ಕರಾವಳಿ

ನೀರಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ಸಾವು

ನ್ಯೂಸ್ ನಾಟೌಟ್ : ಈಜಲೆಂದು ನೀರಿಗೆ ಇಳಿದ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹೂಡೆ ಬೀಚ್ ನಲ್ಲಿ ಮುಳುಗಿ ಸಾವನ್ನಪ್ಪಿದ್ದ ಘಟನೆ ಭಾನುವಾರ ಸಂಜೆ 6 ಗಂಟೆಗೆ ಸಂಭವಿಸಿದ್ದು ನಾಪತ್ತೆಯಾಗಿದ್ದ ಹೈದರಬಾದಿನ ಶ್ರೀಕರ ಮೃತದೇಹವೂ ಪತ್ತೆಯಾಗಿದೆ.

ಮೃತರನ್ನು ಬೆಂಗಳೂರಿನ ಷಣ್ಮುಖ (19), ನಿಶಾಂತ್ (19) ಹೈದರಬಾದಿನ ಶ್ರೀಕರ (19) ಎಂದು ಗುರುತಿಸಲಾಗಿದೆ. ವಾರಾಂತ್ಯ ಹಿನ್ನಲೆಯಲ್ಲಿ ಮಣಿಪಾಲದ ಕಾಲೇಜಿನ 15 ವಿದ್ಯಾರ್ಥಿಗಳ ತಂಡ ಬೀಚ್ ಗೆ ತೆರಳಿತ್ತು. ಸಮುದ್ರದಲ್ಲಿ ನೀರಿನಲ್ಲಿ ಎಲ್ಲರೂ ನೀರಾಟವಾಡುತ್ತಿದ್ದರು. ಈ ವೇಳೆ ಮೂವರು ಖಾಸಗಿ ಗೆಸ್ಟ್ ಹೌಸ್ ಸಮೀಪದವರೆಗೂ ಈಜುತ್ತಾ ಹೋಗಿದ್ದು, ಅಷ್ಟರಲ್ಲಿ ಅಲೆಗಳ ಅಬ್ಬರಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದರು. ಇಬ್ಬರನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದರೂ ಅದಾಗಲೇ ಅವರು ಸಾವನ್ನಪ್ಪಿದ್ದರು. ಇನ್ನು ನಾಪತ್ತೆಯಾಗಿದ್ದ ವಿದ್ಯಾರ್ಥಿ ಶ್ರೀಕರ್ ಮೃತದೇಹ ಸೆಪ್ಟೆಂಬರ್ 26 ಸೋಮವಾರ ಮುಂಜಾನೆ ಪತ್ತೆಯಾಗಿದೆ.

ಭಾನುವಾರ ಅಮಾವಾಸ್ಯೆಯಾದರಿಂದ ಕಡಲ ಅಬ್ಬರ ಹೆಚ್ಚಾಗಿತ್ತು. ಈ ಮೂವರು ಮಾರಿಯಾ (ಸಮುದ್ರ ತೀರದಲ್ಲಿ ಸೃಷ್ಟಿಯಾಗುವ ಹೊಂಡ) ಬೀಳುವ ಜಾಗದಲ್ಲಿ ಈಜುತ್ತಿದ್ದರು ಎನ್ನಲಾಗಿದೆ. ಇದು ಹೆಚ್ಚು ಅಪಾಯಕಾರಿ ಸ್ಥಳವಾಗಿದೆ. ಮಲ್ಪೆ ಬೀಚ್ ನಲ್ಲಿ ಹೂಡೆ ಬೀಚ್ ನಲ್ಲಿರುವಂತೆ ಜೀವರಕ್ಷಕ ತಂಡಗಳು ಇರುವುದಿಲ್ಲ.

Related posts

ಮಂಗಳೂರು:ಮಂಗಳೂರು ಉತ್ತರ ಕ್ಷೇತ್ರದಿಂದ ಮೊಯ್ದಿನ್ ಬಾವಾ ಕಣಕ್ಕೆ,ಕಾಂಗ್ರೆಸ್ ತೊರೆದು ಜೆಡಿಎಸ್ ನಿಂದ ಸ್ಪರ್ಧೆ

ಸುಳ್ಯ: ಕಾಂತಾರ ತುಳು ಸಿನಿಮಾ ನೋಡಲು ಬಂದ ಮುಸ್ಲಿಂ ವಿದ್ಯಾರ್ಥಿಗಳಿಗೆ ಧರ್ಮದೇಟು..!

ದೊಡ್ಡಡ್ಕ ಶ್ರೀ ಕೊರಗಜ್ಜ ಸ್ವಾಮಿ ದೈವಸ್ಥಾನದ ರೂವಾರಿ ದಿವಂಗತ ಗುರುವಪ್ಪ ರವರ ಪತ್ನಿ ನಿಧನ