Uncategorized

ಮಂಗಳೂರು: ವಿಧಾನ ಪರಿಷತ್ ಉಪಚುನಾವಣೆಯಲ್ಲಿ ಬಿಜೆಪಿಯ ಕಿಶೋರ್ ಕುಮಾರ್ ಗೆ ಕೈ ಹಿಡಿದ ಮತದಾರ..! 1693 ಮತಗಳ ಅಂತರದ ಗೆಲುವು..!

ನ್ಯೂಸ್ ನಾಟೌಟ್: ವಿಧಾನಪರಿಷತ್‌‌ ನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸ್ಥಳೀಯ ಪ್ರಾಧಿಕಾರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಬೊಟ್ಯಾಡಿ 1693 ಮತಗಳ ಅಂತರದೊಂದಿಗೆ ಗೆಲುವು ಸಾಧಿಸಿದ್ದಾರೆ.

ಪರಿಷತ್ ಸದಸ್ಯರ ಆಯ್ಕೆಗೆ ಅಕ್ಟೋಬರ್ 21ರಂದು ಮತದಾನ ನಡೆದಿತ್ತು. ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ನಡೆದ ಮತ ಎಣಿಕೆಯ ಹಂತ ಪೂರ್ಣ ಗೊಂಡಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸ್ಥಳೀಯ ಪ್ರಾಧಿಕಾರದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ರಾಜು ಪೂಜಾರಿ, ಎಸ್‌‌ಡಿಪಿಐ ಅಭ್ಯರ್ಥಿ ಅನ್ವರ್‌‌ ಸಾದತ್‌‌ ಬಜತ್ತೂರು, ಪಕ್ಷೇತರ ಅಭ್ಯರ್ಥಿ ದಿನಕರ್ ರವರ ವಿರುದ್ಧ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಬೊಟ್ಯಾಡಿ ಗೆಲುವು ಸಾಧಿಸಿದ್ದಾರೆ. ಅಧಿಕೃತ ಘೋಷಣೆ ಇನ್ನಷ್ಟೇ ಆಗಬೇಕಿದೆ.

Related posts

ಮಹಿಳಾ ಪ್ರಯಾಣಿಕೆಗೆ ಗುಪ್ತಾಂಗ ತೋರಿಸಿ ವಿಕೃತಿ ಮೆರೆದ ಕ್ಯಾಬ್ ಚಾಲಕ..! ಅರ್ಧ ರಾತ್ರಿಯಲ್ಲಿ ಮಹಿಳೆ ಕಿರುಚಿಕೊಂಡು ಓಡಿದ್ದೆಲ್ಲಿಗೆ?

ನಟ ನಾಗ ಚೈತನ್ಯ ಶೋಭಿತಾ ಜೊತೆ ನಿಶ್ಚಿತಾರ್ಥ..! ಕುತೂಹಲ ಮೂಡಿಸಿದ ಮಾಜಿ ಪತ್ನಿ ನಟಿ ಸಮಂತಾ ಪ್ರತಿಕ್ರಿಯೆ..!

ಸನ್ಯಾಸ ದೀಕ್ಷೆ ಸ್ವೀಕರಿಸಿದ ಮಾಜಿ ಸಚಿವ!