ಕರಾವಳಿಕ್ರೈಂ

ಧರ್ಮಸ್ಥಳ: ಮಹಿಳೆ ಸ್ನಾನಕ್ಕೆ ಹೋದಾಗ ದಿಢೀರ್‌ ಬಚ್ಚಲು ಮನೆಗೆ ನುಗ್ಗಿದ ನೆರೆಮನೆಯ ಯುವಕ..!, ಯುವಕನ ಅಸಭ್ಯ ವರ್ತನೆ ವಿರುದ್ಧ ಧರ್ಮಸ್ಥಳ ಠಾಣೆಗೆ ದೂರು

ನ್ಯೂಸ್‌ ನಾಟೌಟ್‌: ಮಹಿಳೆ ಸ್ನಾನ ಮಾಡುತ್ತಿದ್ದಾಗ ನೆರೆಮನೆಯ ಯುವಕನೋರ್ವ ಬಚ್ಚಲು ಮನೆಗೆ ನುಗ್ಗಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ.

ಮಹಿಳೆ ರಾತ್ರಿಯ ವೇಳೆ ಬಚ್ಚಲು ಮನೆಗೆ ಸ್ನಾನಕ್ಕೆಂದು ಹೋದಾಗ ನೆರೆಮನೆಯ ಯುವಕ ಒ.ಆರ್‌. ಎಂಬಾತ ಅಕ್ರಮವಾಗಿ ಬಚ್ಚಲು ಮನೆ ಪ್ರವೇಶಿಸಿ ಅನುಚಿತವಾಗಿ ವರ್ತಿಸಿದ್ದಲ್ಲದೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ವೇಳೆ ಮಹಿಳೆ ಜೋರಾಗಿ ಕಿರುಚಾಡಿದ್ದು ಮಹಿಳೆಯ ಮನೆಯವರು ಹೊರಬರುವ ವೇಳೆ ಆರೋಪಿ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ ಎನ್ನಲಾಗಿದೆ. ಸದ್ಯ ಯುವಕನ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಮಂಗಳೂರು: ಗಾಂಜಾ ಸಿಗಲಿಲ್ಲವೆಂದು ನೊಂದು ನೇಣಿಗೆ ಶರಣಾದ..! ಕೇವಲ 24 ವರ್ಷಕ್ಕೆ ಕತ್ತಲಾದ ದಾರಿ ತಪ್ಪಿದ ಮಗನ ಬದುಕು..!

ಉಪ್ಪಿನಂಗಡಿ:ಟ್ಯಾಂಕರ್ ಚಾಲಕನಿಗೆ ಹಿಗ್ಗಾ ಮುಗ್ಗಾ ಥಳಿಸಿ ಪರ್ಸ್ ನಲ್ಲಿದ್ದ ನಗದು ಎಗರಿಸಿದ ದರೋಡೆಕೋರರು!

14 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿದ್ದ ದುರುಳನ ದುರಂತ ಸಾವು..! ಸ್ಥಳ ಮಹಜರು ವೇಳೆ ತಪ್ಪಿಸಿಕೊಳ್ಳಲು ಹೋಗಿ ಕೆರೆಗೆ ಹಾರಿದ ಆರೋಪಿಯ ಮೃತದೇಹ ಪತ್ತೆ..!