ದೇಶ-ವಿದೇಶರಾಜ್ಯವೈರಲ್ ನ್ಯೂಸ್

ಮದುವೆ ವಯಸ್ಸಲ್ಲಿ ಮನೆ ಬಿಟ್ಟು ಸನ್ಯಾಸತ್ವ ಸ್ವೀಕರಿಸಿದ ಯುವತಿಯರು..! ಒಬ್ಬಳು ಸೈಕಾಲಜಿ ಪದವೀಧರೆ ಇನ್ನೊಬ್ಬಳು ಎಲ್.ಎಲ್.ಬಿ ಪದವೀಧರೆ..! ಈ ನಿರ್ಧಾರಕ್ಕೆ ಕಾರಣವೇನು..?

ನ್ಯೂಸ್ ನಾಟೌಟ್: ಇಬ್ಬರು ಜೈನ ಸಮುದಾಯದ ಯುವತಿಯರು ತಮ್ಮ ಮದುವೆ ವಯಸ್ಸಿನಲ್ಲಿ ಸನ್ಯಾಸತ್ವ ಪಡೆಯಲು ಮುಂದಾಗಿದ್ದಾರೆ.

ದಾವಣಗೆರೆಯ 26 ವರ್ಷದ ಮಾನಸಿ ಕುಮಾರಿ ಹಾಗೂ ಬೆಳಗಾವಿ ಜಿಲ್ಲೆಯ ಗೋಕಾಕ್​ನ ಮುಮುಕ್ಷ ಭಕ್ತಿ ಕುಮಾರಿ ಎಂಬವರು ಕುಟುಂಬ, ಆಸ್ತಿ, ಸಂಪತ್ತು ತ್ಯಜಿಸಿ ಸನ್ಯಾಸತ್ವಕ್ಕೆ ಮುಂದಾಗಿದ್ದಾರೆ. ಮದುಮಗಳಂತೆ ಇಬ್ಬರೂ ಚಿನ್ನಾಭರಣ ಧರಿಸಿ ತಯಾರಾಗಿದ್ದರು. ಇವರಿಗೆ ವಿಶೇಷವಾಗಿ ಮೆರವಣಿಗೆ ಮಾಡಿ ಸನ್ಯಾಸತ್ವದ ಕಾರ್ಯಕ್ರಮ ಕೂಡ ಮಾಡಲಾಗಿದೆ.

ಸನ್ಯಾಸತ್ವ ಕಾರ್ಯಕ್ರಮದಲ್ಲಿ ರುಚಿ ರುಚಿಯಾದ ಊಟ ಕೂಡ ಹಾಕಿಸಲಾಗಿದೆ. ಹೌದು ಜೈನ ಧರ್ಮದ 24ನೇ ಅಂದರೇ ಕೊನೆಯ ತೀರ್ಥಂಕರರಾಗಿರುವ ಭಗವಾನ್ ಮಹಾವೀರ್​​ ಅವರು ಅಹಿಂಸ ಪರಮೋಧರ್ಮ ಸಂದೇಶ ಕೇಳಿ ಈ ಇಬ್ಬರು ಯುವತಿಯರು ಸನ್ಯಾಸತ್ವಕ್ಕೆ ಮುಂದಾಗಿದ್ದಾರೆ. ಅಹಿಂಸಾ ಜೀವನ ಪ್ರಯೋಗ ಮಾಡಲು ಹೋಗಿ ಮನಸೋತು ಈ ಸನ್ಯಾಸತ್ವ ದೀಕ್ಷೆಗೆ ಮುಂದಾಗಿದ್ದೇನೆ ಎಂದು ಮಾನಸಿ ಕುಮಾರಿ ಹೇಳಿಕೊಂಡಿದ್ದಾರೆ.

ಸನ್ಯಾಸತ್ವಕ್ಕೆ ಮುಂದಾಗಿರುವ ಯುವತಿಯರು ಜೈನ​ ಸಮುದಾಯದವರಾಗಿದ್ದು, ಉನ್ನತ ಪದವೀಧರರಾಗಿದ್ದಾರೆ. ಯುವತಿ ಮಾನಸಿ ಕುಮಾರಿ ಮಾಸ್ಟರ್​ ಆಫ್ ಸೈಕಾಲಜಿ ಪದವೀಧರೆ. ಗೋಕಾಕ್ ಮೂಲದ ಮುಮುಕ್ಷ ಭಕ್ತಿ ಕುಮಾರಿ ಬಿಎ, ಎಲ್ಎಲ್ ಬಿ ಪದವೀಧರೆ. ಆದರೂ ತಮ್ಮ ಆಸ್ತಿ ಪಾಸ್ತಿ, ಸಂಪತ್ತು ಅಲ್ಲದೆ, ಇಡೀ ಕುಟುಂಬವನ್ನು ತ್ಯಜಿಸಿ ಈ ನಿರ್ಧಾರ ಮಾಡಿದ್ದಾರೆ. ‌ಮುಂದಿನ ತಿಂಗಳು(ನವೆಂಬರ್) 17ರಂದು ಜಾರ್ಖಂಡ್ ರುಜುಬಾಲಿಕ ಎಂಬಲ್ಲಿ ಸನ್ಯಾಸತ್ವ ಸ್ವೀಕಾರಕ್ಕೆ ಸಿದ್ಧತೆ ನಡೆಸಲಾಗಿದೆ.‌

Click

https://newsnotout.com/2024/10/kannada-news-railway-rajasthani-jaipura-october/
https://newsnotout.com/2024/10/bsnl-new-logo-kannada-news-introduced-network-kannada-news/
https://newsnotout.com/2024/10/mangaluru-parangipete-kannada-news-attack-viral-news/
https://newsnotout.com/2024/10/mangaluru-kannada-news-surathkal-kannada-news/
https://newsnotout.com/2024/10/mangaluru-kannada-news-helmet-kannada-news-mangaluru/

Related posts

ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಗೆ 14 ವರ್ಷ, ಪತ್ನಿಗೆ 7 ವರ್ಷ ಜೈಲು..! ಏನಿದು ಪ್ರಕರಣ..?

ನೀರಿಲ್ಲದೆ ಕರ್ನಾಟಕದ 4 ವಿದ್ಯುತ್ ಘಟಕಗಳು ಬಂದ್..! ವಿದ್ಯುತ್ ಅಭಾವದ ಭೀತಿ..!

ಕಾರಿನೊಳಗೆ ಆಟವಾಡುತ್ತಿದ್ದ ನಾಲ್ವರು ಮಕ್ಕಳು ಉಸಿರುಗಟ್ಟಿ ಸಾವು..! ಸಂಜೆ ಕೆಲಸ ಮುಗಿಸಿ ಬಂದ ಕಾರ್ಮಿಕ ದಂಪತಿಗೆ ಶಾಕ್..!