ಕರಾವಳಿಕೊಡಗುವೈರಲ್ ನ್ಯೂಸ್

ಮಡಿಕೇರಿ: ರಾಜ್ಯ ಮಟ್ಟದ ಕಿರಿಯರ ಕಬಡ್ಡಿ ಕೂಟದಲ್ಲಿ ಕೊಡಗು ಜಿಲ್ಲೆ ಪ್ರತಿನಿಧಿಸುವ ಸುವರ್ಣಾವಕಾಶ, ಆಸಕ್ತ ಪ್ರತಿಭಾವಂತ ಆಟಗಾರರಿಗೆ ಇಲ್ಲಿದೆ ಡಿಟೇಲ್ಸ್

ನ್ಯೂಸ್ ನಾಟೌಟ್: ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಸಂಸ್ಥೆ (ರಿ) ಬೆಂಗಳೂರು ಹಾಗೂ ಕೋಲಾರ ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆ (ರಿ) ವತಿಯಿಂದ ಬಾಲಕ-ಬಾಲಕಿಯರ ವಿಭಾಗದ ಕಿರಿಯರ ರಾಜ್ಯ ಮಟ್ಟದ ಕೂಟವನ್ನು ಆಯೋಜಿಸಲಾಗಿದೆ.

ನ.22 ರಿಂದ ನ.24ರ ತನಕ ಕೋಲಾರದ ಬಂಗಾರಪೇಟೆ ಕ್ರೀಡಾಂಗಣದಲ್ಲಿ ಕೂಟ ನಡೆಯಲಿದೆ.

ಕೊಡಗು ಜಿಲ್ಲೆಯ ಬಾಲಕ-ಬಾಲಕಿಯರ ತಂಡ ಆಯ್ಕೆ ಪ್ರಕ್ರಿಯೆಯೂ ಇದೇ ನ.11ರಂದು ಭಾನುವಾರ ಬೆಳಗ್ಗೆ 9.30ಕ್ಕೆ ಕುಶಾಲನಗರದ ಜ್ಞಾನ ಭಾರತಿ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಕೂಟದಲ್ಲಿ ಪಾಲ್ಗೊಳ್ಳಲು ಆಸಕ್ತಿ ಹೊಂದಿರುವ ಬಾಲಕ-ಬಾಲಕಿಯರು ಸೂಕ್ತ ವಯೋಮಿತಿ ದಾಖಲೆ ಹಾಗೂ ಸಮವಸ್ತ್ರದೊಂದಿಗೆ ಹಾಜರಿರುವಂತೆ ಕೊಡಗು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ನ ಕಪಿಲ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಶೇಷ ಸೂಚನೆ: ಬಾಲಕರ ತೂಕ 70ಕೆಜಿ ಮೀರಿರಬಾರದು ಹಾಗೂ ಬಾಲಕಿಯರ ತೂಕ 65ಕೆಜಿ ಮೀರಿರಬಾರದು ಹಾಗೂ 31-1-25ಕ್ಕೆ 20ವರ್ಷ ಮೀರಿರಬಾರದು. ಹೆಚ್ಚಿನ ಮಾಹಿತಿಗೆ ಕಪಿಲ್- 9731009841
,ಅವಿನಾಶ್ 7337770011, ಮಣಿಕಂಠ 9482863707, ಉತ್ತಪ್ಪ 9980264950 ಮೊಬೈಲ್ ನಂಬರ್ ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

Click

https://newsnotout.com/2024/11/hijab-issue-iran-kannada-news-viral-video-police-arrested-girl/
https://newsnotout.com/2024/11/director-mata-guruprasad-nomore-kannada-news-bengaluru/
https://newsnotout.com/2024/11/hasanamba-kannada-news-9-crore-rupees-collected-dj/
https://newsnotout.com/2024/11/andra-pradesh-kannada-news-chandra-babu-naidu-video/
https://newsnotout.com/2024/11/udupi-kaupu-collision-kannada-news-mini-bus-and-lorry-s/

Related posts

ಪುತ್ತೂರು: ರಾಷ್ಟ್ರೀಯ ಹೆದ್ದಾರಿ ಮತ್ತು ಕೆದಿಲ -ಮುರ ಸಂಪರ್ಕ ಕಲ್ಪಿಸುವ ರಸ್ತೆಯ ಅವೈಜ್ಞಾನಿಕ ನಿರ್ಮಾಣಕ್ಕೆ ಜನಾಕ್ರೋಶ..! ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವಂತೆ ಪ್ರತಿಭಟನೆ

ಗೂನಡ್ಕ: ಹಟ್ಟಿಯಿಂದ ತುಂಬಿದ ಗಬ್ಬದ ಹಸುಗಳನ್ನು ಕದ್ದಿದ್ದ ಗೋ ಕಳ್ಳರು ಕೇರಳದಲ್ಲಿ ಅರೆಸ್ಟ್..! ಸುಳ್ಯ ಪೊಲೀಸರ ಭರ್ಜರಿ ಕಾರ್ಯಾಚರಣೆ

ಬಸ್ ಮೆಟ್ಟಿಲಿಗೆ ನಮಸ್ಕರಿಸಿ ಉಚಿತ ಬಸ್ ಪ್ರಯಾಣ ಆರಂಭಿಸಿದ ಅಜ್ಜಿ ..! ಈ ಬಗ್ಗೆ ಸಿಎಂ ಮಾಡಿದ ಟ್ವೀಟ್ ವೈರಲ್ ಆಗಿದ್ದೇಕೆ?