ಕರಾವಳಿ

ಮಂಗಳೂರು: ವಿಶ್ವವಿದ್ಯಾನಿಲಯದ ನೂತನ ಕುಲಸಚಿವರಾಗಿ ಮೊಹಮ್ಮದ್ ನಯೀಮ್ ಮೊಮಿನ್ ಅಧಿಕಾರ ಸ್ವೀಕಾರ

ನ್ಯೂಸ್‌ ನಾಟೌಟ್‌: ಮಂಗಳೂರು ವಿಶ್ವವಿದ್ಯಾನಿಲಯದ 17ನೇ ಕುಲಸಚಿವ (ಆಡಳಿತ) ರಾಗಿ ಕೆ.ಎ.ಎಸ್ ಅಧಿಕಾರಿ (ಹಿರಿಯ ಶ್ರೇಣಿ) ಮೊಹಮ್ಮದ್ ನಯೀಮ್ ಮೊಮಿನ್ ಮಂಗಳವಾರ ಅಧಿಕಾರ ಸ್ವೀಕರಿಸಿದ್ದಾರೆ.

ಮೊಹಮ್ಮದ್ ನಯೀಮ್ ಮೊಮಿನ್ ಮೂಲತಃ ಬಾಗಲಕೋಟೆ ಜಿಲ್ಲೆಯವರು. ಬೀದರ್ ಮತ್ತು ಹಾಸನ ಜಿಲ್ಲೆಗಳಲ್ಲಿ ಸಹಾಯಕ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದು, ಅಲ್ಲದೆ ವಿಧಾನ ಸೌಧದಲ್ಲಿ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಏಪ್ರಿಲ್, 2021ರಿಂದ ಕುಲಸಚಿವರಾಗಿದ್ದ ಡಾ. ಕಿಶೋರ್ ಕುಮಾರ್ ಸಿ.ಕೆ ನೂತನ ಕುಲಸಚಿವರಿಗೆ ಅಧಿಕಾರ ಹಸ್ತಾಂತರಿಸಿದರು. ಡಾ. ಕಿಶೋರ್ ಕುಮಾರ್ ಸಿ.ಕೆ ಅವರು ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾಗಿ ಮುಂದುವರಿಯಲಿದ್ದಾರೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಪ್ರಕಟಣೆ ತಿಳಿಸಿದೆ.

Related posts

ಸುಳ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಕಳವು ಪ್ರಕರಣ..!, ಅಂಗಡಿ ಮಾಲೀಕನೆದುರಲ್ಲೇ ನಗದು ಕಳವುಗೈದ ಮಂಗಳಮುಖಿ..!ವಿಡಿಯೋ ವೀಕ್ಷಿಸಿ

ಪೈಚಾರ್: ದ್ವಿಚಕ್ರ ವಾಹನಗಳ ನಡುವೆ ಅಪಘಾತ..! ಪ್ರಾಣಾಪಾಯದಿಂದ ಪಾರಾದ ಸವಾರರು..!

ನಿಷೇಧದ ನಡುವೆಯೂ ಬೀಚ್ ಸೇರಿದಂತೆ ಪ್ರವಾಸಿ ತಾಣಕ್ಕೆ ತೆರಳಿದರೆ ಹುಷಾರ್ ..!, ಪ್ರವಾಸಿಗರ ಮೇಲೆ ಪ್ರಕರಣ ದಾಖಲಿಸಲು ಚಿಂತನೆ?