ಕ್ರೈಂರಾಜ್ಯ

ಭೀಕರ ದುರಂತಕ್ಕೆ ಬಲಿಯಾದ ತಾಯಿ-ಮಗಳು, ಮಗಳನ್ನು ಶಾಲೆಗೆ ಬಿಡಲು ತೆರಳುತ್ತಿದ್ದ ಅಮ್ಮನಿಗೆ ಆಗಿದ್ದೇನು..?

ನ್ಯೂಸ್‌ ನಾಟೌಟ್‌: ಕೆಲವೊಮ್ಮೆ ಸಾವು ಹೇಗೆ ಸಂಭವಿಸುತ್ತದೆ ಎನ್ನುವುದನ್ನು ಊಹಿಸಲು ಅಸಾಧ್ಯ. ಬದುಕಿನಲ್ಲಿ ಹಲವಾರು ಕನಸುಗಳನ್ನು ಕಂಡು ತಾಯಿಯೊಬ್ಬರು ಮಗಳನ್ನು ಶಾಲೆಗೆ ಬಿಡಲು ತೆರಳುತ್ತಿದ್ದಾಗ ಹಿಂಬದಿಯಿಂದ ಯಮಸ್ವರೂಪಿಯಾಗಿ ಬಂದ ಬಸ್ಸೊಂದು ಡಿಕ್ಕಿಯಾಗಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ರಾಮಶೆಟ್ಟಿಹಳ್ಳಿ ಬಳಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಘಟನೆ ನಡೆದಿದೆ.

ಮೃತ ಮಹಿಳೆಯನ್ನು ಕಮಲಮ್ಮ (35) ಮತ್ತು ಆಕೆಯ ಪುತ್ರಿ ವೀಣಾ (16) ಮೃತ ಎಂದು ಗುರುತಿಸಲಾಗಿದೆ. ವೀಣಾ ಇಲ್ಲಿನ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದಾಳೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ತಾಯಿ ಹಾರಿ ಬಿದ್ದಿದ್ದು, ಮಗಳು ಸ್ಥಳದಲ್ಲೇ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಇನ್ನೂ ಘಟನೆಯಲ್ಲಿ ಬೈಕ್ ಸವಾರ ಮುದ್ದಪ್ಪ (50) ಎಂಬವರಿಗೂ ಗಂಭೀರ ಗಾಯವಾಗಿದೆ. ಗಾಯಾಳನ್ನು ತಿಪಟೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ತಿಪಟೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳ ಬೇಜವ್ದಾರಿತನಕ್ಕೆ ಈ ಸಾವು ಸಂಭವಿಸಿದೆ ಎಂದು ಕಿಡಿಕಾರಿದ ಗ್ರಾಮಸ್ಥರು ರಸ್ತೆ ತಡೆದು ಆಕ್ರೋಶ ಹೊರಹಾಕಿದರು. ಈ ವೇಳೆ ಪೊಲೀಸರು ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆಯಿತು. ಈ ಹೆದ್ದಾರಿಯಲ್ಲಿ ಹಲವು ಬಾರಿ ಅಂಡರ್ ಪಾಸ್ ನಿರ್ಮಿಸುವಂತೆ ಮನವಿ ಮಾಡಿದರು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಶವಗಳನ್ನು ಎತ್ತಲ್ಲ ಎಂದು ಪ್ರತಿಭಟನೆ ನಡೆಸಿದರು.

Related posts

ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದ 65ರ ವೃದ್ದೆ ಮೇಲೆ 24ರ ಯುವಕನಿಂದ ಅತ್ಯಾಚಾರ..! ಪೊಲೀಸ್ ಠಾಣೆಗೆ ದೂರು ನೀಡಿದ ಆಸ್ಪತ್ರೆಯ ಆಡಳಿತಾಧಿಕಾರಿ

ಏರ್​ ಗನ್ ಜತೆ ಆಟವಾಡುವಾಗ ಮಿಸ್ ಫೈರ್..! 7 ವರ್ಷದ ಬಾಲಕನ ದುರಂತ ಅಂತ್ಯ..!

ರೋಹಿತ್‌ ಶರ್ಮಾ ಐಫೋನ್‌ ಕಳವಾದದ್ದು ಹೇಗೆ? ಟೀಮ್ ಇಂಡಿಯಾ ನಾಯಕ ಕೊಟ್ಟ ದೂರಿನಲ್ಲೇನಿದೆ?