ಪ್ರಯಾಗ್ ರಾಜ್‌ನಲ್ಲಿ ಮಹಾ ಕುಂಭಮೇಳ ನಡೆಯುತ್ತಿದೆ, ಅಲ್ಲಿಯ ಸಾಕಷ್ಟು ವಿಷಯಗಳು ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿವೆ.ಲಕ್ಷಾಂತರ ಸಾಧು-ಸಂನ್ಯಾಸಿಗಳಿಂದ ಪುಣ್ಯ ಭೂಮಿಯಾಗಿರುವ ಪ್ರಯಾಗ್ ರಾಜ್ ನಲ್ಲಿ ಒಬ್ಬ ಸಾಮಾನ್ಯ ಹೆಣ್ಮಗಳು ಇಡೀ ದೇಶದ ಗಮನ ಸೆಳೆದಿದ್ದಾಳೆ.
ಅವಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಾಳೆ. ಈ ಹೆಣ್ಮಗಳು ತನ್ನ ಸೌಂದರ್ಯದಿಂದಾಗಿ ಈಗ ದಿನ ಬೆಳಗಾಗುವುದರಲ್ಲಿ ಸೆಲೆಬ್ರಿಟಿಗಳಿಗಿಂತಲೂ ಹೆಚ್ಚು ಗಮನ ಸೆಳೆಯುತ್ತಿದ್ದಾಳೆ.
ಪ್ರಯಾಗ್‌ರಾಜ್ ಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿರುವ ಈ ಹುಡುಗಿಯ ಫೋಟೋಗಳೇ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ, ಈ ಹುಡುಗಿ ಫೇಮಸ್ ಆಗುತ್ತಿದ್ದಂತೆ ಹಲವರು ಫೋಟೋ ವಿಡಿಯೋಗಾಗಿ ಆಕೆಯ ಹಿಂದೆ ಹೋಗುತ್ತಿದ್ದಾರೆ. “ಅಷ್ಟೊಂದು ರೂಪವತಿ. ಈಕೆಯನ್ನು ನೋಡಿದವರು ಹೆಣ್ಣೆಂದರೆ ಹೀಗಿರಬೇಕು ಎನ್ನುವಂತಿದೆ, ಆಕೆಯ ಕಣ್ಣುಗಳು…” ಎಂದು ಸಾಮಾಜಿಕ ಜಾಲತಾಣದಲ್ಲಿ ವರ್ಣನೆಗಳು ಮುಂದುವರಿಯುತ್ತಿವೆ. ಗೋಧಿಬಣ್ಣದ ಮೈ ಕಟ್ಟು, ಅತ್ಯಾಕರ್ಷಕ ಕಣ್ಣು, ತುಟಿಯಲ್ಲಿ ಕಿರು ನಗೆ, ಮೈ ಮೇಲೆ ಕೆಲ ಮಾಲೆಗಳು, ಹಣೆಯಲ್ಲಿ ಚಿಕ್ಕ ಬೊಟ್ಟು, ತುಂಬಾನೇ ಸರಳ ಅಲಂಕಾರದಲ್ಲಿರುವ ಈ ಹೆಣ್ಣು ಹೆಚ್ಚಿನವರನ್ನು ಆಕರ್ಷಿಸಿ ಸುದ್ದಿಯಾಗಿದ್ದಾಳೆ.
Click