ನ್ಯೂಸ್ ನಾಟೌಟ್: 9ನೇ ತರಗತಿ ಪಾಸಾಗಿದ್ದಕ್ಕೆ ಫ್ಲೈಯಿಂಗ್ ಕಿಸ್ ಕೊಟ್ಟು ವಿದ್ಯಾರ್ಥಿನಿಯಲ್ಲಿ ಟ್ರೀಟ್ ಕೇಳಿ ಲೈಂಗಿಕ ಕಿರುಕುಳ ನೀಡಿದ್ದ ಅನ್ಯಮತೀಯ ಆಟೋ ಚಾಲಕನನ್ನ ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ಸದ್ಯ ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಬೆಳ್ಮ ಗ್ರಾಮದ ನಿವಾಸಿ ಆಟೋ ಚಾಲಕ ಇಕ್ಬಾಲ್ (37)ಬಂಧಿತ ಆರೋಪಿ. ಅಂಬ್ಲಮೊಗರು ಗ್ರಾಮದ SSLCಯ ಅಪ್ರಾಪ್ತ ವಿದ್ಯಾರ್ಥಿನಿಗೆ ಆರೋಪಿ ಇಕ್ಬಾಲ್ ಲೈಂಗಿಕ ಕಾಟ ಕೊಟ್ಟಿದ್ದಾನೆ. ಈತನ ವಿರುದ್ಧ ಸದ್ಯ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
SSLC ಓದುತ್ತಿರುವ ಸಂತ್ರಸ್ತ ವಿದ್ಯಾರ್ಥಿನಿ ಜೂನ್ ತಿಂಗಳಲ್ಲಿ ಬಸ್ ನಿಲ್ದಾಣದಲ್ಲಿ ಬೆಳಗ್ಗೆ ಶಾಲೆಗೆ ತೆರಳಲು ನಿಂತಿದ್ದಳು. ಈ ಸಂದರ್ಭದಲ್ಲಿ ಹತ್ತಿರಕ್ಕೆ ಬಂದ ಬಂಧಿತ ಇಕ್ಬಾಲ್ , ‘9ನೇ ತರಗತಿ ಪಾಸಾಗಿದ್ದಕ್ಕೆ ಟ್ರೀಟ್ ಇಲ್ವಾ.. ಚಾಕಲೇಟ್ ಇಲ್ಲದಿದ್ದರೆ ಬೇರೇನಾದರೂ ಕೊಡು.. ನಿನ್ನನ್ನ ನಾನು ಆಟೋದಲ್ಲಿ ಫ್ರೀಯಾಗಿ ಕರ್ಕೊಂಡು ಹೋಗ್ತೀನಿ ಎಂದು ಆರೋಪಿ ಇಕ್ಬಾಲ್ ಪೀಡಿಸಿದ್ದಾನೆ.
ಅಷ್ಟು ಮಾತ್ರವಲ್ಲ ಮತ್ತೂ ಮುಂದುವರಿದು ಬಾಲಕಿಯ ಕೈ, ಎದೆ ಭಾಗವನ್ನ ಸ್ಪರ್ಶಿಸಿ ಅಶ್ಲೀಲವಾಗಿ ಫ್ಲೈಯಿಂಗ್ ಕಿಸ್ ಕೊಡುತ್ತಿದ್ದನಂತೆ. ಇದರಿಂದ ನೊಂದ ಬಾಲಕಿ ರಿಕ್ಷಾ ಚಾಲಕ ಇಕ್ಬಾಲನ ಕಾಟ ತಾಳಲಾರದೆ ಮನೆಮಂದಿಗೆ ವಿಚಾರ ತಿಳಿಸಿದ್ದಳು.
ಸಂತ್ರಸ್ತ ಬಾಲಕಿಯ ತಾಯಿ ನೀಡಿದ್ದ ದೂರಿನ ಪ್ರಕಾರವಾಗಿ ಕೊಣಾಜೆ ಠಾಣೆಯಲ್ಲಿ ಆರೋಪಿ ಇಕ್ಬಾಲ್ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಆರೋಪಿ ಇಕ್ಬಾಲ್ ನನ್ನು ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.