ಸುಳ್ಯ

ಮಂಡೆಕೋಲಿನಲ್ಲಿ ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ಬಡವರಿಗೆ ಮನೆ ನಿರ್ಮಾಣ, ನೆರವೇರಿದ ಗುದ್ದಲಿ ಪೂಜೆ

ಸುಳ್ಯ: ವಿಕ್ರಮ್ ಫೌಂಡೇಶನ್, ಸುಳ್ಯ ತಾಲೂಕು ಹಿಂದೂ ಜಾಗರಣ ವೇದಿಕೆ  ಮಂಡೆಕೋಲು ಘಟಕದ ಕಾರ್ಯಕರ್ತರು ಊರವರು ಹಾಗೂ ದಾನಿಗಳ ನೇತೃತ್ವದಲ್ಲಿ ಬಡ ಕುಟುಂಬಗಳಿಗೆ ಮನೆ ನಿರ್ಮಿಸಲು ಮುಂದಾಗಿದ್ದು  ಮೂರು ಮನೆಗಳಿಗೆ ಗುದ್ದಲಿಪೂಜೆ ಕಾರ್ಯಕ್ರಮ ನಡೆದಿದೆ. ವಿಕ್ರಮ್ ಫೌಂಡೇಶನ್ ನ ಸಂಸ್ಥಾಪಕರಾದ ಮಹೇಶ್ ವಿಕ್ರಮ್ ಹೆಗ್ಡೆಯವರು ಗುದ್ದಲಿಪೂಜೆ ನಡೆಸಿದರು. ಉದಯ ಆಚಾರ್ಯರ ನೇತೃತ್ವ ದಲ್ಲಿ ಪೂಜಾ ಕಾರ್ಯಕ್ರಮ ನಡೆದವು.

ಈ ಸಂದರ್ಭದಲ್ಲಿ ಹಿಂದು ಜಾಗರಣ ವೇದಿಕೆ ಸುಳ್ಯ ತಾಲೂಕು ಅಧ್ಯಕ್ಷ ಮಹೇಶ್ ಉಗ್ರಾಣಿಮನೆ, ಪಂಚಾಯತ್ ಉಪಾಧ್ಯಕ್ಷ ಅನಿಲ್ ತೋಟಪ್ಪಾಡಿ, ಪಂಚಾಯತ್ ಸದಸ್ಯೆ ಪ್ರತಿಭಾ ಭಟ್, ಬಾಲಚಂದ್ರ ದೇವರಗುಂಡ, ತಾರಾನಾಥ ಪೇರಾಲು, ದಿವ್ಯ ಲತಾ, ತಿಲಕ ಕುತ್ಯಾಡಿ, ಜಾಗರಣದ ಹಿರಿಯ ಕಾರ್ಯಕರ್ತರಾದ ಲಕ್ಷ್ಮಣ ಉಗ್ರಾಣಿಮನೆ, ಅಜಿತ್ ಬನ್ನೂರು,ವೆಂಕಟ್ರಮಣ ಅತ್ಯಾಡಿ ಹಾಗೂ ಊರವರು ಉಪಸ್ಥಿತರಿದ್ದರು.

Related posts

ಸುಳ್ಯ : ಎನ್ನೆಂಪಿಯುಸಿಯ ವಿದ್ಯಾರ್ಥಿನಿ ಜಿಲ್ಲಾ ಮಟ್ಟದ ತ್ರೋಬಾಲ್ ಪಂದ್ಯಾಟಕ್ಕೆ ಆಯ್ಕೆ

ಸಂಪಾಜೆ: ಗೌರಿ ಲಂಕೇಶ್ ಹತ್ಯೆ ಪ್ರಕರಣ, ಸಂಪಾಜೆಯ ನಿವಾಸಿಗೆ ಸುದೀರ್ಘ 6 ವರ್ಷದ ಬಳಿಕ ಜಾಮೀನು

ಕೆವಿಜಿ ಸಮಾಜ ಸೇವಾ ಸಂಘ (ರಿ.) ಸುಳ್ಯ ವತಿಯಿಂದ ಡಾ ಕೆವಿಜಿ ಯವರ 96ನೇ ಜಯಂತ್ಯೋತ್ಸವ ಆಚರಣೆ, ಕೃಷಿ ಕಾರ್ಯದಲ್ಲಿ ಅಪಘಾತಗೊಂಡು ದೈಹಿಕ ಶಕ್ತಿಯನ್ನು ಕಳೆದುಕೊಂಡ ಯುವಕರಿಗೆ ಸಹಾಯಧನ