ಕೊಡಗು

ಮಡಿಕೇರಿ : ಚಲಿಸುತ್ತಿರುವಾಗಲೇ ಕಳಚಿ ಹೋದ ಬಸ್ ನ ಹಿಂಬದಿ ವ್ಹೀಲ್ ,ಅತಿಯಾದ ವೇಗವೇ ಅವಘಡಕ್ಕೆ ಕಾರಣ?

ನ್ಯೂಸ್ ನಾಟೌಟ್ : ಸೋಮವಾರಪೇಟೆಯಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಬಸ್ಸಿನ ಬ್ಲೇಡ್ ತುಂಡಾಗಿ ಹೌಸಿಂಗ್ ಸಹಿತ ಹಿಂಬದಿಯ ಟಯರ್ ಕಳಚಿಹೋದ ಘಟನೆ ಹುಣಸೂರು ಯಶೋಧಪುರ ಗೇಟ್ ಬಳಿಯ ಹಂಪ್ ನಲ್ಲಿ ನಡೆದಿದೆ.ಅದೃಷ್ಟವಶಾತ್ ಬಸ್ ನಲ್ಲಿದ್ದ 29 ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ ಎಂದು  ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಘಟನೆ?

ಮೈಸೂರು- ಬಂಟ್ವಾಳ  ಹೆದ್ದಾರಿ 275 ರ  ಕೆ. ಆರ್ ನಗರ ಡಿಪೋಗೆ ಸೇರಿದ  ಬಸ್ ಸೋಮವಾರ ಪೇಟೆಯಿಂದ  ಮೈಸೂರು ಕಡೆಗೆ ತೆರಳಿತು. ಈ ವೇಳೆ ಯಶೋಧಪುರ ಹಂಪ್ ನಲ್ಲಿ  ವೇಗದ ಮಿತಿ ಕಡಿಮೆ ಮಾಡದ ಕಾರಣ ಬಸ್ಸಿನ ಬ್ಲೇಡ್ ತುಂಡಾಗಿ ಹೌಸಿಂಗ್ ಸಮೇತ  ಹಿಂಬದಿಯ ಎರಡೂ ಟಯರ್ ಕಳಚಿಕೊಂಡಿದ್ದು  ಅಪಘಾತಕ್ಕೆ ಕಾರಣವಾಗಿದೆ ಎಂದು ಆರೋಪಿಸಲಾಗಿದೆ.ಬಸ್ ನ ಹಿಂಬದಿಯಲ್ಲಿ ಯಾವುದೇ ವಾಹನಗಳಿಲ್ಲದ ಕಾರಣ ಆಗಬಹುದಾದ ಭಾರೀ ದೊಡ್ಡ ದುರಂತವೊಂದು ತಪ್ಪಿದೆ.ಬಸ್ ನ್ನು ಕ್ರೇನ್ ಬಳಸಿ ತೆರವುಗೊಳಿಸಲಾಯಿತು.ಸ್ಥಳಕ್ಕೆ ಕೆಎಸ್ ಆರ್ ಟಿಸಿ ಅಧಿಕಾರಿಗಳು ಬಂದಿದ್ದು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

Related posts

ಮಾನಸಿಕ ಸಮಸ್ಯೆಯಿಂದ ೪ ವರ್ಷಗಳಿಂದ ಮಡಿಕೇರಿಯಲ್ಲಿದ್ದ ಮಹಿಳೆ,ಸತ್ತ ಪತ್ನಿ ಮರಳಿದಳೇ ಎಂದು ಅಚ್ಚರಿಯಿಂದ ಬಿಗಿದಪ್ಪಿದ ಪತಿ

ಮಡಿಕೇರಿ: ಕಾರ್ಮಿಕರು ಸಿಗದೇ ಕಂಗಾಲಾದ ಮಾಲೀಕನಿಂದ ಭರ್ಜರಿ ಆಫರ್..!ಬೋರ್ಡ್‌ನಲ್ಲಿ ‘ಕೆಲಸಗಾರರು ಬೇಕಾಗಿದ್ದಾರೆ ‘ ಬರೆದ ಫೋಸ್ಟ್ ವೈರಲ್..!

ಕಡಬ: ಆಟೋ ಚಾಲಕರೊಬ್ಬರಿಂದ ಅಧಿಕ ದರ ಪಡೆದು ವಾಗ್ವಾದ,ಪಂಪ್ ಕಚೇರಿಯತ್ತ ಅಟೋಚಾಲಕರು ಜಮಾವಣೆ