ಕರಾವಳಿದೇಶ-ಪ್ರಪಂಚ

ಫ್ಯಾಶನ್ ಶೋ ಸ್ಪರ್ಧೆಯಲ್ಲಿ ಮಿಂಚು ಹರಿಸಿದ ಮಂಗಳೂರಿನ ಮುಸ್ಲಿಂ ಮಹಿಳೆ, ಗ್ಲೋಬಲ್ ಮಿಸೆಸ್ ಇಂಡಿಯಾ ಇಂಟರ್‌ನ್ಯಾಷನಲ್‌ ಯೂನಿವರ್ಸ್ ಪ್ರಶಸ್ತಿ ಮುಡಿಗೇರಿಸಿದ ಶಮಾ ವಾಜಿದ್

ನ್ಯೂಸ್‌ ನಾಟೌಟ್‌: ಹೊಸದಿಲ್ಲಿಯಲ್ಲಿ ಗ್ಲೋಬಲ್ ಇಂಡಿಯಾ ಎಂಟರ್‌ಟೈನ್‌ಮೆಂಟ್‌ ಪ್ರೊಡಕ್ಷನ್ಸ್ ಸಂಸ್ಥೆ ಆಯೋಜಿಸಿದ ಫ್ಯಾಶನ್ ಶೋ ಸ್ಪರ್ಧೆಯಲ್ಲಿ ಮಂಗಳೂರಿನ ಮುಸ್ಲಿಂ ಮಹಿಳೆ ಶಮಾ ವಾಜಿದ್ ಅವರು “ಗ್ಲೋಬಲ್ ಮಿಸೆಸ್ ಇಂಡಿಯಾ ಇಂಟರ್‌ನ್ಯಾಷನಲ್‌ ಯೂನಿವರ್ಸ್ – 2023’’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಈ ಮೂಲಕ 2024ರ ಗ್ಲೋಬಲ್ ಮಿಸೆಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಅವಕಾಶ ಪಡೆದಿದ್ದಾರೆ.ದೇಶದ 22 ರಾಜ್ಯಗಳಲ್ಲಿ ಈ ಸ್ಪರ್ಧೆಯ ಆಡಿಷನ್‌ ನಡೆದಿತ್ತು. ಸಾವಿರಾರು ಮಹಿಳೆಯರು ಪಾಲ್ಗೊಂಡಿದ್ದರು.

ಹೊಸದಿಲ್ಲಿಯಲ್ಲಿ ನಡೆದ ಗ್ರ್ಯಾಂಡ್ ಫಿನಾಲೆಯ ಟಾಪ್‌ 40 ಮಂದಿಯಲ್ಲಿ ಶಮಾ ವಾಜಿದ್ ಕೂಡ ಒಬ್ಬರಾಗಿದ್ದರು. ಗ್ರ್ಯಾಂಡ್ ಫಿನಾಲೆಗೆ ಆಯ್ಕೆಯಾಗಿದ್ದ ಎಲ್ಲಾ ಸ್ಪರ್ಧಿಗಳು ಕ್ಯಾಟ್‌ವಾಕ್, ಗ್ರೂಮಿಂಗ್, ಕೊರಿಯೋಗ್ರಫಿ, ಇಮೇಜ್ ಕನ್ಸಲ್ಟಿಂಗ್, ಫಿಟ್‌ನೆಸ್ ಬಗ್ಗೆ 5 ದಿವಸಗಳ ಮಾರ್ಗದರ್ಶನ ಪಡೆದಿದ್ದರು.ಕರ್ನಾಟಕವನ್ನು ಪ್ರತಿನಿಧಿಸಿದ ಶಮಾ ವಾಜಿದ್‌ ಪೂಲ್ ರೌಂಡ್, ಎಥ್ನಿಕ್ ರೌಂಡ್, ಟ್ಯಾಲೆಂಟ್ ರೌಂಡ್ ಮತ್ತು ಫಾರ್ಮಲ್ ರೌಂಡ್‌ ಮೊದಲಾದ ಬೇರೆ ಬೇರೆ ಸುತ್ತುಗಳಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿ 10 ಫೈನಲಿಸ್ಟ್‌ಗಳಲ್ಲಿ ಸ್ಥಾನ ಪಡೆದಿದ್ದಾರೆ.

ಅಂತಿಮವಾಗಿ ಗ್ಲೋಬಲ್ ಮಿಸೆಸ್ ಇಂಡಿಯಾ ಇಂಟರ್ ನ್ಯಾಷನಲ್ ಯೂನಿವರ್ಸ್ 2023ರ ಕಿರೀಟವನ್ನು ತನ್ನದಾಗಿಸಿಕೊಂಡಿದ್ದಾರೆ. ಬಾಲಿವುಡ್ ನಟಿ ಮಲೈಕಾ ಅರೋರಾ ಅವರು ಶಮಾ ವಾಜಿದ್ ಅವರಿಗೆ ಪ್ರಶಸ್ತಿ ಪ್ರದಾನಿಸಿದರು.ಶಮಾ ವಾಜಿದ್ ಅವರು ಮಂಗಳೂರಿನ ಶ್ರೀನಿವಾಸ ಆರ್ಕಿಟೆಕ್ಟ್ ಕಾಲೇಜಿನ ಪ್ರೊಫೆಸರ್ ಆಗಿದ್ದಾರೆ.

ಈ ಸ್ಪರ್ಧೆಯಲ್ಲಿ ಭಾಗವಹಿಸಲು ಮದುವೆಯಾದ ಮಹಿಳೆಯರಿಗೆ ಮಾತ್ರ ಅವಕಾಶವಿದ್ದು, ಅದರಲ್ಲೂ ಶಮಾ ವಾಜಿದ್‌ ಅವರಿಗೆ ಒಂದು ವರ್ಷದ ಪುಟ್ಟ ಮಗುವಿದೆ. ಅದರ ಪಾಲನೆ ಮಾಡಿ ಜತೆಗೆ ಈ ಸಾಧನೆ ಮಾಡಿದ್ದಾರೆ. ಮುಸ್ಲಿಂ ಸಮುದಾಯದ ಮಹಿಳೆಯರು ಫ್ಯಾಶನ್‌ ಸ್ಪರ್ಧೆಯಲ್ಲಿ ಭಾಗವಹಿಸುವುದು ಬಹಳ ಅಪರೂಪ. ಮನೆಯವರ ಪ್ರೋತ್ಸಾಹದಿಂದ ಈ ಸಾಧನೆ ಮಾಡಿದ್ದಾರೆ. ಇವರ ಈ ಸಾಧನೆ ತುಳುನಾಡಿಗೆ ಹೆಮ್ಮೆಯಾಗಿದೆ.

Related posts

ಕಲ್ಲುಗುಂಡಿ: ಅನಾರೋಗ್ಯದಿಂದ ವ್ಯಕ್ತಿ ಹಠಾತ್ ಸಾವು, ಮಂಗಳೂರಿನಲ್ಲಿ ಅಸುನೀಗಿದ ನಂದನ ಫ್ಯಾನ್ಸಿ ಮಾಲೀಕ

ಮಹಿಳೆ ಜತೆ ವೈದ್ಯ ಅಸಭ್ಯ ವರ್ತನೆ ಪ್ರಕರಣಕ್ಕೆ ಭಾರಿ ತಿರುವು..ವೈದ್ಯ ನಿರಾಪರಾಧಿ..?

ಕೇರಳದಿಂದ ಕಡಬಕ್ಕೆ ಬಂದು 40 ಎಕರೆ ಸರ್ಕಾರಿ ಭೂಮಿಯನ್ನು ಗುಳುಂ ಮಾಡಿದ ಆಸಾಮಿ..! ಗೋಳಿತೊಟ್ಟು ಗ್ರಾಮ ಪಂಚಾಯತ್ ಪಿಡಿಒಗೆ ಹಿಗ್ಗಾಮುಗ್ಗಾ ಕ್ಲಾಸ್‌..!