ಕ್ರೈಂ

ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿ ಮದುವೆಯಾಗಿ ಪೊಲೀಸರಿಂದ ಕಣ್ತಪ್ಪಿಸಿಕೊಂಡಿದ್ದ ಯುವಕ ಲಾಡ್ಜ್ ನಲ್ಲಿ ನೇಣು ಹಾಕಿಕೊಂಡಿದ್ದೇಕೆ..? ಜಾತಿ ಟಾರ್ಚರ್ ಗೆ ಯುವಕ ಬಲಿ ಆಗಿದ್ದು ಹೇಗೆ..?

ನ್ಯೂಸ್ ನಾಟೌಟ್: ಯುವಕನೊಬ್ಬ ಸೆಲ್ಫಿ ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸೆಲ್ಫಿ ವಿಡಿಯೋ ಮಾಡಿಟ್ಟು ಲಾಡ್ಜ್​​ನಲ್ಲಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಶಿಧರ್ ಆತ್ಮಹತ್ಯೆಗೆ ಶರಣಾದ ಯುವಕ ಎಂದು ಗುರುತಿಸಲಾಗಿದೆ.

ವರದಿಗಳ ಪ್ರಕಾರ ಶಶಿಧರ್ ಅಪ್ರಾಪ್ತ ಬಾಲಕಿಯನ್ನ ಪ್ರೀತಿಸಿ ಮದ್ವೆ ಆಗಿದ್ದ. ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿದ್ದರಿಂದ ಈತನ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿತ್ತು.

ಶಶಿಧರ್ ವಿರುದ್ಧ ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಫೋಕ್ಸೋ ಆಕ್ಟ್​ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಬಾಲಕಿಯ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಈ ಹಿನ್ನೆಲೆಯಲ್ಲಿ ಶಶಿಧರ್​ನನ್ನು ಬಂಧಿಸಲು ಪೊಲೀಸರು ಮುಂದಾಗಿದ್ದರು. ಪೊಲೀಸರು ಅರೆಸ್ಟ್ ಮಾಡ್ತಾರೆಂದು ಹೆದರಿ ಯುವಕ ಬೆಂಗಳೂರಿಗೆ ಬಂದಿದ್ದ. ಮೊನ್ನೆ ಕಾಟನ್ ಪೇಟೆಯ ಗಜಾನನ ಲಾಡ್ಜ್ ನಲ್ಲಿ ರೂಮ್ ಮಾಡಿಕೊಂಡಿದ್ದ. ರಾತ್ರಿ ರೂಮ್​​ನ ಫ್ಯಾನ್​ಗೆ ನೇಣುಬೀಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಆತ್ಮಹತ್ಯೆಗೂ ಮುನ್ನ ಇನ್​​ಸ್ಟಾಗ್ರಾಂನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದ. ಆರು ವರ್ಷ ಲವ್ ಮಾಡಿ ನಾನು ಮದುವೆಯಾದೆ. ಇವಾಗ ಜಾತಿ ಸಲುವಾಗಿ ಅವರ ಅಪ್ಪ-ಅಮ್ಮ ಮತ್ತೆ ಅವರ ಕಾಕಾ, ಅವರಜ್ಜಿ ಮತ್ತೆ ಅವರ ಸಮಾಜದರು ನನಗೆ ಟಾರ್ಚರ್ ನೀಡಲು ಶುರುಮಾಡಿದ್ದಾರೆ. ನನ್ನ ಸಾವಿಗೆ ಇವರೇ ಕಾರಣ. ಪೊಲೀಸರು ಕೂಡ ನಾನು ನೀಡುತ್ತಿರುವ ದೂರನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿ ಸಾವಿಗೆ ಶರಣಾಗಿದ್ದಾನೆ.

Related posts

181 ಜನ ಪ್ರಯಾಣಿಕರಿದ್ದ ವಿಮಾನ ಲ್ಯಾಂಡಿಂಗ್ ವೇಳೆ ಪತನ..! 29 ಮಂದಿ ಸಾವು..! ಇಲ್ಲಿದೆ ವಿಡಿಯೋ

ನಿಧಿಗಾಗಿ ಜ್ಯೋತಿಷಿಯನ್ನೇ ಕಿಡ್ಯಾಪ್ ಮಾಡಿದ್ರಾ..? 16 ಲಕ್ಷ ರೂ. ಪಡೆದದ್ದೇಕೆ ಜ್ಯೋತಿಷಿ..? ಏನಿದು ರೋಚಕ ಸ್ಟೋರಿ?

ಚಲಿಸುತ್ತಿರುವ ಕಾರಿನಲ್ಲಿ ರೊಮ್ಯಾನ್ಸ್‌..! ಲಿಪ್‌ ಲಾಕ್‌ ವಿಡಿಯೋ ಎಲ್ಲೆಡೆ ವೈರಲ್