ಕೊಡಗು

ಮಡಿಕೇರಿ: ಬಿಜೆಪಿ ಅಭ್ಯರ್ಥಿ ಯದುವೀರ್ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳುವ ನೆಪದಲ್ಲಿ ನೂಕು ನುಗ್ಗಲು ಸೃಷ್ಟಿ;ಇಬ್ಬರು ಬಿಜೆಪಿ ಮಾಜಿ ಶಾಸಕರ ಪರ್ಸ್ ಕಳ್ಳತನ..!5 ಲಕ್ಷ ದೋಚಿರುವ ಶಂಕೆ!!

ನ್ಯೂಸ್‌ ನಾಟೌಟ್‌: ಮಡಿಕೇರಿ, ಕುಶಾಲನಗರದಲ್ಲಿ  ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರರ (BY Vijayednra) ಕಾರ್ಯಕ್ರಮ ನಡೆದಿತ್ತು. ಈ ವೇಳೆ ಕಳ್ಳರು ತಮ್ಮ ಕೈಚಳಕ ತೋರಿಸಿದ ಘಟನೆ ಬಗ್ಗೆ ವರದಿಯಾಗಿದೆ. ಮಾರ್ಚ್ 27ರಂದು ಖದೀಮರು ಅನೇಕರ ಪರ್ಸ್​ (Purse theft) ಎಗರಿಸಿದ್ದು,ಮಾಜಿ ಶಾಸಕರಾದ ಅಪ್ಪಚ್ಚು ರಂಜನ್ ಮತ್ತು ಕೆಜಿ‌ ಬೋಪಯ್ಯ ಅವರ ಪರ್ಸ್‌ ಸಹ ಕಳ್ಳತನವಾಗಿದೆ ಎಂದು ತಿಳಿದು ಬಂದಿದೆ.

ಅಪ್ಪಚ್ಚು ರಂಜನ್ ಅವರ ಪರ್ಸ್​ನಲ್ಲಿ ಸುಮಾರು 25000 ರೂ ಹಣವಿತ್ತು ಎನ್ನಲಾಗಿದೆ ಹಾಗೂ ಬೋಪಯ್ಯ ಅವರ ಪರ್ಸ್​ನಲ್ಲಿ 17000 ರೂ. ಇತ್ತು ಎಂದು ವರದಿಯಾಗಿದೆ. ಇವಿಷ್ಟು ಮಾತ್ರವಲ್ಲ ಅನೇಕರ ಜೇಬಿನಲ್ಲಿದ್ದ ಪರ್ಸ್​ ಕಳ್ಳತನವಾಗಿದ್ದು, ಸರಿ ಸುಮಾರು 5 ಲಕ್ಷ ರೂ.ಕ್ಕಿತಲೂ ಅಧಿಕ ಹಣ ಲಪಟಾಯಿಸಿದ್ದಾರೆ ಎನ್ನುವ ಬಗ್ಗೆ ವರದಿಯಾಗಿದೆ.

ಕಳ್ಳರು ಬೇಕು ಬೇಕಂತಲೇ ಗುಂಪುಗಟ್ಟಿಕೊಂಡು ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.ಬಿಜೆಪಿ ಅಭ್ಯರ್ಥಿ ಯದುವೀರ್ ಜೊತೆ ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಬಂದ ಕಳ್ಳರು ನೂಕು ನುಗ್ಗಲು ಸೃಷ್ಟಿ ಮಾಡಿ ಹಲವರ ಪರ್ಸ್ ಎಗರಿಸಿದ್ದಾರೆ. ಮೊದಲೇ ಪ್ಲ್ಯಾನ್ ಮಾಡಿಕೊಂಡೇ ಹೊರ ಜಿಲ್ಲೆಯಿಂದ ಬಂದ ಕಳ್ಳರ ತಂಡ ಈ ಕೃತ್ಯ ಎಸಗಿದೆ ಎಂದು ಶಂಕಿಸಲಾಗಿದ್ದು,  ಕಳ್ಳರ ಪತ್ತೆಗೆ ಮಡಿಕೇರಿ‌ ನಗರ ಪೊಲೀಸರು ಕಾರ್ಯಚರಣೆ ನಡೆಸಿದ್ದಾರೆ.

ಇನ್ನು ರಾಜಕೀಯ ಕಾರ್ಯಕ್ರಮದಲ್ಲಿ ಈ ರೀತಿ ಕಳ್ಳತನವಾಗಿರುವುದು ಇದು ಮೊದಲೇನಲ್ಲ. ಮೊಬೈಲ್‌ಗಳು ಸಮೇತ ಕಳ್ಳತನವಾಗಿರೋದ್ರ ಬಗ್ಗೆಯೂ ವರದಿಯಾಗಿದೆ. ಈ ಹಿಂದೆ ಕರ್ನಾಟಕದಲ್ಲಿ ನಡೆದ ರಾಜಕೀಯ ಕಾರ್ಯಕ್ರಮಗಳಲ್ಲಿ ಈ ರೀತಿ ಪ್ರಕರಣಗಳು ಸಹ ನಡೆದ ಉದಾಹರಣೆಗಳು ಇವೆ. ಅದರಲ್ಲೂ ಈಗ ಲೋಕಸಭಾ ಚುನಾವಣೆ ಇರುವುದರಿಂದ ಕಳ್ಳರಿಗೆ ಇದೊಂದು ಒಳ್ಳೆಯ ಅವಕಾಶವಾಗಿದ್ದು, ಪಕ್ಕಾ ಪ್ಲ್ಯಾನ್ ಮಾಡಿಕೊಂಡೇ ಕೈಗೆ ಸಿಕ್ಕವರ ಫೋನ್, ಪರ್ಸ್ ಎಗರಿಸುತ್ತಿದ್ದಾರೆ.

ತಮ್ಮ-ತಮ್ಮ ನಾಯಕರನ್ನು ನೋಡಲು ಅಲ್ಲದೇ ಫೋಟೋ ಕ್ಲಿಕ್ಕಿಸಿಕೊಳ್ಳಲು ಕಾರ್ಯಕರ್ತರು ಮುಗಿಬೀಳುತ್ತಾರೆ.ಹೀಗಾಗಿ  ಚುನಾವಣೆ ಸಂದರ್ಭದಲ್ಲಿ ರಾಜಕೀಯ ನಾಯಕರು, ಕಾರ್ಯಕರ್ತರು ಇಂತಹ ಖದೀಮರಿಂದ ಎಚ್ಚರಿಕೆಯಿಂದ ಇರುವುದು ಒಳಿತು.

Related posts

ಮಡಿಕೇರಿ:ನಡು ಪೇಟೆಯಲ್ಲಿಯೇ ಗಜರಾಜನ ಓಡಾಟಕ್ಕೆ ಜನರು ಶಾಕ್‌;ಆನೆಯ ಮಾರ್ನಿಂಗ್‌ ವಾಕಿಂಗ್‌ಗೆ ಬೆಚ್ಚಿಬಿದ್ದ ಪಟ್ಟಣದ ನಿವಾಸಿಗಳು

ಸುಬ್ರಹ್ಮಣ್ಯ:ಭಾರತ ಕ್ರಿಕೆಟ್‌ ತಂಡದ ಆಟಗಾರ ಕೆ.ಎಲ್.ರಾಹುಲ್ ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಭೇಟಿ

ಮಡಿಕೇರಿ : ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಬಿ.ಎನ್.ವೀಣಾ ಅಧಿಕಾರ ಸ್ವೀಕಾರ