತತ 128 ಗಂಟೆಗಳ ಕಾಲ ಕಟ್ಟಡದಡಿ ಸಿಲುಕಿದ್ದ ಮಗುವಿನ ತಾಯಿ ಸಿಕ್ಕಿರುವ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇಷ್ಟು ದಿನ ಕಾಣೆಯಾಗಿದ್ದ ತಾಯಿ ಮಗುವಿಗೆ ಸಿಕ್ಕಿರುವುದಕ್ಕೆ ಎಲ್ಲರೂ ಆಶೀರ್ವಾದದ ಸುರಿಮಳೆಗೈದಿದ್ದಾರೆ. ಟರ್ಕಿ ಪ್ರಬಲ ಭೂಕಂಪಕ್ಕೆ ಸಿಲುಕಿ ಸತ್ತವರೆಷ್ಟೋ ಮಂದಿ. ಆದರೆ ಈ ಮಗು ಮಾತ್ರ ಬದುಕುಳಿದಿದ್ದು ತಾಯಿಯ ಮಡಿಲು ಸೇರಿದೆ. ಈ ಮಗು ಅದೃಷ್ಟದ ಮಗುವೆಂದೇ ಹೇಳುತ್ತಿದ್ದಾರೆ. ಭೂಕಂಪಕ್ಕೆ ತತ್ತರಿಸಿದ್ದ ತಾಯಿ ಆಸ್ಪತ್ರೆಗೆ ದಾಖಲಾಗಿದ್ದರು. ಅದರೆ ಈಗ ಆಕೆಯೇ ಮಗುವಿನ ತಾಯಿ ಎಂದು ಡಿಎನ್‌ಎ ಮೂಲಕ ಪತ್ತೆ ಹಚ್ಚಲಾಗಿದ್ದು ಮಗು ತಾಯಿ ಬಳಿ ಇದೆ.

Related posts

ಉಚಿತ ಪ್ರಯಾಣಿಸುವ ಮಹಿಳೆಯರಿಗೆ ಬಸ್ ನಿಲ್ಲಿಸದ ಚಾಲಕ! ಕರ್ನಾಟಕದ ಉಚಿತ ಪ್ರಯಾಣಕ್ಕೂ ಎದುರಾಗಲಿದೆಯಾ ಇಂತಹ ಸಮಸ್ಯೆ!

ಡಾಲರ್‌ ನೋಟಿನಿಂದ ಬೆವರು ಒರೆಸಿಕೊಂಡ ಪಾಕ್ ಕ್ರಿಕೆಟಿಗ..! ಇಲ್ಲಿದೆ ವಿವಾದಾತ್ಮಕ ವಿಡಿಯೋ

ಭಾರಿ ಭೂಕಂಪಕ್ಕೆ ತತ್ತರಿಸಿದ ನೇಪಾಳ..! ಬರೋಬ್ಬರಿ 10 ಕೋಟಿ ಮೌಲ್ಯದ ಪರಿಹಾರ ಸಾಮಗ್ರಿ ಕಳುಹಿಸಿದ ಭಾರತದ ಬಗ್ಗೆ ನೇಪಾಳ ಹೇಳಿದ್ದೇನು?