ದೇಶ-ಪ್ರಪಂಚವೈರಲ್ ನ್ಯೂಸ್

ಹಾವನ್ನು ಹಿಡಿದುಕೊಂಡು ವ್ಯಕ್ತಿಗೆ ಬಾರಿಸಿದ!,ವೈರಲ್ ವಿಡಿಯೋದಲ್ಲೇನಿದೆ?

ನ್ಯೂಸ್ ನಾಟೌಟ್ : ತಪ್ಪು ಮಾಡಿರುವ ವ್ಯಕ್ತಿಗಳಿಗೆ ಹೊಡಿಯುವ ಸನ್ನಿವೇಶ ಬಂದರೆ ಕೋಲಲ್ಲಿ ಹೊಡೆಯೋದು ಸಾಮಾನ್ಯ ಆದರೆ ಇಲ್ಲೊಬ್ಬ ವ್ಯಕ್ತಿ ಕೈಯಲ್ಲಿ ಹಾವನ್ನು ಹಿಡಿದುಕೊಂಡು ವ್ಯಕ್ತಿಯೊಬ್ಬನನ್ನು ಥಳಿಸಿದ್ದಾನೆ.ಈ ಘಟನೆ ನಡೆದಿದ್ದು, ಕೆನಡಾದ ಟೊರಾಂಟೋದಲ್ಲಿ.

ಇಲ್ಲಿ ನಡೆದ ಬೀದಿ ಜಗಳದಲ್ಲಿ ವ್ಯಕ್ತಿಯೊಬ್ಬ ತಾನು ಸಾಕಿದ ಹಾವನ್ನು ಕೋಲಿನಂತೆ ಬಳಸಿ ನಡು ರಸ್ತೆಯಲ್ಲೇ ಮತ್ತೊಬ್ಬನಿಗೆ ಹೊಡೆದ ಘಟನೆ ವರದಿಯಾಗಿದೆ.ಈ ಜಗಳದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್‌ ಆಗಿದೆ.

ಯಾವುದೋ ಕಾರಣಕ್ಕೆ ಇಬ್ಬರು ವ್ಯಕ್ತಿಗಳ ನಡುವೆ ಜಗಳವಾಗಿದೆ.ಈ ವೇಳೆ ಯುವಕನೊಬ್ಬ ತಾನು ಸಾಕಿದ ಹಾವನ್ನೇ ಬಳಸಿ ವಿರೋಧಿ ವ್ಯಕ್ತಿಗೆ ರಸ್ತೆಯ ಮಧ್ಯದಲ್ಲಿಯೇ ಥಳಿಸಿದ್ದಾನೆ. ಈ ವೇಳೆಗೆ ಆ ರಸ್ತೆಯಲ್ಲಿ ಪೊಲೀಸ್‌ ವಾಹನ ಬಂದಿದೆ.ಪೊಲೀಸರು ಮಧ್ಯಪ್ರವೇಶಿಸಿ, ಇಬ್ಬರ ಜಗಳವನ್ನು ಬಿಡಿಸಿದ್ದಾರೆ. ಈ ಎಲ್ಲಾ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ.

Related posts

15ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿದ್ಯಾರು..? ಆ ಅನಾಮದೇಯ ಇ-ಮೇಲ್ ನಲ್ಲಿ ಏನಿತ್ತು..?

ವಾಹನ ಚಾಲಕರಿಗೂ ಚಾಲನೆ ಅವಧಿ ನಿಗದಿಯಾಗಲಿ: ಸಚಿವ ಗಡ್ಕರಿ

ಕ್ಯಾನ್ಸರ್ ಪೀಡಿತ ಮಹಿಳೆಯ ಕೊನೆ ಆಸೆ ಈಡೇರಿಸಿದ ಬಾಲಿವುಡ್ ನಟ! ಕರೆ ಮಾಡಿ ಶಾರುಖ್ ಖಾನ್ ಹೇಳಿದ್ದೇನು?