ಕ್ರೈಂದೇಶ-ವಿದೇಶಮಂಗಳೂರುವೈರಲ್ ನ್ಯೂಸ್

ಮಂಗಳೂರು: ದೇವಸ್ಥಾನ ಬಳಿ ಯುವಕನಿಗೆ ಚೂರಿ ಇರಿತ..! ಏನಿದು ಘಟನೆ..?

ನ್ಯೂಸ್ ನಾಟೌಟ್: ಯುವಕನಿಗೆ ಚೂರಿಯಿಂದ ಇರಿದ ಘಟನೆ ಮಂಗಳೂರಿನ ಉಳ್ಳಾಲ ಠಾಣಾ ವ್ಯಾಪ್ತಿಯ ತಲಪಾಡಿ ದೇವಸ್ಥಾನ ಬಳಿ ನಡೆದಿದೆ. ಕಿನ್ಯ ನಿವಾಸಿ ಮನೋಜ್ ಆಚಾರ್ಯ (31) ಚೂರಿ ಇರಿತಕ್ಕೊಳಗಾದ ವ್ಯಕ್ತಿ ಎಂದು ವರದಿ ತಿಳಿಸಿದೆ.

ಶರತ್ ಎಂಬಾತ ಚೂರಿಯಿಂದ ಇರಿದ ಆರೋಪಿ ಎನ್ನಲಾಗಿದೆ. ಮನೋಜ್ ಮತ್ತು ಶರತ್ ಗೆ ಕುಟುಂಬ ಹಾಗೂ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಹಳೇ ದ್ವೇಷ ಇತ್ತು ಎನ್ನಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಶರತ್ ಮನೋಜ್ ಆಚಾರ್ಯ ಎಂಬಾತನನ್ನು ಆಗಾಗ ಕಿರಿಕ್ ಮಾಡುತ್ತಿದ್ದ ಎನ್ನಲಾಗಿದೆ. ಆದಿತ್ಯವಾರ(ಮೇ.19) ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮನೋಜ್ ಗೆ ಶರತ್ ಚೂರಿಯಿಂದ ಇರಿದು ಗಾಯಗೊಳಿಸಿದ್ದಾನೆ. ಈ ಬಗ್ಗೆ ಮನೋಜ್ ನೀಡಿದ ದೂರಿನಂತೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Click 👇

https://newsnotout.com/2024/05/bengaluru-and-jolly-bike-ride-and-viral-video
https://newsnotout.com/2024/05/narendra-modi-and-teacher-rajak
https://newsnotout.com/2024/05/30-year-old-jyoti-amge-viral-video

Related posts

ಕೇಂದ್ರದ ಪಟ್ಟಿ ಬಿಡುಗಡೆಗೂ ಒಂದು ದಿನ ಮೊದಲೇ ಪುತ್ತೂರು, ಸುಳ್ಯ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದ ‘ನ್ಯೂಸ್ ನಾಟೌಟ್’

ಬ್ರಹ್ಮಾವರ: ಮೀನು ಹಿಡಿಯಲು ತೆರಳಿದ್ದ ನಾಲ್ವರು ನೀರುಪಾಲು

ಸತೀಶ್ ಜಾರಕಿಹೊಳಿ‌ ಮುಂದಿನ ಮುಖ್ಯಮಂತ್ರಿ ಎಂದು ಬಿತ್ತಿಪತ್ರ ಹಿಡಿದು ಅಭಿಮಾನಿಗಳಿಂದ ಸಿಗಂದೂರು ಚೌಡೇಶ್ವರಿಗೆ ಪೂಜೆ..! ಸಿಎಂ ಕುರ್ಚಿ ಬಗ್ಗೆ ಕಾಂಗ್ರೆಸ್ ನಲ್ಲಿ ಜಾಟಾಪಟಿ..!