ಕ್ರೈಂದೇಶ-ಪ್ರಪಂಚದೇಶ-ವಿದೇಶವೈರಲ್ ನ್ಯೂಸ್

ಮಸೀದಿಯಲ್ಲಿ ಮಕ್ಕಳೊಂದಿಗೆ ಮಲಗಿದ್ದ 30 ವರ್ಷದ ಮೌಲ್ವಿಯನ್ನು ಬಡಿದು ಕೊಂದರಾ..? ಹತ್ಯೆಗೆ ಕಾರಣವೇನು?

ನ್ಯೂಸ್ ನಾಟೌಟ್: ಮಸೀದಿಯಲ್ಲಿ ಮಲಗಿದ್ದ 30 ವರ್ಷದ ಮೌಲ್ವಿಯನ್ನು ದುಷ್ಕರ್ಮಿಗಳು ಬಡಿದು ಕೊಂದಿದ್ದಾರೆ ಎಂದು ವರದಿ ತಿಳಿಸಿದೆ. ಶನಿವಾರ (ಏಪ್ರಿಲ್‌ 27) ರಾತ್ರಿ ರಾಜಸ್ಥಾನದ ಅಜ್ಮೇರ್‌ನಲ್ಲಿರುವ ರಾಮ್‌ಗಂಜ್‌ ವ್ಯಾಪ್ತಿಯ ಕಾಂಚನ್‌ ನಗರದಲ್ಲಿರುವ ಮಸೀದಿಯಲ್ಲಿ ಮೊಹಮ್ಮದ್‌ ಮಹೀರ್‌ (Moahammed Mahir) ಮಲಗಿದ್ದರು. ಇದೇ ವೇಳೆ ದುಷ್ಕರ್ಮಿಗಳು ದಾಳಿ ನಡೆಸಿದ್ದು, ದೊಣ್ಣೆ ಸೇರಿ ಹಲವು ಮಾರಕಾಸ್ತ್ರಗಳಿಂದ ಬಡಿದು ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಮೌಲ್ವಿಯಾಗಿದ್ದ ಮೊಹಮ್ಮದ್‌ ಮಹೀರ್‌, ಆರು ಮಕ್ಕಳೊಂದಿಗೆ ಮಸೀದಿಯಲ್ಲಿ ಮಲಗಿದ್ದರು. ಇದೇ ವೇಳೆ ಹಲವು ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಸಹಾಯಕ್ಕಾಗಿ ಅವರು ಕೂಗಿದರೂ ಅಕ್ಕಪಕ್ಕದವರು ಯಾರೂ ಬಂದಿಲ್ಲ. ಮಕ್ಕಳಿಗೆ ಜೀವ ಬೆದರಿಕೆ ಹಾಕಿದ ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಇದಾದ ಬಳಿಕ ಮೌಲ್ವಿಯು ಮಸೀದಿಯಲ್ಲೇ ಮೃತಪಟ್ಟಿದ್ದಾರೆ.

ಮಕ್ಕಳು ಕಿರುಚಾಡುತ್ತ, ಅಕ್ಕಪಕ್ಕದವರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ. “ಮೊಹಮ್ಮದ್‌ ಮಹೀರ್‌ ಅವರ ಹತ್ಯೆಗೆ ಇದುವರೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಎಷ್ಟು ಜನ ದಾಳಿ ನಡೆಸಿದ್ದರು, ದಾಳಿ ಮಾಡಿದವರು ಯಾರು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುತ್ತದೆ” ಎಂಬುದಾಗಿ ರಾಮ್‌ಗಂಜ್‌ ಪೊಲೀಸ್‌ ಠಾಣೆಯ ರವೀಂದ್ರ ಖಿಂಚಿ ಮಾಹಿತಿ ನೀಡಿದ್ದಾರೆ. ಮಸೀದಿಯಲ್ಲಿಯೇ ಮೌಲ್ವಿಯನ್ನು ಕೊಂದ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

Related posts

ತುಂಡು ಲುಂಗಿಯಲ್ಲಿ ಕರ್ತವ್ಯಕ್ಕೆ ಹಾಜರಾದ ಎಸ್.ಐ..! ಮಹಿಳೆಯೊಂದಿಗೆ ಅಸಭ್ಯ ವರ್ತನೆ ಆರೋಪ..! ಇಲ್ಲಿದೆ ವಿಡಿಯೋ

ದರ್ಶನ್ ಪ್ರಕರಣ: ಹತ್ಯೆಯಾದ ರೇಣುಕಾಸ್ವಾಮಿ ನಿವಾಸಕ್ಕೆ ಬಿ.ವೈ.ವಿಜಯೇಂದ್ರ ಭೇಟಿ..! ಇಲ್ಲಿದೆ ಸಂಪೂರ್ಣ ಮಾಹಿತಿ

ಸಂಸತ್ತಿನಲ್ಲಿ ಭದ್ರತಾ ಲೋಪ: ಐವರು ಕಾಂಗ್ರೆಸ್​ ಸಂಸದರನ್ನು ಲೋಕಸಭೆಯಿಂದ ಅಮಾನತ್ತು ಮಾಡಿದ್ದೇಕೆ? ಈ ಬಗ್ಗೆ ಸ್ಪೀಕರ್ ಹೇಳಿದ್ದೇನು?