ಕರಾವಳಿ

ಮಂಗಳೂರು: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ, ಮನೆ ಮಾಲೀಕನ ಬಂಧನ

621
Spread the love

ಮಂಗಳೂರು: ಬಾಡಿಗೆ ಮನೆಯಲ್ಲಿ ವಾಸವಿದ್ದ ಬಾಲಕಿಗೆ ಮನೆ ಮಾಲೀಕನೇ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ. ಸಂತ್ರಸ್ತೆಯ ತಾಯಿ ನೀಡಿದ ದೂರಿನ ಮೇಲೆ ಪಾಂಡೇಶ್ವರ ಮಹಿಳಾ ಪೊಲೀಸರು ಆರೋಪಿ ಪೆರ್ಮುದೆ ನಿವಾಸಿ ರಾಮಕೃಷ್ಣ ಎನ್ನುವವರನ್ನು ಬಂಧಿಸಿದ್ದಾರೆ. ಆರೋಪಿಯನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಏನಿದು ಪ್ರಕರಣ?

ಆಗಸ್ಟ್ 21ರಂದು ತುರ್ತು ಕೆಲಸಕ್ಕಾಗಿ ತಾಯಿ ಶಿವಮೊಗ್ಗಕ್ಕೆ ಮಕ್ಕಳನ್ನು ಬಿಟ್ಟು ಹೋಗಿದ್ದರು. ಮಕ್ಕಳನ್ನು ನೋಡಿಕೊಳ್ಳುವಂತೆ ಆರೋಪಿಯ ಪತ್ನಿಗೆ ಹೇಳಿದ್ದರು. ಸಂಜೆಯ ವೇಳೆಗೆ ಮೂವರು ಮಕ್ಕಳು ಆರೋಪಿಯ ಮನೆಗೆ ಟಿವಿ ನೋಡಲು ಹೋಗಿದ್ದು, ಆಗ ಆರೋಪಿಯ ಪತ್ನಿ ಕಟ್ಟಿಗೆ ತರಲೆಂದು ಅವರ ಇಬ್ಬರು ಮಕ್ಕಳನ್ನು ಕರೆದುಕೊಂಡು ಹೋಗಿದ್ದರು. ಈ ಸಂದರ್ಭ ಆರೋಪಿ ಎಂಟು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ . ಮರುದಿನವೂ ಆರೋಪಿ ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರಕ್ಕೆ ಯತ್ನಿಸಿದ ಸಂತ್ರಸ್ತೆಯ ತಾಯಿ ಶಿವಮೊಗ್ಗದಿಂದ ಹಿಂತಿರುಗಿ ಬಂದಾಗ ಮಗಳು ವಿಷಯ ತಿಳಿಸಿದ್ದಾಳೆ ಎಂದು ತಿಳಿದು ಬಂದಿದೆ.

See also  ದಕ್ಷಿಣ ಕನ್ನಡ ಗಡಿ ಭಾಗದ ಕೇರಳದಲ್ಲಿ ಹಕ್ಕಿ ಜ್ವರದ ಭೀತಿ..! ಸುಳ್ಯ ಸಮೀಪದ ಜಾಲ್ಸೂರು ಸೇರಿದಂತೆ ಗಡಿ ಭಾಗಗಳಲ್ಲಿ ಕಟ್ಟೆಚ್ಚರ, ಕೋಳಿ ಮಾಂಸ ಪ್ರಿಯರು, ಮಾರಾಟಗಾರರಿಗೆ ಒಂದಷ್ಟು ಮಾಹಿತಿ ಇಲ್ಲಿದೆ ಓದಿ
  Ad Widget   Ad Widget   Ad Widget   Ad Widget   Ad Widget   Ad Widget