ನವದೆಹಲಿ: ಸ್ಪರ್ಧಾತ್ಮಕ ನೀತಿಗಳಿಗೆ ವಿರೋಧವಾಗಿ ನಡೆದುಕೊಂಡ ಆರೋಪದಲ್ಲಿ ಕಾರು ಉತ್ಪನ್ನ ಮಾರುಕಟ್ಟೆಯ ದಿಗ್ಗಜ ಮಾರುತಿ ಸುಜುಕಿಗೆ ಭಾರತದ ಸ್ಪರ್ಧಾ ಆಯೋಗ (ಸಿಸಿಐ) 200 ಕೋಟಿ ರೂ.ದಂಡ ವಿಧಿಸಿದೆ. ಕಾರುಗಳ ರಿಯಾಯಿತಿಗೆ ಸಂಬಂಧಿಸಿದಂತೆ ಡೀಲರ್‌ಗಳನ್ನು ಹೀಗೆಯೇ ನಡೆದುಕೊಳ್ಳಬೇಕು ಎಂದು ಒತ್ತಾಯಿಸಲಾಗಿದೆ. ಇದು ಸ್ಪರ್ಧಾ ನೀತಿಗಳಿಗೆ ವಿರೋಧವಾಗಿದೆ. ಹೀಗಾಗಿ ದಂಡ ವಿಧಿಸಲಾಗಿದೆ ಎಂದು ತಿಳಿಸಲಾಗಿದೆ.