ಕರಾವಳಿಕೊಡಗು

ಮಂಗಳೂರು: ಏಳು ವರ್ಷದ ಮಗುವಿನೊಂದಿಗೆ ತಾಯಿ ನಾಪತ್ತೆ!

ನ್ಯೂಸ್ ನಾಟೌಟ್ : ಬಿಹಾರ ಮೂಲದ ಮಹಿಳೆಯೊಬ್ಬರು ತನ್ನ ಏಳು ವರ್ಷದ ಮಹಿಳೆಯೊಂದಿಗೆ ನಾಪತ್ತೆಯಾದ ಘಟನೆ ಮಂಗಳೂರು ಹೊರವಲಯದ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಪಿಂಕಿ ದೇವಿ (36 ವರ್ಷ) ಹಾಗೂ 7 ವರ್ಷದ ಆಕೆಯ ಮಗು ನಾಪತ್ತೆಯಾದವರು.

ಬಿಹಾರ ಮೂಲದ ರವೀಂದ್ರ ಶಾ ಎಂಬವರು ತನ್ನ ಪತ್ನಿ ಹಾಗೂ ಮಗುವಿನೊಂದಿಗೆ ಉಳ್ಳಾಲ ಹೊಯಿಗೆ ಮರಿಯ ಕ್ಲಬ್ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಏ.11 ರಂದು ರವೀಂದ್ರ ಕೆಲಸ ಮುಗಿಸಿ ಮನೆಗೆ ಹಿಂತಿರುಗಿದಾಗ ಪತ್ನಿ ಹಾಗೂ ಮಗ ಮನೆಯಲ್ಲಿ ನಾಪತ್ತೆಯಾಗಿದ್ದರು ಎನ್ನಲಾಗಿದೆ.ಕರೆ ಮಾಡಿದರೂ ಫೋನ್ ಸ್ವಿಚ್ ಆಫ್ ಬಂದಿತ್ತು . ಅದೇ ದಿನ ಬಾಡಿಗೆ ಮನೆಯ ಪಕ್ಕದಲ್ಲಿ ವಾಸವಾಗಿರುವ ಬಿಹಾರ್ ರಾಜ್ಯದ ರಂಜನ್ ಕುಮಾರ್ ಎಂಬಾತನು ಕೂಡಾ ನಾಪತ್ತೆಯಾಗಿದ್ದರು.

ಆತನ ಮೊಬೈಲ್ ಕೂಡಾ ಸ್ವಿಚ್ ಆಫ್ ಆಗಿದೆ. ಈ ಬಗ್ಗೆ ಸ್ವಂತ ಊರಿನಲ್ಲಿ ವಿಚಾರಿಸಿದಾಗ ಪತ್ನಿ ಮನೆಗೆ ಹೋಗಿರುವುದಿಲ್ಲ ಎಂದು ತಿಳಿದು ಬಂದಿದೆ. ನಾಪತ್ತೆಯಾದ ಪತ್ನಿ ಮತ್ತು ಮಗುವನ್ನು ಹುಡುಕಿ ಕೊಡುವಂತೆ ಉಳ್ಳಾ ಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ.

Related posts

ದಸರಾ ಆನೆ ಬಲರಾಮನಿಗೆ ಗುಂಡು ಹೊಡೆದ ಪಾಪಿ..!

ಸ್ಪೀಕರ್ ಯು.ಟಿ. ಖಾದರ್ ಅವರಿಗೆ “ದಿ ಗ್ರೇಟ್ ಸನ್ ಆಫ್ ಇಂಡಿಯಾ” ಪ್ರಶಸ್ತಿ ಪ್ರದಾನ

ಒಳ ಉಡುಪಿನಲ್ಲಿ ಚಿನ್ನ ಸಾಗಿಸಿ ಸಿಕ್ಕಿಬಿದ್ದ 19 ವರ್ಷದ ಯುವತಿ