ಕರಾವಳಿ

ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಇನ್ನಿಲ್ಲ, ನಿವೃತ್ತಿ ನಂತರವೂ ಚಟುವಟಿಕೆಯಿಂದ ಕೂಡಿದ್ದವರಿಗೆ ಆಗಿದ್ದೇನು..?

ನ್ಯೂಸ್ ನಾಟೌಟ್ : ಕರಾವಳಿಯ ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಇಂದು ಬೆಳಗ್ಗೆ ನಿಧನರಾಗಿದ್ದಾರೆ.

ಮೂಲತಃ ಅವರು ಕಾರ್ಕಳ ತಾಲೂಕಿನ ಕರ್ವಾಲು ಗ್ರಾಮದವರಾಗಿದ್ದು ಮನೋಹರ್ ಪ್ರಸಾದ್ ಮಂಗಳೂರಿನಲ್ಲಿ ಕಾಲೇಜು ಪದವಿ ಶಿಕ್ಷಣವನ್ನು ಪೂರ್ಣಗೊಳಿಸಿದ್ದರು. ಬಳಿಕ ಉದಯವಾಣಿ ಪತ್ರಿಕೆಯಲ್ಲಿ ಮಂಗಳೂರಿನಲ್ಲಿ ವರದಿಗಾರರಾಗಿ, ಮುಖ್ಯವರದಿಗಾರರಾಗಿ ಹಾಗೂ ಬ್ಯುರೋ ಚೀಫ್ ಆಗಿ , ಸಹಾಯಕ ಸಂಪಾದಕರಾಗಿ ಕೆಲಸ ಮಾಡಿದ್ದರು. 36 ವರ್ಷದ ಸೇವೆಗಳ  ಬಳಿಕ 4 ವರ್ಷದ ಹಿಂದೆ ಕೆಲಸದಿಂದ ನಿವೃತ್ತರಾಗಿದ್ದರು.

Related posts

ಅಬ್ಬಬ್ಬಾ..!10ನೇ ತರಗತಿ ವಿದ್ಯಾರ್ಥಿನಿ ಹೊಟ್ಟೆ ಸೇರಿತ್ತು ಬರೋಬ್ಬರಿ 2 ಕೆ.ಜಿ. ಕೂದಲು..!ಅಂದಹಾಗೆ ಇಷ್ಟೊಂದು ಕೂದಲು ಆಕೆ ಹೊಟ್ಟೆ ಸೇರಿದ್ದೇಗೆ?

ಅಡಿಕೆ ಕದ್ದ ಆರೋಪ: ಬಾಲಕನಿಗೆ ಹಲ್ಲೆ ಮಾಡಿದ ಆರೋಪಿಗಳಿಗೆ ಜಾಮೀನು

ನದಿಯಲ್ಲಿ ತೇಲಿಬಂದ ಕಾಡುಕೋಣದ ಮೃತ ದೇಹ