ಸುಳ್ಯ

ಮಂಡೆಕೋಲು: ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಬಗ್ಗೆ ಮಾಹಿತಿ ಕಾರ್ಯಕ್ರಮ

ನ್ಯೂಸ್‌ ನಾಟೌಟ್‌: ಡಾ.ಕೆ. ಶಿವರಾಮ ಕಾರಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಮಾಜ ಕಾರ್ಯ ವಿಭಾಗ ಪೆರುವಾಜೆ, ಅಮೃತ ಗ್ರಾಮ ಪಂಚಾಯತ್ ಮತ್ತು ಮಾಹಿತಿ ಕೇಂದ್ರ ಮಂಡೆಕೋಲು ಸಂಯುಕ್ತ ಆಶ್ರಯದಲ್ಲಿ ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಬಗ್ಗೆ ಮಾಹಿತಿ ಕಾರ್ಯಕ್ರಮ ಭಾನುವಾರ (ಜುಲೈ 16) ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಡೆಕೋಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿನುತಾ ಪಾತಿಕಲ್ಲು, ಮಳೆಗಾಲದಲ್ಲಿ ಸಾಂಕ್ರಮಿಕ ರೋಗಗಳು ಹೆಚ್ಚು ಕಂಡುಬರುತ್ತಿದ್ದು, ಪ್ರತಿಯೊಬ್ಬರೂ ತಮ್ಮ ಮನೆ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛ ಮಾಡಬೇಕು. ಪ್ಲಾಸ್ಟಿಕ್, ಹೂವಿನ ಚಟ್ಟಿಯಲ್ಲಿ ನೀರು ನಿಂತರೆ ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಗ್ಯೂ, ಮಲೇರಿಯ ಮುಂತಾದ ಸಾಂಕ್ರಾಮಿಕ ರೋಗಗಳು ಹರಡುತ್ತದೆ. ಎಲ್ಲರೂ ಜಾಗೃತೆವಹಿಸಬೇಕು ಎಂದು ಸಲಹೆ ನೀಡಿದರು.

ಡಾ. ಕೆ. ಶಿವರಾಮ ಕಾರಂತ ಸರ್ಕಾರಿ ಪ್ರಥಮ ದರ್ಜೆ ಪೆರುವಾಜೆ ಕಾಲೇಜಿನ ಉಪನ್ಯಾಸಕಿ ರಶ್ಮಿತಾ ಕರ್ಕೇರ ಎನ್ , ಸುಳ್ಯ ಕೆವಿಜಿ ಆಯುರ್ವೇದ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಶತ್ರುನ್ ಕೆ. , ಮಂಡೆಕೋಲು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅನಿಲ್ ತೋಟಪ್ಪಾಡಿ, ಹಾಲು ಉತ್ಪಾದಕ ಸಹಕಾರ ಸಂಘ ಅಧ್ಯಕ್ಷ ಸದಾನಂದ ಮಾವಜಿ , ಗ್ರಾಮ ಪಂಚಾಯತ್ ಮಂಡೆಕೋಲು ಪಿ.ಡಿ.ಒ ರಮೇಶ್ ಪಿ., ಕಾಲೇಜಿನ ಸಮಾಜಕಾರ್ಯ ವಿಭಾಗದ ಸುಮನ್ ರಾಜ್ ಟಿ., ಅನುಷ್ ಇ. ಸದಸ್ಯ -ಸಿಬ್ಬಂದಿವರ್ಗ ಉಪಸ್ಥಿತರಿದ್ದರು.

Related posts

ಕಲ್ಲುಗುಂಡಿ: ಫ್ರೀ ಬಸ್ ಹತ್ತಿದ ಮಹಿಳೆ ಜೊತೆ ಸರ್ಕಾರಿ ಬಸ್ ಕಂಡಕ್ಟರ್ ಕಿರಿಕ್..! ಫ್ರೀ ಬಸ್‌ ನಿಮ್ಮ ಮನೆಯೊಳಗೆ ಬರಬೇಕಾ..? ಎಂದು ಕಂಡಕ್ಟರ್ ಪ್ರಶ್ನಿಸಿದ್ದೇಕೆ..?

ಸುಳ್ಯ: ರಸ್ತೆ ದಾಟುತ್ತಿದ್ದ ವೃದ್ಧನಿಗೆ ಗುದ್ದಿದ ಕಾರು, ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಅಜ್ಜ

ಸುಳ್ಯ: ಆತ್ಮಹತ್ಯೆ ಮಾಡಿಕೊಂಡ ಮಗಳ ಕಣ್ಣುಗಳನ್ನು ದಾನ ಮಾಡಿದ ಪೋಷಕರು,ಸಾ* ವಿ*ನ ನೋವಿನಲ್ಲೂ ಸಾರ್ಥಕತೆ..!