ಕ್ರೈಂ

ಮೊಬೈಲ್ ಕೊಡಿಸುವ ನೆಪದಲ್ಲಿ ಸಾಮೂಹಿಕ ಅತ್ಯಾಚಾರ..! ಅಂದು ಸ್ನೇಹಿತರಿಂದಲೇ ನಡೆದಿತ್ತು ಮನಕಲಕುವ ಕೃತ್ಯ!

ನ್ಯೂಸ್ ನಾಟೌಟ್: ಹುಬ್ಬಳ್ಳಿಯಲ್ಲಿ ಬುಧವಾರ ಮಾರ್ಚ್೮ ರಂದು ಅಪ್ರಾಪ್ತ ಬಾಲಕಿಯ ಮೇಲೆ ನಾಲ್ವರು ಯುವಕರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ನಾಲ್ವರು ಆರೋಪಿಗಳ ಪೈಕಿ ಇಬ್ಬರೊಂದಿಗೆ ಸ್ನೇಹಿತೆಯಾಗಿದ್ದ ಬಾಲಕಿಗೆ ಫೋನ್ ಖರೀದಿಸಿ ಕೊಡುವ ನೆಪದಲ್ಲಿ ಅವರು ಕರೆ ಮಾಡಿ ಕರೆಸಿಕೊಂಡಿದ್ದರು ಎಂದು ತಿಳಿದುಬಂದಿದೆ.

ಹುಬ್ಬಳ್ಳಿ ಬೈಪಾಸ್ ರಿಂಗ್ ರಸ್ತೆ ಸೇತುವೆ ಬಳಿ ಘಟನೆ ನಡೆದಿದೆ. ಅಪ್ರಾಪ್ತ ಬಾಲಕಿಯನ್ನು ಆಕೆಯ ಊರಿನಿಂದ ಹುಬ್ಬಳ್ಳಿಗೆ ಕರೆಸಲಾಗಿತ್ತು. ಅಲ್ಲಿಂದ ಹೊರ ವರ್ತುಲ ರಸ್ತೆಗೆ ಬೈಕ್‌ನಲ್ಲಿ ಕರೆದೊಯ್ದ ಆರೋಪಿಗಳು ನಿರ್ಜನ ಸ್ಥಳದಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ.

ಆರೋಪಿಗಳ ಪೈಕಿ ಇಬ್ಬರನ್ನು ಪೊಲೀಸರು ಗುರುತಿಸಿದ್ದಾರೆ. ಇನ್ನಿಬ್ಬರು ಆರೋಪಿಗಳ ಗುರುತು ಇನ್ನಷ್ಟೇ ಗೊತ್ತಾಗಬೇಕಿದೆ. ಈ ನಾಲ್ವರು ಆರೋಪಿಗಳ ವಿರುದ್ಧ ಹುಬ್ಬಳ್ಳಿಯ ಗೋಕುಲ್ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ವಿದ್ಯಾರ್ಥಿಯ ಬದುಕು ಮುಗಿಸಿದ ಮೊಬೈಲ್‌ ಚಾರ್ಜರ್‌ ..! ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬಂದಾತನ ದುರಂತ ಅಂತ್ಯ

ಗಣೇಶ ಮೂರ್ತಿಯನ್ನಿರಿಸಿದ್ದ ಪೆಂಡಾಲ್ ನಲ್ಲಿ ದಿಢೀರ್ ಬೆಂಕಿ..! ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಪ್ರಾರ್ಥಿಸುತ್ತಿದ್ದಾಗ ಘಟನೆ! ಮುಂದೇನಾಯ್ತು?

ಬಂಟ್ವಾಳದಲ್ಲಿ ನಕಲಿ ಕರೆನ್ಸಿ ನೋಟು ಪತ್ತೆ..! ಕಾಸರಗೋಡಿನ ಇಬ್ಬರ ಬಂಧನ..!