ಕ್ರೈಂರಾಜ್ಯವೈರಲ್ ನ್ಯೂಸ್

ಮದುವೆ ಮಂಟಪದಿಂದ ಫೋಟೋಗ್ರಾಫರ್ ಕಿಡ್ನ್ಯಾಪ್..! ಇಬ್ಬರು ಮಹಿಳೆಯರು ಸೇರಿ 8 ಜನ ಅರೆಸ್ಟ್..!

ನ್ಯೂಸ್ ನಾಟೌಟ್: ನಾಲ್ವರು ದುಷ್ಕರ್ಮಿಗಳು ಮದುವೆ ಮಂಟಪದಿಂದ ಫೋಟೋಗ್ರಾಫರ್ ಅನ್ನು ಕಿಡ್ನ್ಯಾಪ್ ಮಾಡಿ ಹಲ್ಲೆ ಮಾಡಿರುವಂತಹ ಘಟನೆ ಬೆಳಗಾವಿಯ ಕೆಪಿಟಿಸಿಎಲ್ ಕಲ್ಯಾಣ ಮಂಟಪದಲ್ಲಿ ಇಂದು(ನ.26) ನಡೆದಿದೆ.

ಹೆಣ್ಣು ಮಕ್ಕಳನ್ನು ಕಾಡಿಸುತ್ತಿದ್ದರೆಂದು ಹೇಳಿ ಹಲ್ಲೆ ಮಾಡಲಾಗಿದೆ ಎಂದು ಆರೋಪಿಗಳು ಹೇಳಿಕೊಂಡಿದ್ದಾರೆ. ಬೈಲಹೊಂಗಲ ಪಟ್ಟಣದಲ್ಲಿ ವಾಸವಾಗಿರುವ ಉಮೇಶ್ ಹೊಸೂರು ಕಿಡ್ನ್ಯಾಪ್ ಆಗಿದ್ದ ಫೋಟೋಗ್ರಾಫರ್ ಎಂದು ಗುರುತಿಸಲಾಗಿದೆ. ಕೇಸ್ ದಾಖಲಾಗುತ್ತಿದ್ದಂತೆ ವಿಕ್ಕಿ, ಪ್ರವೀಣ್ ಉಮರಾಣಿ, ಬಸವರಾಜ ನರಟ್ಟಿ ಸೇರಿ 8 ಜನರನ್ನು ಬಂಧಿಸಲಾಗಿದೆ. ಮಾಳಮಾರುತಿ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.

4 ದಿನಗಳ ಹಿಂದೆ ಮದುವೆ ಆರ್ಡರ್ ಅಂತಾ ಉಮೇಶ್‌ ಬೆಳಗಾವಿಗೆ ಬಂದಿದ್ದರು. ಈ ವೇಳೆ ಮಂಟಪದಿಂದ ನಾಲ್ವರು ಅವರನ್ನು ಕಿಡ್ನ್ಯಾಪ್ ಮಾಡಿ, ಬೈಲಹೊಂಗಲ ತಾಲೂಕಿನ ಚಿವಟಗುಂಡಿ ಕ್ರಾಸ್ ಬಳಿ ಕಾರು ನಿಲ್ಲಿಸಿ ರಾಡ್ ​ನಿಂದ ಹಲ್ಲೆ ಮಾಡಿ ಬಿಟ್ಟು ಹೋಗಿದ್ದಾರೆ. ಸದ್ಯ ಬೈಲಹೊಂಗಲ ಖಾಸಗಿ ಆಸ್ಪತ್ರೆಯಲ್ಲಿ ಫೋಟೋಗ್ರಾಫರ್ ಉಮೇಶ್‌ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ನಗರ ಪೊಲೀಸ್ ಆಯುಕ್ತರು ಪ್ರತಿಕ್ರಿಯಿಸಿದ್ದು, ಉಮೇಶ್ ಹೊಸೂರು ಎಂಬಾತನನ್ನ ಕಿಡ್ನ್ಯಾಪ್ ಮಾಡಿದ್ದಾರೆ ಅಂತಾ ಕೇಸ್ ದಾಖಲಾಗಿದೆ. ಕೆಪಿಟಿಸಿಎಲ್ ಕಲ್ಯಾಣ ಮಂಪಟದಿಂದ ಕಿಡ್ನ್ಯಾಪ್ ಮಾಡಿದ್ದರು. ಬೈಲಹೊಂಗಲಕ್ಕೆ ಕರೆದುಕೊಂಡು ಹೋಗಿ ಉಮೇಶ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅಲ್ಲಿಂದ ತಪ್ಪಿಸಿಕೊಂಡು ಹೋದ ಉಮೇಶ್ ಬೈಲಹೊಂಗಲ ಠಾಣೆಗೆ ಹೋಗಿದ್ದರು. ಬೈಲಹೊಂಗಲ ಪೊಲೀಸರ ಸೂಚನೆ ಮೇರೆಗೆ ಮಾಳಮಾರುತಿ ಠಾಣೆಯಲ್ಲಿ ಕಿಡ್ನ್ಯಾಪ್ ಕೇಸ್ ದಾಖಲಿಸಿದ್ದಾರೆ. ಆರೋಪಿ ಬಸವರಾಜ ನರಟ್ಟಿ ಜೊತೆಗೆ ಉಮೇಶ್ ಕೆಲಸ ಮಾಡಿದ್ದ. ಮದುವೆ ವ್ಯವಹಾರದ ಬಗ್ಗೆ ಇಬ್ಬರ ನಡುವೆ ವೈಮನಸ್ಸು ಉಂಟಾಗಿತ್ತು. ಆ ಸಿಟ್ಟಿನಿಂದ ಬುದ್ದಿ ಕಲಿಸಲು ಕಿಡ್ನ್ಯಾಪ್ ಮಾಡಿದ್ದಾರೆ ಎನ್ನಲಾಗಿದೆ.

Click

https://newsnotout.com/2024/11/40-crore-budget-business-of-cinema-collects-25-lakh-v/
https://newsnotout.com/2024/11/darshan-kananda-news-bail-viral-news-viral-news-fh/
https://newsnotout.com/2024/11/kannada-news-hasana-alur-2-years-love-jf/
https://newsnotout.com/2024/11/rbi-governer-illness-kannada-news-chennail-apolo/
https://newsnotout.com/2024/11/puri-kannada-news-viral-news-school-jhf/
https://newsnotout.com/2024/11/pan-card-issue-narendra-modi-kananda-news-2-0/

Related posts

ವಶಪಡಿಸಿಕೊಂಡಿದ್ದ ಅಕ್ರಮ ಮದ್ಯ ನಾಶದ ವೇಳೆ ಬಾಟಲಿ ದೋಚಿದ ಜನರು..! ಮದ್ಯಪ್ರಿಯರ ಗುಂಪು ನೋಡಿ ಪೊಲೀಸರೇ ಶಾಕ್..! ಇಲ್ಲಿದೆ ವೈರಲ್ ವಿಡಿಯೋ

ಸಾಯಿಪಲ್ಲವಿ ವಿರುದ್ಧ ‘ಬೈಕಾಟ್’ ಅಭಿಯಾನ ನಡೆಯುತ್ತಿರುವುದೇಕೆ..? ಏನಿದು ಬಾಲಿವುಡ್ ಪಿತೂರಿ..?

ಅವನು 259 ಯುವತಿಯರಿಗೆ ಮೋಸ ಮಾಡಿದ್ದು ಹೇಗೆ..? ಎರಡನೇ ಮದುವೆ ಆಗೋರೇ ಇವನ ಟಾರ್ಗೆಟ್..? ಇಲ್ಲಿದೆ ವಿಚಿತ್ರ ಸ್ಟೋರಿ