ಕರಾವಳಿ

ಪ್ರಾಮಾಣಿಕತೆ ಮೆರೆದ  ಸರಕಾರಿ ಬಸ್ ಕಂಡಕ್ಟರ್

ಸುಳ್ಯ: ನಡುಗಲ್ಲಿನ  ಮಹಿಳೆಯೊರ್ವರು ಬಸ್ ನಲ್ಲಿ ಬಿಟ್ಟು ಹೋಗಿದ್ದ  ಪರ್ಸ್ ಅನ್ನು ಸರಕಾರಿ ಬಸ್ ಕಂಡಕ್ಟರ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಘಟನೆ ನಡೆದಿದೆ.

ಏನಿದು ಘಟನೆ?

ಎ.22 ರ ಸಂಜೆ  ಕಲ್ಮಕಾರಿನಲ್ಲಿ ನಿಲುಗಡೆಯಾಗಲಿರುವ ಬಸ್ ನಲ್ಲಿ ರೂ. 16750 ಹಣವಿದ್ದ ಪರ್ಸ್ ನ್ನು ಬಸ್ ನಲ್ಲಿ ಬಿಟ್ಟು ಮಹಿಳೆ ನಡುಗಲ್ಲಿನಲ್ಲಿ ಬಸ್ ಇಳಿದು ಹೋಗಿದ್ದರು. ವಿಷಯ ಗಮನಕ್ಕೆ ಬರುವಾಗ ಬಸ್ ಹರಿಹರ ದಾಟಿದ್ದು ಬಳಿಕ ಪೋನ್ ಮುಖಾಂತರ ಕಂಡಕ್ಟರ್ ನ್ನು ಸಂಪರ್ಕಿಸಿದಾಗ ಪರ್ಸ್ ಸಿಕ್ಕಿರುವ ಮಾಹಿತಿ ತಿಳಿಸಿದ್ದಾರೆ. ಬಸ್ ವಾಪಸ್ ಬರುವಾಗ ನಡುಗಲ್ಲಿನಲ್ಲಿ ವಾರಸುದಾರರಿಗೆ ಕಂಡಕ್ಟರ್  ರಾಮಚಂದ್ರ ಹಿಂತಿರುಗಿಸಿದ್ದಾರೆ. ಕಂಡಕ್ಟರ್ ಪ್ರಾಮಾಣಿಕತೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.

Related posts

ಕನ್ನಡವನ್ನು ಉಳಿಸುವುದೇ ಸಾಹಿತ್ಯ: ಕೆ.ಆರ್.ಗಂಗಾಧರ

ಮಂಗಳೂರು ವಿವಿ ಸೆಮಿಸ್ಟರ್‌ ಪರೀಕ್ಷೆ ಮುಂದೂಡಿಕೆ, ಆದೇಶ ಹೊರಡಿಸಿದ ಮಂಗಳೂರು ವಿಶ್ವವಿದ್ಯಾಲಯ

ಬರೋಬ್ಬರಿ ಏಳು ವರ್ಷಗಳ ನಂತರ ‘ಚೆಲುವಿನ ಚಿತ್ತಾರ’ ಬೆಡಗಿ ಕಮ್ ಬ್ಯಾಕ್..! ತುಳುನಾಡಿನ ಜನಪ್ರಿಯ ಕಂಬಳದ ಸುತ್ತ ಕೇಂದ್ರೀಕೃತವಾದ ಕಥೆ ‘ಕರಾವಳಿ’ಯಲ್ಲಿ ಅಮೂಲ್ಯ..!