ಕೊಡಗು

ಮಡಿಕೇರಿ: ಮಾ.18 ಕ್ಕೆ ಉದ್ಯೋಗ ಮೇಳ

ಮಡಿಕೇರಿ: ಕೊಡಗು, ದಕ್ಷಿಣ ಕನ್ನಡ ಗಡಿ ಜಿಲ್ಲೆಗಳಲ್ಲಿರುವ ವಿದ್ಯಾವಂತ ಯುವಕರಿಗೆ ಸುವರ್ಣಾವಕಾಶವೊಂದು ತೆರೆದುಕೊಂಡಿದೆ. ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಮಾ.18 ಕ್ಕೆ ಮಡಿಕೇರಿಯಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ಆಸಕ್ತರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಕೋರಲಾಗಿದೆ.

ರಾಣಿ ಮದ್ರಾಸ್ ಮೈಸೂರು, ಕ್ಲಬ್ ಮಹೀಂದ್ರಾ ಮಡಿಕೇರಿ, ಹಿಮತ್ಸಿಂಕಾ ಲೈನ್ಸ್ ಹಾಸನ, ಹ್ಯುಂಡೈ ಮಡಿಕೇರಿ, ಮಾಂಡೋವಿ ಮೋಟರ್ಸ್ ಜಸ್ಟ್ ಡಯಲ್ ಬೆಂಗಳೂರು, ಗ್ರಾಸ್ ರೂಟ್ಸ್ ಮೈಸೂರು ತಮ್ಮ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ಧೆಗಳಿಗೆ ನೇಮಕಾತಿ ನಡೆಸಿಕೊಳ್ಳಲಿದ್ದಾರೆ.

ಎಸ್‌ಎಸ್‌ಎಲ್‌ ಸಿ , ಪಿಯುಸಿ, ಐಟಿಐ, ಡಿಪ್ಲೋಮಾ, ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರುವ ವಿದ್ಯಾರ್ಥಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ.

ಅಭ್ಯರ್ಥಿಗಳು ವಿದ್ಯಾರ್ಹತೆಯ ಮೂಲ ದಾಖಲಾತಿಗಳು, ಅನುಭವ ಪ್ರಮಾಣ ಪತ್ರ (ಇದ್ದಲ್ಲಿ ಮಾತ್ರ), ಸ್ವ ವಿವರ ಇರುವ ಪ್ರತಿಯೊಂದಿಗೆ ಉದ್ಯೋಗ ಮೇಳದಲ್ಲಿ ಹಾಜರಾಗಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಉಮಾ ತಿಳಿಸಿದ್ದಾರೆ.

Related posts

ಮಡಿಕೇರಿ:ಕೊಡಗಿನ ಕಣಿವೆ ಗ್ರಾಮಕ್ಕೂ ಬಂದಿದ್ದರೇ ಪ್ರಭು ಶ್ರೀರಾಮ ಚಂದ್ರ..?!ಮರಳಿನ ಲಿಂಗ ಪ್ರತಿಷ್ಠಾಪಿಸಿದ್ದೇಕೆ?ಈ ಲಿಂಗ ಈಗಲೂ ಇದೆಯೇ?

ಮಡಿಕೇರಿ: ಕಾರಿನೊಳಗೆ ವೈದ್ಯನ ಶವ ಪತ್ತೆ ಪ್ರಕರಣ;ಭ್ರೂಣ‌ ಹತ್ಯೆ ತನಿಖೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡರೇ? ಏನಿದು ಘಟನೆ?

ಸುಳ್ಯದ ದೋಸ್ತ್ ವಾಹನಕ್ಕೆ ಕಾರು ಡಿಕ್ಕಿ,ಮಡಿಕೇರಿಯಲ್ಲಿ ನಡೆದ ಘಟನೆ,ಒಬ್ಬರಿಗೆ ಗಾಯ