ಕ್ರೈಂದೇಶ-ಪ್ರಪಂಚವೈರಲ್ ನ್ಯೂಸ್

ಮಣಿಪುರದಲ್ಲಿ ಮತ್ತೆ ಹಿಂಸಾಚಾರ..! ಹೊಸ ವರ್ಷದ ಮೊದಲ ದಿನವೇ 4 ಮಂದಿ ಬಲಿ! ದಾಳಿಕೋರರನ್ನು ಹಿಡಿದ ಸ್ಥಳೀಯರು..!

ನ್ಯೂಸ್ ನಾಟೌಟ್: ಜನಾಂಗೀಯ ಸಂಘರ್ಷದಿಂದ ಹದಗೆಟ್ಟಿರುವ ಮಣಿಪುರದಲ್ಲಿ ಸೋಮವಾರ(ಜ.1)ರಂದು ಸಂಜೆ ಮತ್ತೆ ಹಿಂಸಾಚಾರ ಭುಗಿಲೆದ್ದು ಅನಾಹುತ ಸೃಷ್ಟಿಸಿದೆ.

ನಾಲ್ಕು ಮಂದಿ ಹಿಂಸೆಗೆ ಬಲಿಯಾಗಿದ್ದು, ಇತರ ಐದು ಮಂದಿಗೆ ಗಂಭೀರ ಸ್ವರೂಪದ ಗುಂಡೇಟು ತಗುಲಿದೆ. ಕಳೆದ ವರ್ಷದ ಮೇ ತಿಂಗಳಿನಿಂದೀಚೆಗೆ ಹಿಂಸಾಚಾರದಲ್ಲಿ 200ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿರುವ ರಾಜ್ಯದಲ್ಲಿ ಕರ್ಫ್ಯೂ ಬಿಗಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ ಎನ್ನಲಾಗಿದೆ.

ತೌಬಲ್ ನ ಲಿಲಾಂಗ್ ಪ್ರದೇಶದಲ್ಲಿ ನಾಲ್ಕು ಮಂದಿ ಮೃತಪಟ್ಟಿರುವುದನ್ನು ಹಿರಿಯ ಪೊಲೀಸ್ ಅಧಿಕಾರಿಗಳು ದೃಢಪಡಿಸಿದ್ದಾರೆ. ಲಿಗಾಂಗ್ ಜನತೆ ಕೂಡಾ ಘಟನೆಯನ್ನು ದೃಢಪಡಿಸಿದ್ದು, ನಾಲ್ವರು ಮೃತಪಟ್ಟ ಸ್ಥಿತಿಯಲ್ಲಿ ಬಿದ್ದಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

“ಗಾಯಾಳುಗಳ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದ್ದು, ಕೆಲ ದಾಳಿಕೋರರನ್ನು ಸ್ಥಳೀಯರು ಹಿಡಿದಿದ್ದಾರೆ ಎನ್ನಲಾಗಿದ್ದು, ಇದು ದೃಢಪಟ್ಟಿಲ್ಲ. ಪ್ರತಿಭಟನಾಕಾರರು ದೊಡ್ಡ ಸಂಖ್ಯೆಯಲ್ಲಿ ಸೇರಿರುವುದರಿಂದ ಪೊಲೀಸರು ಇನ್ನೂ ಗ್ರಾಮವನ್ನು ತಲುಪಲು ಸಾಧ್ಯವಾಗಿಲ್ಲ” ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

https://newsnotout.com/2024/01/nursery-and-school-leave-in-up/

Related posts

ಸರ್ಕಾರಿ ಕಚೇರಿ ಮತ್ತು ಕಾರ್ಯಕ್ರಮಗಳಲ್ಲಿ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲ್ ನಿಷೇಧ..! ಕರ್ನಾಟಕ ಸರ್ಕಾರದಿಂದ ಸುತ್ತೋಲೆ

ಮೀನು ಸೇವನೆ ಮಾಡಿದ ಮಹಿಳೆಗೇನಾಯ್ತು? ಆಕೆ ತನ್ನ ಕೈ,ಕಾಲುಗಳನ್ನೇ ಕಳೆದು ಕೊಂಡಿದ್ದೇಕೆ?

ಮಡಿಕೇರಿ-ಸಂಪಾಜೆ: ಹೃದಯಾಘಾತಕ್ಕೆ ಯುವಕ ಬಲಿ, ಪತ್ನಿ ಮನೆಯಲ್ಲಿಲ್ಲದ ವೇಳೆ ನಡೆಯಿತು ದುರಂತ..!