ಕರಾವಳಿ

ವ್ಯಕ್ತಿ ನಿಗೂಢ ಸಾವು ಪ್ರಕರಣ: ಓರ್ವ ಪೊಲೀಸ್ ವಶಕ್ಕೆ

ನ್ಯೂಸ್ ನಾಟೌಟ್ : ವಿಟ್ಲದಲ್ಲಿ ವ್ಯಕ್ತಿಯೊಬ್ಬರು ನಿಗೂಢವಾಗಿ ಸಾವನ್ನಪ್ಪಿದ್ದು,ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ವಶಕ್ಕೆ ಪಡೆಯಲಾಗಿದೆ. ವಿಟ್ಲದ ಇಡ್ಕಿದು ಗ್ರಾಮದ ಕುಮೇರು ನಿವಾಸಿ ಅರವಿಂದ ಭಾಸ್ಕರ್ ಸಾವನ್ನಪ್ಪಿದ್ದು,ಪೂರ್ಲಿಪ್ಪಾಡಿ ನಿವಾಸಿ ಯೋಗೀಶ್ ಎಂಬಾತನನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.ನಿನ್ನೆ ರಾತ್ರಿ ಊಟ ಮುಗಿಸಿ ಮಲಗಿದ್ದ ಭಾಸ್ಕರ್ ಬೆಳಗ್ಗೆ ಜಾವ ಸಾವನ್ನಪ್ಪಿದ್ದು, ಈ ಬಗ್ಗೆ ಹಲವರು ಅನುಮಾನ ವ್ಯಕ್ತ ಪಡಿಸಿದ್ದರು.

ಮೃತ ಭಾಸ್ಕರ್ ಅವರಿಗೆ ಹಣದ ವ್ಯವಹಾರದಲ್ಲಿ ಯೋಗೀಶ್ ಎಂಬಾತನೊಂದಿಗೆ ವೈಮನಸ್ಸು ಉಂಟಾಗಿತ್ತು ಎಂದು ಹೇಳಲಾಗುತ್ತಿದೆ.ಈತ ಆಗಾಗ ಭಾಸ್ಕರ್ ರವರ ಮನೆಗೆ ಬಂದು ಹೋಗುತ್ತಿದ್ದ ಎಂದು ಸ್ಥಳೀಯರು ಆರೋಪಿಸಿದ್ದರು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಗೀಶ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Related posts

ಅಮರ ಪಬ್ಲಿಕ್ ಚಾರಿಟೇಬಲ್ ಟ್ರೆಸ್ಟ್‌ಗೆ ದೇಣಿಗೆ ಹಸ್ತಾಂತರ

ಅಂಗಾರೆ ಮಲ್ತಿನ ಕೆಲಸ ಶುಕ್ರವಾರ ಮುಟ್ಟ ಮಾತ್ರ: ಸಂತೋಷ್ ಕಾಮತ್ ವ್ಯಂಗ್ಯ

ಸಂಪಾಜೆ:ಹಾಡ ಹಗಲಿನಲ್ಲಿಯೇ ರಾಜಾರೋಷವಾಗಿ ತಿರುಗಾಡಿದ 2 ಕಾಡಾನೆಗಳು..!ಕಂಗಾಲಾದ ಸ್ಥಳೀಯ ಜನತೆ ..