ಕೊಡಗು

ಮಡಿಕೇರಿ: ಹೆದ್ದಾರಿ ಬದಿಯಲ್ಲಿ ಬಿದ್ದು ಸಿಕ್ಕಿತು ಹಣದ ಕಂತೆ..! ಆಶಾ ಕಾರ್ಯಕರ್ತೆ, ಕಾಫಿ ಬೆಳೆಗಾರ ಇದನ್ನ ನೋಡಿ ತಕ್ಷಣ ಮಾಡಿದ್ದೇನು ಗೊತ್ತಾ..?

ನ್ಯೂಸ್ ನಾಟೌಟ್: ಕಲಿಯುಗ ತುಂಬಾ ಕಷ್ಟ ಕಣ್ರಿ. ಇನ್ನೊಬ್ಬರ ತಲೆ ಒಡೆದು ಬದುಕುವವರೇ ಹೆಚ್ಚಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮರಳು ಗಾಡಿನಲ್ಲಿ ಓಯಾಸಿಸ್ ಸಿಗುವಂತೆ ಅಲ್ಲೋ ಇಲ್ಲೋ ಒಂದಿಬ್ಬರು ಪ್ರಾಮಾಣಿಕರು ಸಿಗುತ್ತಾರೆ. ಬಹುಶಃ ಇದೇ ಕಾರಣದಿಂದ ಇರಬೇಕು ಕಾಲಕಾಲಕ್ಕೆ ತಕ್ಕ ಮಟ್ಟಿಗೆ ಮಳೆ – ಬೆಳೆ ಆಗುತ್ತಿದೆ.

ಹೌದು, ಕೊಡಗಿನ ಸುಂಟಿಕೊಪ್ಪದ VSSSN ಕಟ್ಟಡದ ಮುಂಭಾಗದಲ್ಲಿರುವ ಹೆದ್ದಾರಿ ಬದಿಯಲ್ಲಿ ಆಶಾ ಕಾರ್ಯಕರ್ತೆ, ಕಾಫಿ ಬೆಳೆಗಾರ ಹೆದ್ದಾರಿ ಬದಿಯಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ 16 ಸಾವಿರ ರೂ. ಹಣದ ಕಂತೆ ಸಿಕ್ಕಿತು. ಈ ಹಣವನ್ನು ಅವರಿಬ್ಬರು ಏನು ಮಾಡಿದರೂ ಅನ್ನೋದು ನಿಮ್ಮ ಮನಸ್ಸಿನಲ್ಲಿ ಮೂಡಿರುವ ಸಹಜವಾದ ಪ್ರಶ್ನೆಯಾಗಿರುತ್ತೆ.

ಅಷ್ಟಕ್ಕೂ ಹಣದ ಕಂತೆಯನ್ನು ನೋಡಿದ ಇಬ್ಬರು, ಏನಿದು ಹಣ ರಸ್ತೆಯಲ್ಲಿ ಬಿದ್ದಿದೆ ಅಲ್ವಾ ಅಂತ ಪರಿಶೀಲನೆ ನಡೆಸುತ್ತಾರೆ. ಆಗ ಅದರಲ್ಲಿ ಇದ್ದ 500 ರ 32 ನೋಟುಗಳ ಒಟ್ಟು ರೂ. 16 ಸಾವಿರ ಹಣ ಇದ್ದುದ್ದು ಕಂಡು ಬರುತ್ತದೆ. ಆಶಾ ಕಾರ್ಯಕರ್ತೆ ವೀಣಾ ರಾಮಚಂದ್ರ ಹಾಗೂ ಕಾಫಿ ಬೆಳೆಗಾರ ಸತೀಶ್ ನೇರವಾಗಿ ಕಂತೆ ನೋಟನ್ನು ಹಿಡಿದುಕೊಂಡು ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ನೀಡುತ್ತಾರೆ. ನಡೆದಿರುವ ಘಟನೆಯನ್ನು ಠಾಣಾಧಿಕಾರಿಗೆ ತಿಳಿಸುತ್ತಾರೆ. ತಕ್ಷಣ ವಿಚಾರಣೆ ನಡೆಸಿದಾಗ ಹಣದ ಮಾಲೀಕ ಕೌಶಿಕ್ ಎಂದು ತಿಳಿಯುತ್ತದೆ. ಅವರನ್ನು ಠಾಣೆಗೆ ಬರಮಾಡಿಕೊಂಡು ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಎಂ.ಆರ್. ಶ್ರೀಧರ್ ಮೂಲಕ ಹಣವನ್ನು ಹಿಂತಿರುಗಿಸಲಾಗುತ್ತದೆ.

ಬಿದ್ದು ಸಿಕ್ಕಿದ ಅಷ್ಟೊಂದು ಹಣವನ್ನು ಇಬ್ಬರು ಸೇರಿಕೊಂಡು ವಾರಿಸುದಾರರಿಗೆ ತಲುಪಿಸಿದ್ದಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ಪ್ರಾಮಾಣಿಕತೆಗೆ ಮೆಚ್ಚುಗೆ ಕೇಳಿ ಬಂದಿದೆ.

Related posts

ಸುಳ್ಯ:ಕೊರಗಜ್ಜ ದೈವಸ್ಥಾನದ ಕಾಲಾವಧಿ ನೇಮೋತ್ಸವ,ಆಮಂತ್ರಣ ಪತ್ರಿಕೆ ಬಿಡುಗಡೆ

ಕೊಡಗು-ಮೈಸೂರು ಕ್ಷೇತ್ರದಲ್ಲಿ ಬಿಜೆಪಿ ಭಾರೀ ಮತಗಳ ಮುನ್ನಡೆ, ಗದ್ದುಗೆ ಏರಲಿದ್ದಾರಾ ಒಡೆಯರು..?

ದಿಢೀರ್ ರಸ್ತೆಗೆ ಕುಸಿದು ಬಿದ್ದ ಭಾರೀ ಬಂಡೆ ಕಲ್ಲು