ದೇಶ-ಪ್ರಪಂಚ

ಕಾರಿನಿಂದ ಬಯಲಾಯಿತು ಪತ್ನಿಯ ಪರಸಂಗದ ಪಲ್ಲಂಗದಾಟ..!

ನ್ಯೂಸ್ ನಾಟೌಟ್:  ಪರ ಪುರುಷನ ಜತೆಗೆ ಪಲ್ಲಂಗದಾಟ ವಾಡಲು ಹೊರಟ ಮಹಿಳೆ ಗಂಡನ ಕಾರಿನಿಂದ ಸಿಕ್ಕಿಬಿದ್ದ ಘಟನೆ ಬೆಂಗಳೂರಿನಿಂದ ವರದಿಯಾಗಿದೆ.

ಖಾಸಗಿ ಕಂಪನಿ ಉದ್ಯೋಗಿ ಆಗಿರುವ ದೂರುದಾರರಿಗೆ 2014ರಲ್ಲಿ ಮದುವೆಯಾಗಿದೆ. 6 ವರ್ಷದ ಮಗು ಜೊತೆ ದಂಪತಿ ವಾಸವಿದ್ದಾರೆ. ದೂರುದಾರ ರಾತ್ರಿ ಕೆಲಸಕ್ಕೆ ಹೋದರೆ, ಬೆಳಿಗ್ಗೆಯೇ ಮನೆಗೆ ವಾಪಸು ಬರುತ್ತಿದ್ದರು. ಹಗಲಿನಲ್ಲಿ ಮಾತ್ರ ಮನೆಯಲ್ಲಿರುತ್ತಿದ್ದರು. ವರ್ಷದ ಹಿಂದೆಯಷ್ಟೇ ದೂರುದಾರ ಪತಿ ಹೊಸ ಕಾರು ಖರೀದಿಸಿದ್ದರು. ಅದರಲ್ಲಿ ಜಿಪಿಎಸ್ ಉಪಕರಣ ಅಳವಡಿಸಲಾಗಿತ್ತು. ಕಾರು ಎಲ್ಲಿದೆ ಎಂಬುದು ಮೊಬೈಲ್‌ನಲ್ಲಿರುವ ಆ್ಯಪ್‌ ಮೂಲಕ ತಿಳಿಯುತ್ತಿತ್ತು. ಈ ವಿಷಯ ಪತ್ನಿಗೆ ಗೊತ್ತಿರಲಿಲ್ಲ. ಇತ್ತೀಚೆಗೆ ದೂರುದಾರ ಎಂದಿನಂತೆ ಕಚೇರಿ ಕೆಲಸಕ್ಕೆ ಹೋಗಿದ್ದರು. ರಾತ್ರಿ ಸ್ನೇಹಿತನನ್ನು ಮನೆಗೆ ಕರೆಸಿದ್ದ ಪತ್ನಿ, ಆತನ ಜೊತೆ ಕಾರಿನಲ್ಲಿ ಹೊರಗಡೆ ಹೋಗಿದ್ದರು.’

ವಿಮಾನ ನಿಲ್ದಾಣ ರಸ್ತೆಯ ಲಾಡ್ಜ್‌ ಹಾಗೂ ಹೋಟೆಲ್‌ ಎದುರು ಕಾರು ನಿಲುಗಡೆ ಆಗಿತ್ತು. ಈ ಸಂಗತಿ ಜಿಪಿಎಸ್ ಮೂಲಕ ದೂರುದಾರರಿಗೆ ಗೊತ್ತಾಗಿತ್ತು. ಕಚೇರಿ ಕೆಲಸ ಮುಗಿಸಿ ಲಾಡ್ಜ್‌ಗೆ ಹೋಗಿದ್ದ ದೂರುದಾರ, ಅಲ್ಲಿಯ ಸಿಬ್ಬಂದಿಯನ್ನು ವಿಚಾರಿಸಿದ್ದ. ಪತ್ನಿ– ಸ್ನೇಹಿತ ಇಬ್ಬರೂ ಗುರುತಿನ ಚೀಟಿ ನೀಡಿ ಲಾಡ್ಜ್‌ನ ಕೊಠಡಿಯಲ್ಲಿ ಉಳಿದುಕೊಂಡಿದ್ದ ಸಂಗತಿ ಗೊತ್ತಾಗಿತ್ತು. ಸಿಟ್ಟಾಗಿದ್ದ ದೂರುದಾರ, ಪತ್ನಿಯನ್ನು ತರಾಟೆಗೆ ತೆಗೆದುಕೊಂಡಿದ್ದ. ಆದರೆ, ಪತ್ನಿಯೇ ಪತಿಗೆ ಜೀವ ಬೆದರಿಕೆಯೊಡ್ಡಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

Related posts

ಪೋಷಕರೇ ನಿಮ್ಮ ಮಕ್ಕಳ ಮೇಲೆ ನಿಗಾ ಇರಲಿ..ಮಕ್ಕಳಲ್ಲಿ ಹೆಚ್ಚುತ್ತಿದೆ ಬೊಜ್ಜು ಪ್ರೇರಿತ ಅಸ್ತಮಾ..ಹಾಗಂದ್ರೇನು?ಇಲ್ಲಿದೆ ಡಿಟೇಲ್ಸ್..

ಇಂಡಿಗೋ ಸಂಸ್ಥೆಯ ನಿರ್ಲಕ್ಷ್ಯಕ್ಕೆ ಕರಾವಳಿಯ ಪ್ರಯಾಣಿಕರು ಮುಂಬಯಿಯಲ್ಲೇ ಬಾಕಿ!

12 ಮೊಟ್ಟೆಗೆ 400 ರೂ.,ಈರುಳ್ಳಿ ಕೆ.ಜಿ ಗೆ 250 ರೂ..! ಪಾಕ್ ನ ಸ್ಥಿತಿ ಮತ್ತೆ ಶೋಚನೀಯ!