ದೇಶ-ಪ್ರಪಂಚ

ಪತ್ನಿಯನ್ನು ಸಂತೈಸಲು ೭ ವರ್ಷದ ಮಗನನ್ನೇ ಕೊಂದ ಪಾಪಿ ತಂದೆ,ಕೂಲರ್ ಆಸೆ ತೋರಿಸಿ ಕತ್ತು ಕೊಯ್ದು ಹೆಂಡ್ತಿಗೆ ವಿಡಿಯೋ ಕಳಿಸಿದ!

ನ್ಯೂಸ್ ನಾಟೌಟ್ : ತನ್ನ ಮಗುವಿಗೆ ಸಣ್ಣ ಜ್ವರ ,ಶೀತ ಬಂದರೂ ಸಹಿಸದ ತಂದೆ ಅದ್ಹೇಗೆ ಕೊಲ್ಲುವ ಮನಸು ಮಾಡುತ್ತಾನೋ?೭ ವರ್ಷದ ಪುಟ್ಟ ಬಾಲಕನನ್ನು ಆತನ ತಂದೆಯೇ ಭೀಕರವಾಗಿ ಹತ್ಯೆಗೈದ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ. ತನ್ನ ಮೂರನೇ ಪತ್ನಿಯನ್ನು ಸಂತೈಸಲು ಈ ಕೃತ್ಯ ಎಸಗಿದ್ದಾನೆ.

ರಾತ್ರಿ ಈತ ಎಂದಿನಂತೆ ತನ್ನ ಅಜ್ಜ-ಅಜ್ಜಿ ಬಳಿ ಮಲಗಿದ್ದ. ಅದೇ ವೇಳೆ ಅವನಪ್ಪ ಶಶಿಪಾಲ್​ ಮುಂಡೆ ಅಲ್ಲಿಗೆ ಬಂದು, ಪ್ರತೀಕ್​ನನ್ನು ಎಬ್ಬಿಸಿ ಕರೆದುಕೊಂಡು ಹೋಗಿದ್ದಾನೆ. ನಮ್ಮ ರೂಮಿನಲ್ಲಿ ಕೂಲರ್​ ಇದೆ, ಅಲ್ಲಿಗೆ ಬಂದು ಮಲಗು ಎಂದು ಕರೆದುಕೊಂಡು ಹೋಗಿ ಮಗುವನ್ನು ಕೊಂದಿದ್ದಾನೆ. ತನ್ನ ಮೂರನೇ ಪತ್ನಿಯ ನೆಮ್ಮದಿಗಾಗಿ ಇವೆಲ್ಲಾ ನಾಟಕವಾಡಿದ್ದಾನೆ.

ಶಶಿಪಾಲ್​ ಸಿಂಗ್​ (26) ಮತ್ತು ಪಾಯಲ್​ (23)ಇಬ್ಬರೂ ಗಂಡ-ಹೆಂಡತಿ. ಶಶಿಪಾಲ್ ನ ಮೊದಲನೇ ಹೆಂಡತಿ ಮಗ ಜತೆಗಿದ್ದ.ಇತ್ತೀಚೆಗಷ್ಟೇ ಶಶಿಪಾಲ್​ ಸಿಂಗ್​​ ನ ಮೂರನೇ ಪತ್ನಿಗೆ ಮಗುವಾಗಿದ್ದು, ತವರು ಮನೆಗೆ ಹೋಗಿದ್ದಳು. ಆಕೆ ಮತ್ತೆ ಗಂಡನ ಮನೆಗೆ ವಾಪಾಸ್ ಬರಲು ಒಪ್ಪುತ್ತಿರಲಿಲ್ಲ.ಕಾರಣ ಶಶಿಪಾಲ್ ನ ಮೊದಲನೇ ಪತ್ನಿಯ ಮಗ.ಇದಕ್ಕಾಗಿ ಆಕೆ ಆಗಾಗ ಗಂಡನೊಂದಿಗೆ ಜಗಳವಾಡುತ್ತಿದ್ದಳು.ಮನೆಯಲ್ಲಿದ್ದಾಗಲೂ ಪ್ರತೀಕ್ ಗೆ ಸದಾ ಬಯ್ಯುತ್ತಿದ್ದಳು ಎನ್ನಲಾಗಿದೆ. ಅವನನ್ನು ಕಂಡರೆ ಪಾಯಲ್​ಗೆ ಇಷ್ಟವೇ ಆಗುತ್ತಿರಲಿಲ್ಲ.

ಆ ಮಗನನ್ನು ಎಲ್ಲಿಗಾದರೂ ಕಳಿಸಿ, ಇಲ್ಲವೇ ಕೊಂದು ಬಿಡಿ. ಹಾಗಿದ್ದರೆ ಮಾತ್ರ ವಾಪಸ್ ಬರುತ್ತೇನೆ ಎಂದು ಹೇಳುತ್ತಿದ್ದಳು. ಪ್ರತೀಕ್​ ನೆರಳು ಕಂಡರೆ ಸದಾ ದ್ವೇಷ ಕಾರುತ್ತಿದ್ದ ಪತ್ನಿ ಪಾಯಲ್​​ಳನ್ನು ಸಂತುಷ್ಟ ಪಡಿಸಿ, ಆಕೆಯನ್ನು ಹೇಗಾದರೂ ಮನೆಗೆ ಕರೆದುಕೊಂಡು ಬರಬೇಕು ಎಂಬ ಉದ್ದೇಶದಿಂದ ಶಶಿಪಾಲ್ ಮಗನನ್ನು ಹತ್ಯೆಗೈದಿದ್ದ. ಈ ಬಗ್ಗೆ ಪೊಲೀಸ್ ಅಧಿಕಾರಿ ಜೈವೀರ್ ಸಿಂಗ್​ ಭಡೋರಿಯಾ ತಿಳಿಸಿದ್ದಾರೆ.

ಭಾನುವಾರ ಅಜ್ಜ-ಅಜ್ಜಿ ಬಳಿ ಮಲಗಿದ್ದ ಸಂದರ್ಭ ಪ್ರತೀಕ್​​ನ ಬಳಿ ಬಂದ ಶಶಿಪಾಲ್ ಅವನನ್ನು ತನ್ನ ರೂಮಿನಲ್ಲಿ ಕೂಲರ್ ಇದೆ ಅಲ್ಲಿಗೆ ಬರುವಂತೆ ಕರೆದಿದ್ದಾನೆ. ಅಪ್ಪ ಕೂಲರ್​ ಬಗ್ಗೆ ಹೇಳುತ್ತಿದ್ದಂತೆ ಫುಲ್ ಖುಷಿಯಾದ ಆ ಹುಡುಗ ಅಲ್ಲಿಗೆ ತೆರಳಿದ್ದಾನೆ. ಜತೆಗಿದ್ದ ಅಪ್ಪನ ಪಕ್ಕದಲ್ಲಿ ನೆಮ್ಮದಿಯಿಂದ ಮಲಗಿ, ನಿದ್ರಿಸಿದ್ದಾನೆ. ಇತ್ತ ಈ ಹುಡುಗ ನಿದ್ದೆ ಮಾಡುತ್ತಿದ್ದಂತೆ ಅಪ್ಪ ಕಾರ್ಯಪ್ರವೃತ್ತನಾಗಿದ್ದಾನೆ. ಟಿವಿ ಆಫ್​ ಮಾಡಿ, ಮಗನ ಕತ್ತು ಕೊಯ್ದಿದ್ದಾನೆ. ಅಷ್ಟಲ್ಲದೆ ತನ್ನ ಕೃತ್ಯದ ಬಳಿಕ ಪತ್ನಿಗೆ ವಿಡಿಯೊ ಕಾಲ್​ ಮಾಡಿದ್ದಾನೆ. ಕನೆಕ್ಟ್ ಆಗದಿದ್ದಾಗ ಬಳಿಕ ಮಗನ ಶವವನ್ನು ವಿಡಿಯೊ ಮಾಡಿ, ಪತ್ನಿ ಪಾಯಲ್​ಗೆ ಕಳಿಸಿದ್ದಾನೆ. ಮೊದಲೇ ಕೋಪಗೊಂಡಿದ್ದ ಪಾಯಲ್​ ಗಂಡನ ನಂಬರ್ ಬ್ಲಾಕ್ ಮಾಡಿಟ್ಟುಕೊಂಡಿದ್ದಳು. ಹೀಗಾಗಿ ಅವಳಿಗೆ ವಿಡಿಯೊ ರೀಚ್ ಆಗಲಿಲ್ಲ. ಅಷ್ಟಾದ ಬಳಿಕ ಶಶಿಪಾಲ್ ಓಡಿಹೋಗಿದ್ದ.

ಅಜ್ಜ-ಅಜ್ಜಿ ಕೊಟ್ಟ ದೂರಿನ ಅನ್ವಯ ಶಶಿಪಾಲ್​ ಮತ್ತು ಆತನ ಪತ್ನಿ ಪಾಯಲ್​​ಳನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ. ನಾನೇನೂ ಮಾಡಲಿಲ್ಲ ಎಂದು ಮೊದಲು ಪಾಯಲ್ ಹೇಳಿದ್ದಾಳೆ. ಆದರೆ ನಂತರ ಒಪ್ಪಿಕೊಂಡಿದ್ದಾಳೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related posts

ಮದ್ಯದ ನಶೆಯಲ್ಲಿ ತೇಲಾಡಿದ್ದ ಮದುಮಗ ,ವಧುವಿಗೆ ಹಾರ ಹಾಕೋ ಬದಲು ಬೇರೋಬ್ಬಳಿಗೆ ಹಾರ ಹಾಕಿದ..!ಮುಂದೇನಾಯ್ತು ಗೊತ್ತಾ?ವಿಡಿಯೋ ವೀಕ್ಷಿಸಿ..

ಪ್ರವಾಹದಲ್ಲಿ ಸಿಲುಕಿದ್ದ ತುಂಬು ಗರ್ಭಿಣಿಗೆ ಆಟೋ ರಿಕ್ಷಾದಲ್ಲಿಯೇ ಹೆರಿಗೆ ಮಾಡಿಸಿದ ಮಹಿಳಾ ಪೊಲೀಸ್‌ ಸಬ್‌ ಇನ್ಸ್ ಪೆಕ್ಟರ್ ಮತ್ತು ಸಿಬ್ಬಂದಿ..!

Puneeth Rajkumar:ತಮಿಳುನಾಡಲ್ಲಿ ಅಪ್ಪುವಿಗೆ ಹೀಗೊಬ್ಬ ಅಭಿಮಾನಿ ,ಪುನೀತ್ ರಾಜ್ ಕುಮಾರ್ ಗಾಗಿ ಸೈಕಲ್ ನಲ್ಲೇ ದೇಶ ಪರ್ಯಟನೆ!