ಕರಾವಳಿ

ಮಂಗಳೂರು: ಕರಾವಳಿಯಲ್ಲಿ ಅವಾಂತರ ಸೃಷ್ಟಿಸಿದ ಭಾರಿ ಮಳೆ, ಕೆಲಸಕ್ಕೆ ಹೋಗುತ್ತಿದ್ದ ಯುವಕ ದಾರುಣ ಅಂತ್ಯ..!

ನ್ಯೂಸ್‌ ನಾಟೌಟ್‌: ಮಂಗಳೂರಲ್ಲಿ ವರುಣನ ಅರ್ಭ ಜೋರಾಗಿದೆ. ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಹಲವೆಡೆ ಅವಘಡ ಸಂಭವಿಸಿದೆ. ಮಂಗಳೂರು ಹೊರವಲಯದ ಸುರತ್ಕಲ್ ಬಳಿಯ ಕುಳಾಯಿಯಲ್ಲಿ ಕಡಿದು ಬಿದ್ದ ವಿದ್ಯುತ್ ತಂತಿ ತುಳಿದು ಯುವಕನೋರ್ವ ಮೃತಪಟ್ಟಿದ್ದಾನೆ.

ಮೃತ ಯುವಕನ್ನು ಕುಷ್ಟಗಿ ಮೂಲದ ಸಂತೋಷ್ (28) ಎಂದು ಗುರುತಿಸಲಾಗಿದೆ. ನಿನ್ನೆ ರಾತ್ರಿ ಬಿರುಗಾಳಿ ಸಹಿತ ಭಾರಿ ಮಳೆಗೆ ವಿದ್ಯುತ್‌ ತಂತಿ ಕಡಿದು ರಸ್ತೆಗೆ ಬಿದ್ದಿತ್ತು. ಇಂದು ಬೆಳಗ್ಗೆ ಕೆಲಸಕ್ಕೆ ಹೋಗುತ್ತಿದ್ದಾಗ ವಿದ್ಯುತ್ ತಂತಿ ತುಳಿದಿದ್ದ ಯುವಕನಿಗೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಕುಷ್ಟಗಿ ಮೂಲದ ಸಂತೋಷ್ ಕೆಲಸ ಹುಡುಕಿಕೊಂಡು ಮಂಗಳೂರಿಗೆ ಬಂದು ಬಾಡಿಗೆ ಮನೆಯಲ್ಲಿ ವಾಸವಿದ್ದ. ಇಲ್ಲಿನ ಕೈಗಾರಿಕಾ ಸಂಕೀರ್ಣಕ್ಕೆ ಕೆಲಸಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

Related posts

ಭಾರಿ ಮಳೆ: ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ- ಕಾಲೇಜಿಗೆ ನಾಳೆ (ಜು.16) ರಜೆ ಘೋಷಣೆ

ಉಳ್ಳಾಲ: ಸಿಸಿಟಿವಿ ಡಿವಿಆರ್ ಕಿತ್ತು ಅಂಗಡಿಯಲ್ಲೇ ಬಿಟ್ಟು ಹೋದ ಮರೆವಿನ ಕಳ್ಳ..! ಸಿಸಿಟಿವಿ ಪರೀಕ್ಷಿಸಿದಾಗ ಬಯಲಿಗೆ ಬಂತು ಸರಣಿ ಕಳ್ಳನ ಅಸಲಿಯತ್ತು..ಇಲ್ಲಿದೆ ನೋಡಿ ವಿಡಿಯೋ..!

ತಾಯಿಗೆ ಪಿಂಡ ಪ್ರದಾನ ಮಾಡಲು ಹೋದ ಮಗ ಕೆರೆಗೆ ಬಿದ್ದು ದುರಂತ ಅಂತ್ಯ