ದೇಶ-ಪ್ರಪಂಚ

ಶಿಶ್ನ ಕತ್ತರಿಸಿಕೊಂಡು ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ..!?

ನ್ಯೂಸ್ ನಾಟೌಟ್ : ಎಂಬಿಬಿಎಸ್ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಭೀಕರ ಘಟನೆ ವರದಿಯಾಗಿದೆ.ಯುವಕನೊಬ್ಬ ತನ್ನ ಶಿಶ್ನವನ್ನು ಕತ್ತರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ವರದಿ ಸಂಚಲನವನ್ನುಂಟು ಮಾಡಿದೆ.

ಈ ಘಟನೆ ನಡೆದಿದ್ದು, ಹೈದರಾಬಾದ್‌ನ ಜಗದ್ಗಿರಿಗುಟ್ಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ .ಜಗದ್ಗಿರಿಗುಟ್ಟ ವ್ಯಾಪ್ತಿಯ ಪಾಪಿರೆಡ್ಡಿ ನಗರ ರಸ್ತೆ ಸಂಖ್ಯೆ 18ರಲ್ಲಿ ಈ ಘಟನೆ ನಡೆದಿದ್ದು, ಆತ ಶಿಶ್ನ ಕತ್ತರಿಸಿಕೊಂಡಿದ್ದು ಭೀಕರವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ.ದೀಕ್ಷಿತ್ ರೆಡ್ಡಿ ಮೃತ ದುರ್ದೈವಿ ಎಂದು ಪೊಲೀಸರು ಗುರುತಿಸಿದ್ದಾರೆ. ದೀಕ್ಷಿತ್ ರೆಡ್ಡಿ ವಾಸವಿದ್ದ ಮನೆಯಲ್ಲಿಯೇ ಈ ಕೃತ್ಯವೆಸಗಿದ್ದಾನೆ ಎಂದು ತಿಳಿದು ಬಂದಿದೆ.

ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ. ಯುವಕನ ಶವವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕೊಂಡೊಯ್ದಿದ್ದು, ಈ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಈ ಘಟನೆ ಹಲವು ಅನುಮಾನಗಳಿಗೂ ಎಡೆಮಾಡಿಕೊಟ್ಟಿದೆ. 

ಸಾಮಾನ್ಯವಾಗಿ ಯಾವುದೇ ಆತ್ಮಹತ್ಯೆಗೆ ಶರಣಾಗುವ ವ್ಯಕ್ತಿ ತನ್ನನ್ನು ತಾನು ಹಿಂಸಿಸಿಕೊಳ್ಳಲು ಧೈರ್ಯ ಮಾಡುವುದಿಲ್ಲ. ಸಾಯುವ ಮುನ್ನ ಆ ದೈಹಿಕ ಮತ್ತು ಮಾನಸಿಕ ನೋವನ್ನು ಯಾರೂ ಸಹಿಸಿ ಕೊಳ್ಳುವುದಿಲ್ಲ. ಈ ಹಿಂದೆ ಇಂತಹ ಘಟನೆಗಳು ನಡೆದಿದ್ದರೂ ತೀರಾ ಅಪರೂಪ. ಹಾಗಾದಲ್ಲಿ ಇದು ನಿಜಕ್ಕೂ ಆತ್ಮಹತ್ಯೆಯೇ ಅಥವಾ ಈ ಘಟನೆಯ ಹಿಂದೆ ಯಾರಾದರೂ ಇದ್ದಾರಾ ಎನ್ನುವ ಕುರಿತು ತನಿಖೆ ನಡೆಯುತ್ತಿದ್ದು,ಪೊಲೀಸರಿಂದ ಇನ್ನಷ್ಟೇ ಮಾಹಿತಿ ಹೊರಬರಬೇಕಿದೆ.

Related posts

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಬೇಕಾಗಿದ್ದ ವಿದ್ಯಾರ್ಥಿ ಸೂಸೈಡ್‌!!ಕಾರಣವೇನು?

ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ದೂರು ದಾಖಲು..! ಈ ಬಗ್ಗೆ ಗೃಹಸಚಿವರಿಂದ ಭದ್ರತೆಯ ಭರವಸೆ

ಉಗ್ರರಿಗೆ ಬೆಂಬಲ ನೀಡಿದ್ದೇಕೆ ಆ ಇಬ್ಬರು ಮಹಿಳೆಯರು? ಓರ್ವ ಅಪ್ರಾಪ್ತ ಸೇರಿ ಆರು ಮಂದಿ ಅರೆಸ್ಟ್!